ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಗೆಲ್ಲುವ ಸ್ಪರ್ಧಿ ಅಂತಲೇ ಬಿಂಬಿತವಾಗಿದ್ದವರು ಧನ್ ರಾಜ್. ತನ್ನ ಸಹಜ ಮಾತು, ವರ್ತನೆಗಳಿಂದ ಎಲ್ಲರ ಮನಗೆದ್ದಿದ್ದ ಇವರು ಕಡೇಯ ಕ್ಷಣದಲ್ಲಿ ಹಠಾತ್ತನೆ ಎಲಿಮಿನೇಟ್ ಆಗಿದ್ದರು. ಆದರೆ ಹಾಗೆ ಶೋನಿಂದ ಹೊರ ಬಂದರೂ ಜನರ ಮನಸಿಗೆ ಹತ್ತಿರಾಗಿದ್ದ ಧನ್ ರಾಜ್ ಇದೀ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ.
ಶಿವಣ್ಣ ಅಭಿನಯದ ರುಸ್ತುಂ ಚಿತ್ರದಲ್ಲಿ ಅವರ ಗೆಳೆಯನ ಪಾತ್ರದಲ್ಲಿ ಧನ್ ರಾಜ್ ನಟಿಸುತ್ತಿದ್ದಾರೆ. ಇದೂ ಕೂಡಾ ಐಎಎಸ್ ಅಧಿಕಾರಿಯ ಬಹು ಮುಖ್ಯವಾದ ಪಾತ್ರ. ಇದನ್ನು ಧನುಗೆ ಕೊಡೋ ಮೂಲಕ ಶಿವಣ್ಣನೂ ಮಾತುಳಿಸಿಕೊಂಡಿದ್ದಾರೆ. ಶಿವಣ್ಣ ಈ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾಗ ಧನ್ ರಾಜ್ ಅವಕಾಶ ಕೊಡುವಂತೆ ಕೇಳಿದ್ದರು. ಆಗ ಶಿವಣ್ಣ ಅದಕ್ಕೇನು ಒಟ್ಟಿಗೆ ಆಕ್ಟ್ ಮಾಡೋಣ ಅಂದಿದ್ದರು. ಇದೀಗ ಧನ್ ರಾಜ್ ಬಿಗ್ ಬಾಸ್ ಶೋನಿಂದ ಹೊರ ಬಂದಾಕ್ಷಣ ರುಸ್ತುಂ ಚಿತ್ರತಂಡ ಅವರನ್ನ ಸಂಪರ್ಕಿಸಿದೆ. ಸಣ್ಣ ಪುಟ್ಟ ಪಾತ್ರದ ನಿರೀಕ್ಷೆ ಹೊಂದಿದ್ದ ಧನುಗೆ ಅಚ್ಚರಿಯಂಥಾ ಪಾತ್ರವೇ ಸಿಕ್ಕಿದೆ. ನಟನಾಗಬೇಕೆಂಬ ಆಸೆಯಿಂದ, ಅವಕಾಶಗಳ ನಿರೀಕ್ಷೆಯಿಂದ ಬಿಗ್ ಬಾಸ್ ಮನೆ ಸೇರಿಕೊಂಡಿದ್ದ ಧನ್ ರಾಜ್ ಗೀಗ ಅವಕಾಶ ತೆರೆದುಕೊಂಡಿದೆ. ಈತ ರುಸ್ತುಂ ಪಾತ್ರದಿಂದಲೇ ನೆಲೆ ಕಂಡುಕೊಂಡರೂ ಅಚ್ಚರಿಯೇನಿಲ್ಲ!
#
No Comment! Be the first one.