ಸೆಲೆಬ್ರಿಟಿಗಳು ಏನೇ ಮಾಡಿದರೂ ಅಭಿಮಾನಿಗಳು ಸಾಮಾನ್ಯವಾಗಿ ಅದನ್ನು ಅನುಸರಿಸುತ್ತಾರೆ. ಅವರ ಸ್ಟೈಲ್, ಆಟಿಟ್ಯೂಡ್ ಇತ್ಯಾದಿಗಳು ಅಭಿಮಾನಿಗಳದ್ದೂ ಆಗಿಬಿಡುತ್ತವೆ.ಇದೀಗ ವಿವಾಹಿತ ಸೆಲೆಬ್ರಿಟಿಗಳಿಂದ ಅಭಿಮಾನಿಗಳು ಸುಖೀ ದಾಂಪತ್ಯ ಸೂತ್ರಗಳನ್ನು ಕೂಡ ತಿಳಿಯಬಹುದಾಗಿದೆ ಎಂಬ ಮಾತುಗಳು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಮಾತ್ರವಲ್ಲ ಅದಕ್ಕೆ ಉದಾಹರಣೆಯಾಗಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ, ಆನಂದ್ ಅಹುಜಾ-ಸೋನಮ್ ಕಪೂರ್ ದಂಪತಿಗಳತ್ತ ಕೈತೋರಲಾಗುತ್ತಿದೆ.
ಮದುವೆ ಬಳಿಕ ದೀಪಿಕಾಪಡುಕೋಣೆಯ ಪಾದರಕ್ಷೆಯನ್ನು ರಣವೀರ್ ಸಿಂಗ್ ಸಮಾರಂಭವೊಂದರಲ್ಲಿ ಹಿಡಿದುಕೊಂಡು ಆಕೆಯ ಹಿಂದೆ ಓಡಾಡಿದ್ದು, ಸೋನಮ್ ಕಪೂರ್ ಶೂ ಲೇಸನ್ನು ಬಹಿರಂಗ ಸ್ಥಳದಲ್ಲಿ ಆನಂದ್ ಅಹುಜಾ ಕಟ್ಟಿದ್ದು, ಆ ಕ್ಷಣದಲ್ಲಿ ಈ ಹೀರೋಯಿನ್ ಗಳ ಮುಖದಲ್ಲಿ ಹೊಮ್ಮಿದನಗೆಭರಿತ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಈಗ ಹಳೇ ವಿಷಯ.ಆದರೆ ದಾಂಪತ್ಯ ಚೆನ್ನಾಗಿರಬೇಕೆಂದರೆ, ಪರಸ್ಪರ ಸಾಮರಸ್ಯ ವೃದ್ಧಿಸಬೇಕೆಂದರೆ ಇಂಥ ಚಿಕ್ಕ ಚಿಕ್ಕ ವಿಷಯಗಳೂ ಪ್ರಮುಖವಾಗಿರುತ್ತವೆ. ಇಂಥ ಚಿಕ್ಕಚಿಕ್ಕ ಪ್ರೀತಿಯ ಕೆಲಸಗಳು ಉಂಟುಮಾಡುವ ಖುಷಿ ದೊಡ್ಡದಾಗಿರುತ್ತದೆ ಎಂಬುದಾಗಿ ವಿಶ್ಲೇಷಣೆಗೆ ಒಳಪಡುತ್ತಿವೆ.
No Comment! Be the first one.