ʻʻಯಾವುದಕ್ಕೂ ಇರಲಿ ಅಂತಾ ಜಗದೀಶ್ ಒಂದು ಬಾಲು ಎಸೆದರು.. ಅದನ್ನು ರಪಕ್ಕಂತಾ ಮಾ.ಮು. ಕ್ಯಾಚು ಹಿಡಿದುಬಿಟ್ಟಿತು… ಇದರ ಹೊರತಾಗಿ ಜಗದೀಶ್ ಬಳಿ ಯಾವುದೇ ವಿಡಿಯೋ ಇದ್ದಂತಿಲ್ಲ.ʼʼ ಅನ್ನೋದು ಜಗದೀಶ್ ಅವರನ್ನು ತೀರಾ ಹತ್ತಿರದಿಂದ ಬಲ್ಲ, ಖ್ಯಾತ ವಕೀಲರೊಬ್ಬರ ಈ ಕ್ಷಣದ ಅಭಿಪ್ರಾಯ.
ಫೈರ್ ಬ್ರಾಂಡ್ ಅಂತಲೇ ಫೇಮಸ್ಸಾಗಿರೋ ವಕೀಲ ಜಗದೀಶ್ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಲಾಯರ್ ಜಗದೀಶ್ ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿಯೊಬ್ಬರ ಖಾಸಗೀ ವಿಡಿಯೋ ಇದೆ ಅಂತಾ ಹೇಳುತ್ತಲೇ ಬಂದಿದ್ದರು. ಅವರು ವಿಡಿಯೋ ಇದೆ ಅಂತಾ ಹೇಳುತ್ತಿದ್ದಂತೇ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದಲ್ಲಿ ಸುದ್ದಿ ಹೊರಬಾರದಂತೆ ಸ್ಟೇ ಕೂಡಾ ತಂದರು. ವಕೀಲ ಜಗದೀಶ್ ಹೇಳುವ ಪ್ರಕಾರ ಆ ಖಾಸಗೀ ವಿಡಿಯೋದಲ್ಲಿ ನಟಿಯೊಬ್ಬಳು ಪಾಲ್ಗೊಂಡಿದ್ದಾಳೆ ಅನ್ನೋ ಮಾಹಿತಿ ಇತ್ತು.
ʻಯಾರಿರಬಹುದು ಆ ನಟಿ?ʼ ಅನ್ನೋದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಕೆಲವು ಮೂಲಗಳು ಅದರಲ್ಲಿ ʻಕನ್ನಡ ಚಲನಚಿತ್ರರಂಗದ ಉದಯೋನ್ಮುಖ ತಾರೆ ರಂಗಮ್ಮ ಇದ್ದಾಳೆʼ ಅಂದವು. ಮತ್ತೊಂದು ಮೂಲ ʻʻನೋ ನೋ… ಮಾ.ಮು. ಜೊತೆ ರಾಮಕ್ಕ ಇರೋದು ಖಚಿತ” ಎನ್ನುತ್ತಿದೆ… ಅಯ್ಯೋ ಆತನ ಕರ್ಮಕಾಂಡ ಒಂದೆರಡಲ್ಲ… ಎಣಿಸಲು ಕಷ್ಟವಾಗುವಷ್ಟಿವೆ.. ಸಿನಿಮಾ ನಟಿಯರು ಮಾತ್ರವಲ್ಲ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಅಂತೆಲ್ಲಾ ಭಯಾನಕ ವಿವರಗಳನ್ನು ಕೂಡಾ ಬಿಚ್ಚಿಡುತ್ತಿದ್ದಾರೆ…
ಈ ಕಡೆ ಎಲ್ಲರ ತೆಲೆ ಹುಳಾ ಬಿಟ್ಟಿರುವ ಜಗದೀಶ್ ಮಾತ್ರ ಹದಿನೈದು ದಿನ ತಡ್ಕಳಿ ಅಂತಾ ಸೀದಾ ಬಿಗ್ ಬಾಸ್ ಮನೆಗೆ ಹೋಗಿ ಕೂತಿದ್ದಾರೆ.
