ಭಾರತದಾದ್ಯಂತ ಗಮನಸೆಳೆದ ಕನ್ನಡದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಅವರಿಂದ ಕೆಜಿಎಫ್ ಸದ್ದು ಮಾಡಿದ್ದು ಒಂದು ಕಡೆಯಾದರೆ ಇಡೀ ಸಿನಿಮಾ ರಾರಾಜಿಸಿದ್ದೇ ಚಿತ್ರದ ಮೇಕಿಂಗ್ ಕಾರಣದಿಂದ. ಹೌದು.. ಕಣ್ಣಿಗೆ ಕಟ್ಟುವ ಕೆಜಿಎಫ್ ಸೆಟ್ಟು ಹೆಚ್ಚೆಚ್ಚು ಪ್ರೇಕ್ಷಕರ ಕಣ್ಣು ಕುಕ್ಕುವಂತಿತ್ತು. ಇನ್ನು ಪ್ರತಿ ಫ್ರೇಮಿನ್ನೂ ನಿರ್ದೆಶಕ ನೀಲ್ ಕನಸಿನಂತೆ ಕಟ್ಟಿಕೊಟ್ಟ ಭುವನ್ ಗೌಡ ಅವರಿಗೂ ಪ್ರೇಕ್ಷಕ ಮಹಾಪ್ರಭು ನೂರಕ್ಕೆ ನೂರು ಅಂಕಗಳನ್ನು ನೀಡಿದ್ದರು.

ಕೆಜಿಎಫ್ ಚಿತ್ರಕ್ಕೂ ಮುನ್ನ ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ಭುವನ್ ಗೌಡ ಕೆಜಿಎಫ್ ನ ನಂತರ ಗಾಂಧೀನಗರದ ಕ್ಲಾಸ್ ಕ್ಯಾಮೆರಾಮೆನ್ ಆಗಿ ಹೊರಹೊಮ್ಮಿರೋದು ಹೆಮ್ಮೆಯ ಸಂಗತಿ. ಸದ್ಯ ಬಹುಬೇಡಿಕೆಯಲ್ಲಿರುವ ಭುವನ್ ಗೌಡ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾದಿಂದ ಆಫರ್ ಬಂದಿದೆಯಂತೆ. ಯೆಸ್.. ದರ್ಶನ್ ಅಭಿನಯದ ಮುಂದಿನ ಚಿತ್ರಕ್ಕೆ ಭುವನ್ ಗೌಡ ಅವರನ್ನು ಡಿಓಪಿ ಆಗಿ ಆಯ್ಕೆ ಮಾಡಿದ್ದಾರಂತೆ. ಆದರೆ ಯಾವ ಚಿತ್ರ ಅನ್ನೋದು ಮಾತ್ರ ಸದ್ಯಕ್ಕೆ ಸೀಕ್ರೆಟ್ ಆಗಿ ಉಳಿದಿದೆ.

CG ARUN

ಯುವರತ್ನ ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಮಹತ್ವದ ಪಾತ್ರ!

Previous article

ಟ್ರಂಪ್ ನಾಡಿನಲ್ಲಿ ಉಪ್ಪಿ ಐ ಲವ್ ಯು!

Next article

You may also like

Comments

Leave a reply

Your email address will not be published. Required fields are marked *