ತಮಿಳಿನ ದಳಪತಿ ವಿಜಯ್​​ ನಟನೆಯ ಬಹುನಿರೀಕ್ಷಿತ ಸಿನಿಮಾ ಬಿಗಿಲ್​ ಚಿತ್ರದ ‘ಸಿಂಗಪೆನ್ನೆ’ ಹಾಡು ಯೂಟ್ಯೂಬ್​ನಲ್ಲಿ ರಿಲೀಸ್ ಆಗಿದೆ. ಬಿಡುಗಡೆಯಾದ 43 ನಿಮಿಷದಲ್ಲಿ 4 ಲಕ್ಷ ಹಿಟ್ಸ್ ಸಹ ಪಡೆದುಕೊಂಡಿದೆ.ಸಿಂಗಪೆನ್ನೆ ಹಾಡು ಬಿಗಿಲ್​ ಚಿತ್ರದ ಮೋಟಿವೇಷನಲ್​ ಸಾಂಗ್​ ಆಗಿದ್ದು, ವಿವೇಕ್​ ಈ ಹಾಡನ್ನು ಬರೆದಿದ್ದಾರೆ. ಬಾಲಿವುಡ್​ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​​ ರೆಹಮಾನ್ ಕಂಠದಿಂದ ಈ ಹಾಡು ಮೂಡಿ ಬಂದಿದ್ದು, ಅವರೇ​ ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ​.

ಟಾಲಿವುಡ್​ ಅಂಗಳದಲ್ಲಿ ರಾಜರಾಣಿ, ಮರ್ಸಲ್​ ಮುಂತಾದ ಸಕ್ಸಸ್​ ಚಿತ್ರಗಳನ್ನು ನೀಡಿದ ಅಟ್ಲಿ ಕುಮಾರ್​ ಬಿಗಿಲ್​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಬಿಗಿಲ್​​​ ಚಿತ್ರ ತಂಡ ‘ಸಿಂಗಪೆನ್ನೆ’ ಹಾಡನ್ನು ರಿಲೀಸ್​ ಮಾಡುವ ಯೋಜನೆ ಹಾಕಿಕೊಂಡಿತ್ತು. ಆದರೆ ಅಚಾತುರ್ಯದಿಂದ ಬಿಡುಗಡೆಗೆ ಮುನ್ನವೇ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿಹೋಗಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಆ ಲಿಂಕ್ ಅಳಿಸಿ ಅಧಿಕೃತವಾಗಿ ಹಾಡನ್ನು ರಿಲೀಸ್ ಮಾಡಿಕೊಂಡಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕುರುಕ್ಷೇತ್ರದ ಮತ್ತೊಂದು ಟ್ರೇಲರ್ ರಿಲೀಸ್!

Previous article

ತಾತನ ಕ್ರಿಕೆಟ್ ಹಾದಿಯಲ್ಲಿ ಮೊಮ್ಮಗ ಇಬ್ರಾಹಿಂ ಅಲಿ ಖಾನ್!

Next article

You may also like

Comments

Leave a reply

Your email address will not be published. Required fields are marked *