“ಕಜ್ಜಿ ನಾಯಿ, ಯಾರ ಬಗ್ಗೆ ಮಾತಾಡಿದೀಯ ಗೊತ್ತೇನೋ? ನಾವು ಪೂಜೆ ಮಾಡೋ, ನಮ್ಮ ವಿಷ್ಣು ಅಪ್ಪಾಜಿಯ ಬಗ್ಗೆ. ಅವರಿಗಿರುವ ಇನ್ನೊಂದು ಹೆಸರು ಗೊತ್ತಾ? ಸಾಹಸ ಸಿಂಹ… ಆ ಸಿಂಹದ ಮರಿಗಳು ಇನ್ನೂ ಕೋಟ್ಯಾಂತರ ಜನ ಕರ್ನಾಟಕದಲ್ಲಿದ್ದೀವಿ. ಕ್ಷಮೆ ಕೇಳಿದರೆ ಒಳ್ಳೇದು, ಇಲ್ಲದಿದ್ದಲ್ಲಿ ನೀನು ಕರ್ನಾಟದಕ್ಕೆ ಬಂದರೆ ನಿನ್ನನ್ನು ಬಗೆಯೋದು ಶತಸಿದ್ದ”
ಹೈವೇ ರಸ್ತೆಯಲ್ಲಿ ಬಸ್ಸು, ಲಾರಿ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾದ ನಾಯಿ ಹೆಣದಂತಿದ್ದಾನೆ ತೆಲುಗು ನಟ ವಿಜಯ್ ರಂಗರಾಜು. ಈ ಪೀಡೆಗೆ ಅದೇನು ನವೆಯಾಯಿತೋ? ಸುಖಾಸುಮ್ಮನೆ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಬಗ್ಗೆ ಇಲ್ಲಸಲ್ಲದ ಮಾತಾಡಿಬಿಟ್ಟಿದ್ದಾನೆ. ಇದರಿಂದ ವಿಷ್ಣು ಅಭಿಮಾನಿಗಳು ಮಾತ್ರವಲ್ಲ, ಇಡೀ ಕನ್ನಡ ಚಿತ್ರರಂಗ ರೊಚ್ಚಿಗೆದ್ದಿದೆ.
ಜಗ್ಗೇಶ್, ಸುದೀಪ, ಪುನೀತ್, ರವಿಶಂಕರ್, ದುನಿಯಾ ವಿಜಯ್.. ಒಬ್ಬರಾ ಇಬ್ಬರಾ? ಬಹುತೇಕ ಎಲ್ಲ ಹೀರೋಗಳು, ಕಲಾವಿದರು ದೊಂಗರಾಜು ವಿರುದ್ಧ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ವಿಷ್ಣುವರ್ಧನ್ ನಟನೆಯ ಸಿರಿವಂತ ಸಿನಿಮಾದಲ್ಲಿ ಅವರ ಮಗನ ಪಾತ್ರದಲ್ಲಿ ನಟಿಸಿದ್ದವರು ಭುವನ್ ಚಂದ್ರ. ಕಿಡಿ ಸಿನಿಮಾದ ಮೂಲಕ ಹೀರೋ ಆಗಿ, ಸದ್ಯ ನಾಲ್ಕಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಭುವನ್ ಚಂದ್ರ ಪರ್ಸನಲ್ಲಾಗಿ ವಿಷ್ಣು ಅವರ ಆಪ್ತರಾಗಿದ್ದರು. ವಿಷ್ಣು ಅವರ ಜೊತೆ ನಟಿಸಿದ್ದು, ಅವರ ಪ್ರೀತಿ ಗಳಿಸಿದ್ದರ ಹೊರತಾಗಿ ಭುವನ್ ಸಾಹಸಸಿಂಹನ ಪರಮ ಭಕ್ತ. ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಳ್ಳದೇ, ಅವರನ್ನು ಸ್ಮರಿಸದೇ ಯಾವ ಕೆಲಸಕ್ಕೂ ಭುವನ್ ಮುಂದಾಗೋದೇ ಇಲ್ಲ.
ಹೀಗಿರುವಾಗ ವಿಜಯ್ ರಂಗರಾಜನೆನ್ನುವ ಕಾಂಜಿಪಿಂಜಿ ದಾದಾ ಬಗ್ಗೆ ಮಾತಾಡಿರೋದನ್ನು ಭುವನ್ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಆತನಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. “ಕಜ್ಜಿ ನಾಯಿ, ಯಾರ ಬಗ್ಗೆ ಮಾತಾಡಿದೀಯ ಗೊತ್ತೇನೋ? ನಾವು ಪೂಜೆ ಮಾಡೋ, ನಮ್ಮ ವಿಷ್ಣು ಅಪ್ಪಾಜಿಯ ಬಗ್ಗೆ. ಅವರಿಗಿರುವ ಇನ್ನೊಂದು ಹೆಸರು ಗೊತ್ತಾ? ಸಾಹಸ ಸಿಂಹ… ಆ ಸಿಂಹದ ಮರಿಗಳು ಇನ್ನೂ ಕೋಟ್ಯಾಂತರ ಜನ ಕರ್ನಾಟಕದಲ್ಲಿದ್ದೀವಿ. ಕ್ಷಮೆ ಕೇಳಿದರೆ ಒಳ್ಳೇದು, ಇಲ್ಲದಿದ್ದಲ್ಲಿ ನೀನು ಕರ್ನಾಟದಕ್ಕೆ ಬಂದರೆ ನಿನ್ನನ್ನು ಬಗೆಯೋದು ಶತಸಿದ್ದ” ಎಂದಿರುವ ಭುವನ್, ಅದನ್ನು ವಿಡಿಯೋ ಮಾಡಿ ರಂಗರಾಜನಿಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದಾರೆ.
ಎಲ್ಲರಿಂಗೂ ಮಕಾಮಕಾ ಉಗಿಸಿಕೊಳ್ಳುತ್ತಿರುವ, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ದೊಂಗರಾಜುಲು ಇನ್ನಾದರೂ ಕ್ಷಮೆ ಕೇಳಿ ತೆಪ್ಪಗಾದರೆ ನಿಜಕ್ಕೂ ಒಳ್ಳೇದು…