ರಾಜೇಶ್ ಭಾಟಿಯಾ ಹಾಗೂ ಕಿರಣ್ ಝವೇರಿ ನಿರ್ಮಾಣ ಮಾಡುತ್ತಿರುವ ಬೋಲೆ ಚೂಡಿಯಾ ಚಿತ್ರದಲ್ಲಿ ನವಾಜುದ್ದೀನ್ ಸಿದ್ಧಿಕಿ ಹಾಗೂ ಮೌನಿ ರಾಯ್ ಈ ಮೊದಲು ನಟಿಸುವುದು ನಿಕ್ಕಿಯಾಗಿತ್ತು. ಆದರೆ ವೃತ್ತಿಪರತೆಯ ಕೊರತೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ರಾಜೇಶ್ ಭಾಟಿಯಾ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಮೌನಿ ರಾಯ್ ಚಿತ್ರದಿಂದ ಹೊರನಡೆದಿದ್ದರು. ಸದ್ಯ ಮೌನಿ ರಾಯ್ ಸ್ಥಾನಕ್ಕೆ ತಮನ್ನಾ ಭಾಟಿಯಾ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ನವಾಜುದ್ದೀನಿ ಸಿದ್ಧಿಕಿ ಸಹೋದರ ಶಮ್ಸ್ ನವಾಬ್ ಸಿದ್ಧಿಕಿ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸ್ವತಃ ತಮನ್ನಾ ಭಾಟಿಯಾ ಅವರೇ ಬೋಲೆ ಚೂಡಿಯಾ ಚಿತ್ರಕ್ಕೆ ಆಯ್ಕೆಯಾಗಿರುವುದಾಗಿಯೂ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ಬಾಲಿವುಡ್ ಸಿನಿಮಾವೊಂದರಲ್ಲಿ ಬಹು ಆಯಾಮಗಳಿರುವ ಪಾತ್ರವನ್ನು ಇದೇ ಮೊದಲ ಬಾರಿಗೆ ಮಾಡುತ್ತಿದ್ದೇನೆ. ಚಿತ್ರಕತೆ ನನ್ನನ್ನು ಆಕರ್ಷಿಸಿದೆ. ಇತ್ತೀಚಿನ ಸಮಾಜದಲ್ಲಾಗ ಬದಲಾವಣೆಯ ಕುರಿತಾಗಿ ಚಿತ್ರದ ಕಥಾಹಂದರವಿದೆ. ಈ ಪಾತ್ರ ನನ್ನ ಮಟ್ಟಿಗೆ ಎಕ್ಸ್ ಪೆರಿಮೆಂಟಲ್ ಎಂಬ ಅವರ ಮಾತುಗಳು ಚಿತ್ರದ ಬಗ್ಗೆ ಕುತೂಹಲ ಮೂಡಿಸಿವೆ. ಇದೇ ಮೊದಲ ಬಾರಿಗೆ ನವಾಜುದ್ದೀನ್ ಹಾಗೂ ತಮನ್ನಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಬೋಲೆ ಚೂಡಿಯಾ ಪಾತ್ರಕ್ಕೆ ತಮನ್ನಾ ಪರ್ಫೆಕ್ಟ್’ ಎಂದು ನವಾಜುದ್ದೀನ್ ಹೇಳಿದ್ದಾರೆ.
No Comment! Be the first one.