ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ದಿವಂತ ಸಿನಿಮಾ ಭರ್ಜರಿ ಹಿಟ್ ಕಂಡಿತ್ತು. ಇದೀಗ ಅದೇ ಟೈಟಲ್ಲಿನ ಹೊಸ ಸಿನಿಮಾ ಬುದ್ದಿವಂತ 2 ಸೆಟ್ಟೇರಿದೆ. ಈ ಸಿನಿಮಾವನ್ನು ಅಯೋಗ್ಯ ಖ್ಯಾತಿಯ ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಇಂದು ನಗರದ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನೆರವೇರಿತು.
ಬುದ್ದಿವಂತ 2ನಲ್ಲಿ ಉಪೇಂದ್ರ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು ಸೋನಾಲ್ ಮಾಂಟೇರಿಯಾ ಹಾಗೂ ಮೇಘನಾ ರಾಜ್ ಉಪ್ಪಿಗೆ ಜತೆಯಾಗಲಿದ್ದಾರೆ. ಬುದ್ದಿವಂತ 2 ಸಿನಿಮಾವನ್ನು ಮೌರ್ಯ ನಿರ್ದೇಶನ ಮಾಡುತ್ತಿದ್ದು, ಗುರುಕಿರಣ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್ ಮತ್ತು ವಿ ಮನೋಹರ್ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. ನಾನವನಲ್ಲ, ನಾನವನಲ್ಲ ಎಂದು ಡೈಲಾಗ್ ಹೊಡೆದುಕೊಂಡು ಅಭಿಮಾನಿಗಳನ್ನು ಪಟಾಯಿಸಿದ್ದ ಉಪ್ಪಿ ಡಬ್ಬಲ್ ರೋಲ್ ನಲ್ಲಿ ಇನ್ನೇನು ಮೋಡಿ ಮಾಡುತ್ತಾರೋ ಕಾದುನೋಡಬೇಕು.
No Comment! Be the first one.