ತಮ್ಮ ನಟನಾ ಚಾತುರ್ಯದಿಂದ ಹಾಗೂ ತೆರೆ ಹಿಂದಿನ ಸೋಶಿಯಲ್ ವರ್ಕ್ ಗಳಿಂದ ಖ್ಯಾತಿ ಗಳಿಸಿರುವ ಬಿಗ್ ಬಿ ಮಗ ಅಭಿಷೇಕ್ ಬಚ್ಚನ್ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ. ಹೌದು ಇತ್ತೀಚಿಗೆ ನಿಧನರಾದ ತಮ್ಮ ಮನೆಯ ಕೆಲಸದವರೊಬ್ಬರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅವರು ವಿಧಿ ವಿಧಾನಗಳನ್ನು ಪಾಲ್ಗೊಂಡಿದ್ದಾರೆ.
ದಶಕದಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಸಿಬ್ಬಂದಿ ಶವವನ್ನು ಅಪ್ಪ ಮಗರಿಬ್ಬರೂ ಇಬ್ಬರೂ ಕೊಂಡೊಯ್ಯುತ್ತಿರುವ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಅವರ ಮಾನವೀಯತೆಗೆ ಹ್ಯಾಟ್ಸ್ ಅಪ್ ಹೇಳುತ್ತಿದ್ದಾರೆ.