ಪ್ರಯಾಸ ಪಡುತ್ತಿದ್ದಾರೆ. ಎಲ್ಲರ ಮನಸಲ್ಲಿಯೂ ಹಿರಿಯಣ್ಣನನ್ನು ಕಳೆದುಕೊಂಡ ಖಾಲಿತನವೊಂದು ಆವರಿಸಿಕೊಂಡು ಬಿಟ್ಟಿದೆ. ಆದರೆ ಬಿಗ್ಬಾಸ್ ಮನೆಯೊಳಗೆ ಬಂಧಿಯಾಗಿ ತಮ್ಮದೇ ಕಿತ್ತಾಟ, ಕೊಸರಾಟಗಳಲ್ಲಿ ಕಳೆದು ಹೋಗಿರೋ ಸ್ಪರ್ಧಿಗಳ ಪಾಲಿಗೆ ಮಾತ್ರ ಹೊರ ಜಗತ್ತಿನ ಪರಿವೆಯೇ ಇಲ್ಲ. ಈ ಶನಿವಾರದ ಕಡೆಯ ಕ್ಷಣದ ವರೆಗೂ ಅವರ್ಯಾರಿಗೂ ಅಂಬಿ ಇನ್ನಿಲ್ಲವೆಂಬ ಸಣ್ಣ ಸುಳಿವೂ ಇರಲಿಲ್ಲ.
ಆದರೆ ಈ ಶನಿವಾರ ಎಲಿಮಿನೇಷನ್ ಜೊತೆಗೇ ಎಲ್ಲ ಸ್ಪರ್ಧಿಗಳಿಗೂ ಮತ್ತೊಂದು ಅನಿರೀಕ್ಷಿತ ಆಘಾತ ಕಾದಿತ್ತು. ಆನಂದ್ ಮನೆಯಿಂದ ಹೊರ ಬಿದ್ದ ಬಳಿಕ ಏಕಾಏಕಿ ಸ್ಕ್ರೀನಿನ ಮೇಲೆ ಅಂಬಿ ಅಂತಿಮ ದರ್ಶನದ ದೃಷ್ಯಾವಳಿಗಳು ತೆರೆದುಕೊಳ್ಳುತ್ತಲೇ ಸ್ತಬ್ಧರಾದ ಸ್ಪರ್ಧಿಗಳೆಲ್ಲ ಭೋರಿಟ್ಟು ಅತ್ತಿದ್ದಾರೆ.
ಅಂಬರೀಶ್ ಅಂತಿಮ ದರ್ಶನದ ವೇಳೆಯಲ್ಲಿ ಸುದೀಪ್ ಕೂಡಾ ಕಣ್ಣೀರಾಗಿದ್ದರು. ಹಾಗೆ ನೋಡಿದರೆ ಬಿಗ್ಬಾಸ್ ಮನೆ ಮಂದಿಗೆ ಇಂಥಾ ಹೊರ ಜಗತ್ತಿನ ಯಾವ ವಿದ್ಯಮಾನಗಳನ್ನೂ ತಿಳಿಸುವಂತಿಲ್ಲ. ಆದರೆ ಅದನ್ನು ಮೀರಿ ಅಂಬಿ ಇನ್ನಿಲ್ಲವೆಂಬ ವಿಚಾರವನ್ನು ಸುದೀಪ್ ಬಿಗ್ಬಾಸ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ವಾರದ ಪಂಚಾಯ್ತಿಯೆಲ್ಲ ಮುಗಿದ ನಂತರ ಅಂಬರೀಶ್ ಅಂತಿಮ ದರ್ಶನದ ವೀಡಿಯೋವನ್ನು ಮನೆಯೊಳಗೆ ಭಿತ್ತವಾಗುವಂತೆ ಮಾಡೋ ಮೂಲಕ ಬಿಗ್ಬಾಸ್ ಸ್ಪರ್ಧಿಗಳೆಲ್ಲ ಕಂಗಾಲಾಗುವಂಥಾ ವಿಚಾರವೊಂದನ್ನು ಅವರ ಮುಂದೆ ತೆರೆದಿಟ್ಟಿದ್ದಾರೆ.
#
No Comment! Be the first one.