ಜಗದೀಶ್ ಏಕಾ ಏಕಿ ಬಿಗ್ ಬಾಸ್ ಅಂಗಳದಲ್ಲಿ ಕಾಣಿಸಿಕೊಂಡೇಟಿಗೆ, ಒಂದಿಷ್ಟು ಜನ ʻʻಆ ವಯ್ಯನ ಹತ್ರಾ ವಿಡಿಯೋನೂ ಇಲ್ಲ ಮನ್ನಾಂಗಟ್ಟಿನೂ ಇಲ್ಲ… ಬಿಗ್ ಬಾಸ್ ಶೋಗೆ ಹೋಗಲು ಆತ ಸಿಡಿಸಿದ ಗಾಳಿ ತುಂಬಿದ ಬಲೂನಷ್ಟೇ…ʼʼ ಅಂತಲೂ ಮಾತಾಡಿಕೊಳ್ಳುತ್ತಿದ್ದಾರೆ.
ಜಗದೀಶ್ ಬಳಿ ವಿಡಿಯೋ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಾ.ಮು. ಒಂದಿಷ್ಟು ಚೇಷ್ಟೆ ಮಾಡಿ ಸಿಕ್ಕಿಬಿದ್ದಿರೋದನ್ನು ತಳ್ಳಿಹಾಕುವಂತಿಲ್ಲ. ಬನ್ನೇರುಘಟ್ಟ ಬಳಿ ಎಂಟು ಎಕರೆ ಜಮೀನನ್ನು ನಟಿಯೊಬ್ಬಳ ಹೆಸರಿಗೆ ವರ್ಗಾ ಮಾಡಿದ ವಿಚಾರ ಲೀಕ್ ಆಗುತ್ತಿದ್ದಂತೇ ಮಾಮೂಗೆ ನಟಿಯರ ಲಿಂಕ್ ಇದೆ ಅನ್ನೋ ವಿಷಯ ಕೂಡಾ ಜಾಹೀರಾಗಿತ್ತು. ರಾಮಕ್ಕ ಅನ್ನೋ ನಟಿಗೆ ಮಾಮೂ ಕಡೆಯಿಂದ ಮೂರೂವರೆ ಕೋಟಿ ಹಣ ಕೂಡಾ ವರ್ಗಾ ಆಗಿದೆ ಎನ್ನುವ ಮಾತಿದೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಕೆಲವು ರಾಜಕಾರಣಿಗಳಿಂದ ಸಿನಿಮಾ ನಟಿಯರು ಮನಸೋ ಇಚ್ಚೆ ಕಾಸು ಪೀಕಿರೋದಂತೂ ನಿಜ. ಈ ವಿಚಾರದಲ್ಲಿ ಪಕ್ಷ ಬೇಧ ಮರೆತು ʻಪೋಲಿʼಟಿಕಲ್ ಲೀಡರುಗಳು ತಮ್ಮಿಂದಾದ ಸಕಲವನ್ನೂ ಧಾರೆಯೆರೆದಿದ್ದಾರೆ.
