ಇತ್ತೀಚಿಗೆ ನೀನಾಸಂ ಸತೀಶ್ ಪುಲ್ ಹೈಪ್ ನಲ್ಲಿದ್ದಾರೆ. ಒಂದೆಡೆ ಸೋಶಿಯಲ್ ಸರ್ವೀಸಿನ ಕಡೆಗೂ ಆಸಕ್ತರಾಗಿದ್ದರೆ ಮತ್ತೊಂದೆಡೆ ಸತೀಶ್ ಆಡಿಯೋ ಎನ್ನುವ ಆಡಿಯೋ ಕಂಪನಿಯನ್ನು ತೆರೆದು ಹೊಸ ಹೊಸ ಪ್ರಯೋಗಗಳ ಕಡೆಗೆ ವಾಲುತ್ತಿದ್ದಾರೆ. ಇನ್ನು ಸವಾಲಿನ ಪಾತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಎಲ್ಲವನ್ನೂ ಮಾಡಬಲ್ಲ ತಾಕತ್ತು ತನಗಿದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಸದ್ಯ ಚಂಬಲ್ ಸಿನಿಮಾದ ನಂತರ ಕ್ವಾಟ್ವೆ ಸತೀಶ ಬ್ರಹ್ಮಚಾರಿ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. ಅಲ್ಲದೇ ಶೂಟಿಂಗ್ ಸಹ ಆರಂಭವಾಗಿತ್ತು. ಸದ್ಯದ ವಿಚಾರ ಏನಂದರೆ ಬ್ರಹ್ಮಚಾರಿ ತನ್ನ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದೆ. ಈವರೆಗೂ ಬೆಂಗಳೂರಿನಲ್ಲೇ 27 ದಿನಗಳ ಚಿತ್ರೀಕರಣದಲ್ಲಿ ಸಕ್ರಿಯವಾಗಿದ್ದ ಬ್ರಹ್ಮಚಾರಿ ತಂಡ, ದ್ವಿತೀಯ ಹಂತದ ಶೂಟಿಂಗ್ ಗೆ ರೆಡಿಯಾಗುತ್ತಿದೆ. ಇನ್ನು ನೀನಾಸಂ ಸತೀಶ್, ಅದಿತಿ ಪ್ರಭುದೇವ, ದತ್ತಣ್ಣ, ಅಚ್ಯುತಕುಮಾರ್, ಶಿವರಾಜ್ ಕೆ.ಆರ್.ಪೇಟೆ, ಅಶೊಕ್, ಬಿರಾದಾರ್, ಗಿರಿಜಾ ಲೋಕೇಶ್ ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮೇ 24 ಕ್ಕೆ `ಬ್ರಹ್ಮಾಚಾರಿ` ಚಿತ್ರದ First look ಸಹ ಬಿಡುಗಡೆಯಾಗಲಿದೆ.
ಯು ಕೆ ಮೆಹ್ತ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ `ಬಾಂಬೆ ಮಿಠಾಯಿ` ಹಾಗೂ `ಡಬ್ಬಲ್ ಇಂಜಿನ್` ಹಾಗೂ ಚಿತ್ರಗಳನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ. ಕಾಮಿಡಿ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರವಿಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನೀನಾಸಂ ಸಂತೀಶ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ, ಅಶೋಕ್, ಅಕ್ಷತ, ಅಚ್ಯುತಕುಮಾರ್, ಪದ್ಮಜಾರಾವ್, ದತ್ತಣ, ಬಿರಾದಾರ್, ಗಿರಿಜಾ ಲೋಕೇಶ್ ಮುಂತಾದವರ ತಾರಾಬಳಗದ ಜೊತೆಗೆ `ಮಜಾಭಾರತ`ದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Leave a Reply
You must be logged in to post a comment.