ಮೇಲ್ನೋಟಕ್ಕೆ ಯಾರನ್ನೂ ಜಡ್ಜ್ ಮಾಡಲು ಸಾಧ್ಯವಿಲ್ಲ. ನೋಡಲು ಸಾಚಾಗಳಂತೆ ಕಾಣುವವರು ಒಳಗೆ ಖರ್ನಾಕ್ ಕಳಾಗಿರುತ್ತಾರೆ. ಆಂತರ್ಯದಲ್ಲಿ ಸಭ್ಯರೂ, ಮುಗ್ದರೂ ಆಗಿರುವವರು ಹೊರಜಗತ್ತಿಗೆ ಬೇರೆಯದ್ದೇ ರೀತಿಯಲ್ಲಿ ಪ್ರೊಜೆಕ್ಟ್ ಆಗಿರುತ್ತಾರೆ ಅನ್ನೋದು ಈಗ ಬಿಗ್ ಬಾಸ್ ಮೂಲಕವೂ ಜಾಹೀರಾಗುತ್ತಿದೆ.
ಈ ಸಲದ ಬಿಗ್ ಬಾಸ್ ಕುರಿತು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗತೊಡಗಿದೆ. ಕೊರೋನಾ ಲಾಕ್ ಡೌನ್ ಕಾರಣಕ್ಕೆ ಹಠಾತ್ ಬ್ರೇಕ್ ನೀಡಿದಾಗ ʻಬಿಗ್ ಬಾಸ್ ಕತೆ ಮುಗೀತುʼ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಸುದೀರ್ಘ ಬ್ರೇಕ್ ನಂತರ ಮತ್ತೆ ಬಿಗ್ ಬಾಸ್ ಮುಂದುವರೆಯಿತು. ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ , ಮಂಜ – ಇಷ್ಟು ಜನರಲ್ಲಿ ಚಂದ್ರಚೂಡ್ ಅಥವಾ ಸಂಬರಗಿ ಫೈನಲ್ ಹಂತಕ್ಕೆ ಬರುತ್ತಾರೆ ಅನ್ನೋ ಅಂದಾಜಿತ್ತು. ಜನ ಅಂದುಕೊಂಡಿದ್ದನ್ನು ಬುಡಮೇಲು ಮಾಡೋದನ್ನೇ ಮೊದಲಿನಿಂದಲೂ ತಂತ್ರವನ್ನಾಗಿಸಿಕೊಂಡಿರುವ ಬಿಗ್ ಬಾಸ್ ಶೋ ಈ ಬಾರಿಯೂ ಅದನ್ನೇ ಮಾಡಿದೆ. ಅಂತಿಮ ಹಂತದ ನತಕ ಬಂದು ನಿಲ್ಲುವ ಭರವಸೆ ಮೂಡಿಸಿದ್ದ ಚಕ್ರವರ್ತಿ ಚಂದ್ರಚೂಡ್ ರನ್ನು ಹೊರಕ್ಕೆ ತಂದುಬಿಟ್ಟಿದೆ!
ಸದ್ಯ ಇರುವ ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಆಟದಲ್ಲಿ ಒಂದು ವಿರಾಮ ಸಿಕ್ಕಿದ್ದರಿಂದಲೋ ಏನೋ ಸ್ಪರ್ಧಿಗಳು ಒಳಗೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ಪ್ಲಾನು ಮಾಡಿಕೊಂಡು ರೀ ಎಂಟ್ರಿ ಕೊಟ್ಟಂತೆ ಕಾಣುತ್ತಿದೆ. ಪ್ರತಿಯೊಬ್ಬರೂ ಗೆಲ್ಲುವುದು ಹೇಗೆ ಅನ್ನೋದನ್ನೇ ಲೆಕ್ಕಾಚಾರವಾಗಿಟ್ಟುಕೊಂಡು ದಿನಕಳೆಯುತ್ತಿದ್ದಾರೆ.
ಪ್ರಶಾಂತ್ ಸಂಬರಗಿ ಅವರ ಬಗ್ಗೆ ಒಂದಿಷ್ಟು ಕಲ್ಪನೆಗಳಿದ್ದವು. ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ, ವಿವಾದಗಳ ಸುತ್ತ ಸುಳಿದಾಡುತ್ತಿದ್ದ ಸಂಬರಗಿ ಪ್ರಚಾಪ್ರಿಯಾನಾ? ಬಿಗ್ ಬಾಸ್ ಶೋ ಮೂಲಕ ಜನಪ್ರಿಯತೆ ಪಡೆಯಲು ಬಂದಿದ್ದಾರಾ ಅಂತೆಲ್ಲಾ ಅನ್ನಿಸಿದ್ದು ನಿಜ. ಆದರೆ, ಅವೆಲ್ಲಾ ತಪ್ಪು ಅಂತಾ ಬಿಗ್ ಬಾಸ್ ವೀಕ್ಷಿಸುತ್ತಿರುವ ಯಾರಿಗಾದರೂ ಅನ್ನಿಸುವಂತಿದೆ ಸದ್ಯದ ಪರಿಸ್ಥಿತಿ.
ಜನರನ್ನು ಸೆಳೆಯುವುದನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡಿರುವ ಇತರೆ ಸ್ಪರ್ಧಿಗಳು ಕಿಲಾಡಿ, ಕಪಟಗಳ ಆಟ ಕಟ್ಟುತ್ತಿದ್ದರೆ, ಪ್ರಶಾಂತ್ ಸಂಬರಗಿ ತಮ್ಮ ನೇರ ನಡೆ, ನುಡಿಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆ ಮೂಲಕ ಜನರಲ್ಲಿದ್ದ ಒಂದಿಷ್ಟು ತಪ್ಪು ಕಲ್ಪನೆಗಳಿಂದ ಮುಕ್ತರಾಗಿದ್ದಾರೆ.
ಮೇಲ್ನೋಟಕ್ಕೆ ಯಾರನ್ನೂ ಜಡ್ಜ್ ಮಾಡಲು ಸಾಧ್ಯವಿಲ್ಲ. ನೋಡಲು ಸಾಚಾಗಳಂತೆ ಕಾಣುವವರು ಒಳಗೆ ಖರ್ನಾಕ್ ಕಳಾಗಿರುತ್ತಾರೆ. ಆಂತರ್ಯದಲ್ಲಿ ಸಭ್ಯರೂ, ಮುಗ್ದರೂ ಆಗಿರುವವರು ಹೊರಜಗತ್ತಿಗೆ ಬೇರೆಯದ್ದೇ ರೀತಿಯಲ್ಲಿ ಪ್ರೊಜೆಕ್ಟ್ ಆಗಿರುತ್ತಾರೆ ಅನ್ನೋದು ಈಗ ಬಿಗ್ ಬಾಸ್ ಮೂಲಕವೂ ಜಾಹೀರಾಗುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ ಈ ಸೀಸನ್ನಿನ ಬಿಗ್ ಬಾಸ್ ಸ್ಪರ್ಧೆಯಲ್ಲಿ ಜನ ಪ್ರಶಾಂತ್ ಸಂಬರಗಿಯನ್ನು ಗೆಲ್ಲಿಸುವ ಸಾಧ್ಯತೆ ಹೆಚ್ಚಿದೆ!
No Comment! Be the first one.