ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೇನು ಮುಗಿಯುತ್ತಿದೆ ಅನ್ನುವಷ್ಟರಲ್ಲಿ ಸಿನಿಮಾಗಳ ಪ್ರಚಾರದ ಕಾರ್ಯ ಬಿರುಸಿನಿಂದ ಪ್ರಾರಂಭವಾಗುತ್ತದೆ. ಈಗ ಅದಕ್ಕೂ ಮುಂದೆ ಹೋಗಿ ಸಿನಿಮಾ ಸೆಟ್ಟೇರಿದಾಗಿನಿಂದ ರಿಲೀಸ್ ಆಗುವ ತನಕ ಪ್ರತಿ ಅಪ್ ಡೇಟ್ ಗಳನ್ನು ಸಿನಿ ರಸಿಕರಿಗೆ ನೀಡುತ್ತಲೇ ಬರುತ್ತಿರುವುದು ವಿಶೇಷ. ಆ ಮೂಲಕವಾದರೂ ತಮ್ಮ ಸಿನಿಮಾ ನೋಡುಗರ ಮನಸ್ಸಿನಲ್ಲಿ ಉಳಿಯಲಿ ಎಂಬುದೇ ಅದರ ಉದ್ದೇಶ.
ಸದ್ಯ ನೀನಾಸಂ ಸತೀಶ್ ಚಂದ್ರಮೋಹನ್ ನಿರ್ದೇಶನದ ಬ್ರಹ್ಮಚಾರಿ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಬ್ರಹ್ಮಚಾರಿ ಚಿತ್ರತಂಡ ಇದೇ ತಿಂಗಳ 20 ಕ್ವಾಟ್ಲೆ ಸತೀಶನ ಹುಟ್ಟುಹಬ್ಬಕ್ಕೆ ಟೀಸರ್ ವೊಂದನ್ನು ರಿಲೀಸ್ ಮಾಡಲಿದೆ. ಆಶ್ಚರ್ಯವೆಂದರೆ ಸಿನಿಮಾದ ಮೇನ್ ಟೀಸರ್ ರಿಲೀಸ್ ಗೂ ಮುನ್ನ ಪ್ರೊಮೋ ಮಾದರಿಯ ಮತ್ತೊಂದು ಟೀಸರ್ ನ್ನು ಜೂನ್ 10ರಂದು ಬಿಡುಗಡೆ ಮಾಡಲು ಸಹ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಟೀಸರ್ ಅಂದ್ರೆ ಕಾಮನ್ನಾಗಿ ತೆಗೆದುಕೊಳ್ಳುವ ಮಂದಿಯ ಮಧ್ಯೆ ವಿಭಿನ್ನವಾದ ಪ್ರಯತ್ನವನ್ನು ಮಾಡಲು ಬ್ರಹ್ಮಚಾರಿ ಮಾಡಲು ಹೊರಟಿದೆ. ಈಗಾಗಲೇ ಟೈಟಲ್, ಫೋಸ್ಟರ್ ಮೂಲಕ ಸದ್ದುಮಾಡುತ್ತಿರುವ ಬ್ರಹ್ಮಚಾರಿ ಸಿನಿಮಾ 100% ವರ್ಜಿನ್ ಎಂಬ ಅಡಿಬರಹದಿಂದಲೂ ಕ್ಯೂರಿಯಾಸಿಟಿ ಹುಟ್ಟಿಸಿದೆ.
No Comment! Be the first one.