ಬಿಲ್’ಗೇಟ್ಸ್ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈಗ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿರುವ ಬಿಲ್’ಗೇಟ್ಸ್ ಟ್ರೇಲರ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುತ್ತಿದೆ.  ಬಿಲ್’ಗೇಟ್ಸ್ ಪರಿಪೂರ್ಣ ಮನರಂಜನಾ ಚಿತ್ರ ಅನ್ನೋದು ಟ್ರೇಲರಿನಲ್ಲೇ ಗೊತ್ತಾಗುತ್ತಿದೆ. ಇದು ಕಾಮಿಡಿ, ಸೆಂಟಿಮೆಂಟ್, ಹಾರರ್ ಮತ್ತು ಫ್ಯಾಂಟಸಿ ಸೇರಿದಂತೆ ಹಲವಾರು ಪ್ರಕಾರಗಳನ್ನು ಒಳಗೊಂಡಿರುವ ಚಿತ್ರವಾಗಿದೆ. ಥಿಯೇಟರಿನಲ್ಲಿ ಕುಳಿತ ಜನ ಎದ್ದುಬರೋತನಕ ನಗುತ್ತಲೇ ಇರಬೇಕು ಅನ್ನೋದನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ ಅನ್ನೋದು ಟ್ರೇಲರು ನೋಡಿದ ಯಾರಿಗಾದರೂ ಅನ್ನಿಸದೇ ಇರಲಾರದು.

ಬೃಹತ್ ಸೆಟ್ಟುಗಳು, ಅದ್ಭುತವಾದ ಗ್ರಾಫಿಕ್ಸು, ಎಲ್ಲವನ್ನೂ ಒಳಗೊಂಡಿರುವ ಬಿಲ್’ಗೇಟ್ಸ್ ಚಿತ್ರದಲ್ಲಿ ಕಲಾತ್ಮಕ ಕುಸುರಿ ಎದ್ದುಕಾಣುತ್ತಿದೆ. ನಿರ್ದೇಶಕ ಶ್ರೀನಿವಾಸ ಸಾಕಷ್ಟು ಕನಸಿಟ್ಟು ಈ ಚಿತ್ರವನ್ನು ರೂಪಿಸಿದ್ದಾರೆ. ಪ್ರತಿಯೊಂದೂ ಹೀಗೇ ಬರಬೇಕು ಅಂತಾ ಹಠ ಹಿಡಿದು, ತಾವಂದುಕೊಂಡಂತೆ ಬರುವ ತನಕ ಬಿಡದೆ ಸಿನಿಮಾವನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಕಟ್ಟಿದ್ದಾರೆ. ಇದೆಲ್ಲದರ ಪ್ರತಿಫಲವಾಗಿ ಈಗ ಬಿಡುಗಡೆಯಾಗಿರುವ ಟ್ರೇಲರು ಎಲ್ಲರ ಗಮನ ಸೆಳೆಯುತ್ತಿದೆ.

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಶ್ರೀನಿವಾಸ ಸಿ. ನಿರ್ದೇಶನ ಮಾಡಿದ್ದಾರೆ. ವಸಂತ್ ಕುಮಾರ್ ಬಿ.ಎಂ., ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್, ಸತ್ಯನಾರಾಯಣ ಎಸ್., ಗಿರೀಶ್ ಬಿ.ಎನ್, ಡಾ. ರಾಧೇಶ್ ಕೆ.ಆರ್., ರಂಗಸ್ವಾಮಿ ಎಂ.ಎ., ಸಿಮೆಂಟ್ ರಾಮಚಂದ್ರ, ಎಲ್ ಆದಿನಾರಾಯಣ ರಮೇಶ್, ಮುನಿಕೃಷ್ಣ, ಎಂ.ವಿ., ಹೆಚ್.ಸಿ.ಕುಮಾರಸ್ವಾಮಿ (ಹಂಚ್ಯಾ), ಕುಮಾರ್ ಬಿ.ಕೆ., ಎನ್.ಎಲ್. ಶಿವಶಂಕರ್, ಅನನ್ಯ, ವಿನಮ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿಕ್ಕಣ್ಣ ಮತ್ತು ಶಿಶಿರ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ರೋಜಾ ಮತ್ತು ಅಕ್ಷರಾ ರೆಡ್ಡಿ ನಾಯಕಿಯರು.

ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತ, ಪಿ. ಮರಿಸ್ವಾಮಿ ಸಂಕಲನ ಈ ಚಿತ್ರಕ್ಕಿದೆ.

CG ARUN

ಕಾರು-ಚಿನ್ನ ಯಾರ ಪಾಲಾಗಲಿದೆಯೋ?

Previous article

You may also like

Comments

Leave a reply

Your email address will not be published. Required fields are marked *