ಇತ್ತೀಚೆಗಷ್ಟೇ ಡಿಂಗ್ರಿ ನಾಗರಾಜ್ ಸುಪುತ್ರನಾದ ರಾಜ್ ವರ್ಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ಬಿಚ್ಚುಗತ್ತಿ’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿತ್ತು. ಇದೀಗ ಈ ಚಿತ್ರದ ಎರಡನೆಯ ಭಾಗ ಸದ್ಯದಲ್ಲೇ ಟೇಕ್ ಅಪ್ ಆಗಲಿದೆ. ಬಿಚ್ಚುಗತ್ತಿ ಎರಡು ಪಾರ್ಟ್ ಗಳಾಗಿ ಬರಲಿದೆ ಎಂಬ ಸುಳಿವನ್ನು ಚಿತ್ರತಂಡವೂ ಮೊದಲೇ ತಿಳಿಸಿತ್ತು. ಮೊದಲ ಭಾಗದಲ್ಲಿ ದಳವಾಯಿ ದಂಗೆಯ ಕುರಿತ ಕಥೆಯಿದ್ದು, ನಾಯಕ ದಳವಾಯಿ ಮುದ್ದಣ್ಣ ಸಾವನ್ನಪ್ಪುತ್ತಾನೆ. ಎರಡನೆಯ ಭಾಗದಲ್ಲಿ ಭರಮಣ್ಣನ ಪಾತ್ರವು ಶುರುವಾಗುತ್ತದೆಯಂತೆ. ‘ನಾವು ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಬಂದಿದೆ. ಇದು ಐತಿಹಾಸಿಕ ಕಥೆಯಾಗಿದ್ದರೂ, ಇಲ್ಲಿ ಪಕ್ಕಾ ಕಮರ್ಷಿಯಲ್ ಅಂಶಗಳಿವೆ. ಚಾಪ್ಟರ್ 1 ರಲ್ಲಿ ನಾಲ್ಕು ಹಾಡುಗಳಿವೆ. ಏಳು ಫೈಟ್ಸ್ ಗಳಿವೆ. ಆಯಕ್ಷನ್ ಬಿಟ್ಸ್ ಗಳು ಸೇರಿದರೆ ಒಟ್ಟು 13 ಭರ್ಜರಿ ಫೈಟ್ಸ್ ಇವೆ. ಅವೆಲ್ಲದರ ಜೊತೆಗೆ ಕಥೆಯೂ ಸೇರಿ ಒಟ್ಟು 2.10 ಗಂಟೆ ಅವಧಿಯಲ್ಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ’ ಎಂದು ಚಿತ್ರತಂಡದವರು ಹೇಳುತ್ತಾರೆ.
ಈ ಚಿತ್ರವು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಚಿತ್ರಕತೆ ಬರೆದಿದ್ದಾರೆ. ಹಾಗೆಯೇ ಚಿತ್ರದಲ್ಲಿ ಕೋಳಿಗಳ ಕಾಳಗ ಪ್ರಮುಖ ಹೈಲೈಟ್. ನಾಯಕ ರಾಜವರ್ಧನ್ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಹಾರ್ಸ್ ರೇಡಿಂಗ್, ಕಳಾರಿ ಫೈಟ್, ಕತ್ತಿ ವರಸೆ, ದೊಣ್ಣೆ ವರಸೆ, ಬೆಂಕಿ ದೊಣ್ಣೆ ವರಸೆ ಸೇರಿದಂತೆ ದೇಸಿ ಕಲೆಗಳನ್ನು ಅಭ್ಯಾಸ ಮಾಡಿದ್ದಾರೆ. ಇನ್ನು ಸದ್ಯದಲ್ಲಿಯೇ ಭಾಗ 1 ರ ಟೀಸರ್ ಹೊರ ಬರಲಿದ್ದು. ಚಿತ್ರದಲ್ಲಿನ ದಳವಾಯಿ ಮುದ್ದಣ್ಣ ಪಾತ್ರವನ್ನು ‘ಬಾಹುಬಲಿ’ ಖ್ಯಾತಿಯ ಪ್ರಭಾಕರ್ ಮಾಡಿದ್ದಾರೆ. ಉಳಿದಂತೆ ಸ್ಪರ್ಶ ರೇಖಾ, ಹರಿಪ್ರಿಯಾ, ಶರತ್ ಲೋಹಿತಾಶ್ವ, ಶ್ರೀನಿವಾಸಮೂರ್ತಿ ಇತರರು ನಟಿಸಿದ್ದಾರೆ.
No Comment! Be the first one.