ಇವತ್ತು ಕನ್ನಡ ಚಿತ್ರರಂಗದಲ್ಲಿ ಯಾರೆಲ್ಲಾ ನಟಿಯರು ಅಪಾರ ಆಸ್ತಿ ಮಾಡಿಕೊಂಡು ದಿವಿನಾಗಿದ್ದಾರೋ, ಅವರ ಪಟ್ಟಿ ಮಾಡಿ. ತಮ್ಮ ಜೀವಮಾನದಲ್ಲಿ ಆ ನಟಿಯರು ಸಿನಿಮಾ, ಜಾಹೀರಾತು ಸೇರಿದಂತೆ ಸ್ವಂತ ದುಡಿಮೆಯಿಂದ ದುಡಿದದ್ದೆಷ್ಟು? ಸಿನಿಮಾಗಳಿಗೆ ಪಡೆದ ಸಂಭಾವನೆ ಎಷ್ಟೆಷ್ಟು? ಅಂತಾ ಲೆಕ್ಕ ಮಾಡಿ. ಅದರಲ್ಲಿ ಅವರ ಖರ್ಚು ವೆಚ್ಚಗಳನ್ನು ಕಳೆಯಿರಿ. ಆಗ ಇವರಿಗೆ ಅನಾಮತ್ತಾಗಿ ಹಣ ಎಲ್ಲಿಂದ ಬಂತು ಅನ್ನೋದರ ಕರಾರುವಕ್ಕು ಲೆಕ್ಕ ಸಿಕ್ಕಿಬಿಡುತ್ತದೆ. ಇನ್ನು ಕೆಲವು ನಟಿಯರಿದ್ದಾರೆ ಇವರು ಸಿನಿಮಾದಲ್ಲಿ ನಟನೆ ಮಾಡಿ ವರ್ಷಗಳೇ ಕಳೆದಿವೆ. ಮಾಡಿದ ಮೂರು ಮತ್ತೊಂದು ಚಿತ್ರಗಳಲ್ಲಿ ಪಡೆದ ಕಾಸು ಅಷ್ಟಕ್ಕಷ್ಟೇ. ಆದರೆ ರಾಜರಾಜೇಶ್ವರಿ ನಗರದಂಥಾ ಏರಿಯಾದಲ್ಲಿ ಎರಡೆರಡು ಫ್ಲಾಟು, ಬಂಗಲೆ, ಐಶಾರಾಮಿ ಕಾರುಗಳೆಲ್ಲಾ ಇವರ ಪ್ರಾಪರ್ಟಿ ಲಿಸ್ಟಿನಲ್ಲಿರುತ್ತವೆ. ಇವೆಲ್ಲಾ ಹೇಗೆ ಬರಲು ಸಾಧ್ಯ? ಯಾರ ಕಾರುಣ್ಯದಿಂದ ದಕ್ಕಿದ್ದೋ? ಅವರೇ ಹೇಳಬೇಕು!
ಇಷ್ಟಕ್ಕೂ ಲಾಯರ್ ಜಗದೀಶ್ ಬಳಿ ವಿಡಿಯೋ ಇರಬಹುದಾ?
ನಿಜ. ಜಗದೀಶ್ ಯಾವುದೇ ವಿಚಾರವನ್ನು ನೇರಾನೇರವಾಗಿ ಮಾತಾಡುತ್ತಾರೆ. ತಪ್ಪು ಮಾಡಿದವನು ಎಷ್ಟು ದೊಡ್ಡ ಪುಡುಂಗಿಯಾದರೂ ಹೆದರದೇ ಬೀದಿಗೆಳೆಯುತ್ತಾರೆ… ಲೇವಡಿ ಮಾಡುತ್ತಾರೆ. ಆ ಮೂಲಕವೇ ಜನಸಾಮಾನ್ಯರ ಕಣ್ಣಿನಲ್ಲಿ ಹೀರೋ ಕೂಡಾ ಆಗಿದ್ದಾರೆ. ಕಾಂಟ್ರವರ್ಸಿಗಳ ಹೊರತಾಗಿಯೂ ಜಗದೀಶ್ ಪಬ್ಲಿಕ್ಕಿಗೆ ಕಾನೂನಿನ ಪಾಠ ಮಾಡಿದ್ದಾರೆ; ಅಶಕ್ತರಿಗೆ ಧೈರ್ಯ ತುಂಬಿದ್ದಾರೆ. ಆದರೆ…. ಆದರೆ….. ಈ ವಿಡಿಯೋ ವಿಚಾರದಲ್ಲಿ ಯಾಕೆ ಬರೀ ಗಾಳಿಯಲಿ ಗುಂಡು ಹಾರಿಸುವ ಪ್ರಯತ್ನ ಮಾಡಿದರು? ಈಗ ಬಿಡ್ತೀನಿ… ಆಗ ಬಿಡ್ತೀನಿ ಅಂತಾ ಕಾಲಹರಣ ಮಾಡಿದರು. ಒಂದುವೇಳೆ ಇವರ ಬಳಿ ಮಾ.