ಬಿಗ್ಬಾಸ್ ಶೋನ ನಂತರ ಭುವನ್ ಭಾರೀ ಸದ್ದು ಮಾಡುತ್ತಿರೋದು ರಾಂಧವ ಚಿತ್ರದ ಮೂಲಕ. ಈ ಸಿನಿಮಾದಿಂದಲೇ ನೆಲೆನಿಲ್ಲೋ ಕನಸು ಹೊಂದಿರೋ ಭುವನ್ ಇಂದು ಹುಟ್ಟಿದ ಹಬ್ಬದ ಸಂಭ್ರಮದಲ್ಲಿದ್ದಾರೆ. ಭುವನ್ ಸಂಭ್ರಮದ ಭಾಗವಾಗಿರೋ ರಾಂಧವ ಚಿತ್ರತಂಡ ನಾಳೆ ಸರಿಯಾದೊಂದು ಗಿಫ್ಟು ಕೊಡಲು ನಿರ್ಧರಿಸಿದೆ!
ಆ ಗಿಫ್ಟು ರಾಂಧವ ಚಿತ್ರದ ಟ್ರೈಲರ್ ರೂಪದಲ್ಲಿರಲಿದೆ. ಭುವನ್ ಬರ್ತಡೇ ಸಂಭ್ರಮದ ನೆಪದಲ್ಲಿಯೇ ಈ ಟ್ರೈಲರ್ ಅನ್ನು ಬಿಡುಗಡೆ ಮಾಡಲು ರಾಂಧವ ಚಿತ್ರತಂಡ ಮುಂದಾಗಿದೆ. ಸುಕೃತಿ ಚಿತ್ರಾಲಯ ಬ್ಯಾನರ್ನಡಿಯಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಸುನೀಲ್ ಎಸ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ.
ರಾಂಧವ ಎಂಬುದು ಶೀರ್ಷಿಗೆ ತಕ್ಕುದಾದ ಖದರ್ ಅನ್ನೇ ಕಥೆಯಾಗಿಸಿಕೊಂಡಿರೋ ಸಿನಿಮಾ. ಬಿಗ್ ಬಾಸ್ ಶೋನಿಂದ ಹೊರ ಬಂದ ಮೇಲೆ ಬರೀ ಲವ್ ಸ್ಟೋರಿಗಳನ್ನು ಹಿಡಿದು ಬರುವವರಿಂದ ಭುವನ್ ಕಂಗಾಲಾಗಿದ್ದರಂತೆ. ಆ ಘಳಿಗೆಯಲ್ಲಿ ಸುನೀಲ್ ಹೇಳಿದ ರಾಂಧವ ಕಥೆಯನ್ನು ಥ್ರಿಲ್ ಆಗಿಯೇ ಅವರು ಒಪ್ಪಿಕೊಂಡಿದ್ದರು. ಈ ಕಾರಣದಿಂದಲೇ ಭುವನ್ ಪಾಲಿಗೆ ಈ ಬರ್ತಡೆ ವಿಶೇಷವಾಗಿದೆ. ಅದನ್ನು ಮತ್ತಷ್ಟು ಮಿರುಗಿಸುವ ನಿಟ್ಟಿನಲ್ಲಿ ನಾಳೆ ರಾಂಧವ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.
#
No Comment! Be the first one.