ಮು.ಗೆ ಸಂಬಂಧಿಸಿದ ಅಂಥಾ ಅಶ್ಲೀಲ, ಅಕ್ಷಮ್ಯ ವಿಡಿಯೋ ಇದ್ದಿದ್ದೇ ಆದಲ್ಲಿ ಅದನ್ನು ಮೀಡಿಯಾದವರಿಗೆ ಕೊಡಬಹುದಿತ್ತು ಅಥವಾ ಕಾನೂನಿಗೆ ವ್ಯಾಪ್ತಿಗಾದರೂ ಒಪ್ಪಿಸಬಹುದಿತ್ತು. ʼನನ್ನ ಬಳಿ ವಿಡಿಯೋ ಇದೆʼ ಅಂತಾ ಹೇಳಿಕೊಂಡು ಬೇರೆಯವರ ಹಾಗೆ ಇವರೂ ವ್ಯಾಪಾರ, ವ್ಯವಹಾರಕ್ಕಿಳಿದರಾ? ಅಥವಾ ಎಷ್ಟು ದಿನ ಆಗತ್ತೋ ಅಷ್ಟು ದಿನ ಎಳೆದಾಡಿಕೊಂಡು ಪಬ್ಲಿಸಿಟಿ ತಗೊಳ್ಳೋಣ ಅಂತಾ ಸುಮ್ಮನಾದರಾ? ಮೊನ್ನೆ ದಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ ಅವರ ಮುಂದೆ ಸ್ವತಃ ಜಗದೀಶ್ ಹೇಳಿಕೊಂಡಂತೆ ನನ್ನ ಹಿಂದೆ ಇನ್ನೂ ಸಾಕಷ್ಟು ಜನ ಇದ್ದಾರೆ… ನನ್ನ ಜೊತೆಗೆ ದೊಡ್ಡ ಪಡೆಯೇ ಇದೆ ಅಂತಾ ಹೇಳಿದರಲ್ಲಾ? ಹಾಗಿದ್ದರೆ ಬಾಯಲ್ಲಿ ಹೇಳುತ್ತಿರುವ ವಿಚಾರವನ್ನು ಆಧಾರಸಮೇತ ಜಾಹೀರು ಮಾಡಲು ಯಾಕೆ ಮೀನ ಮೇಷ ಎಣಿಸುತ್ತಿದ್ದಾರೆ?
ʻʻಯಾವುದಕ್ಕೂ ಇರಲಿ ಅಂತಾ ಜಗದೀಶ್ ಒಂದು ಬಾಲು ಎಸೆದರು.. ಅದನ್ನು ರಪಕ್ಕಂತಾ ಮಾ.ಮು. ಕ್ಯಾಚು ಹಿಡಿದುಬಿಟ್ಟಿತು… ಇದರ ಹೊರತಾಗಿ ಜಗದೀಶ್ ಬಳಿ ಯಾವುದೇ ವಿಡಿಯೋ ಇದ್ದಂತಿಲ್ಲ.ʼʼ ಅನ್ನೋದು ಜಗದೀಶ್ ಅವರನ್ನು ತೀರಾ ಹತ್ತಿರದಿಂದ ಬಲ್ಲ, ಖ್ಯಾತ ವಕೀಲರೊಬ್ಬರ ಈ ಕ್ಷಣದ ಅಭಿಪ್ರಾಯ.
ವಕೀಲ್ ಸಾಬ್ ಯಾವುದರ ಬಗ್ಗೆಯೂ ಕ್ಲಾರಿಟಿ ಕೊಡದೇ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡುತ್ತಿರೋದು ಸದ್ಯ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ… ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಬಂದಮೇಲಷ್ಟೇ ಮಿಕ್ಕ ವಿಚಾರಗಳು ಸ್ಪಷ್ಟವಾಗೋದು!
No Comment! Be the first one.