ಭುಜ್ ದ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ. ಇವರೊಂದಿಗೆ ಬಿ ಟೌನಿನ ಬಹುದೊಡ್ಡ ತಾರಾಬಳಗವೇ ಇದ್ದು, ಸಂಜಯ್‌ ದತ್‌, ಸೋನಾಕ್ಷಿ ಸಿನ್ಹಾ, ರಾನಾ ದಗ್ಗುಬಾಟಿ, ಪರಿಣಿತಿ ಚೋಪ್ರಾ, ಆಯಮಿ ವಿರ್ಕ್‌ ನಟಿಸುತ್ತಿರುವುದು ವಿಶೇಷ. ಹೈದರಾಬಾದ್ ನಲ್ಲಿ ಸೋನಾಕ್ಷಿ ಈಗಾಗಲೇ ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಜುಲೈ ಅಂತ್ಯದ ವೇಳೆಗೆ ಅಜಯ್ ಕೂಡ ಟೀಮ್ ಸೇರಿಕೊಳ್ಳಲಿದ್ದಾರೆ.

ರಾಮೋಜಿರಾವ್‌ ಸ್ಟುಡಿಯೋದಲ್ಲಿ ಈ ಸಿನಿಮಾಕ್ಕಾಗಿ ಬೃಹತ್‌ ಸೆಟ್ ಹಾಕಲಾಗಿದೆಯಂತೆ. ಸಂಜಯ್‌ ದತ್‌ ಕೂಡ ಕೆಲವು ಭಾಗದ ಶೂಟಿಂಗ್ ಮುಗಿಸಿದ್ದಾರೆ. ಗುಜರಾತ್‌ನ ಮಧಾಪುರದ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. 300 ಮಹಿಳೆಯರ ಸಾಧನೆಯ ಹಾದಿಯ ಯಶೋಗಾಥೆ ಇದರಲ್ಲಿದೆ. 1971ರ ಭಾರತ-ಪಾಕ್‌ ಯುದ್ಧ ಗೆಲ್ಲಲು ಕಾರಣವಾದ ಕತೆಯೊಂದರ ಅನಾವರಣ ಚಿತ್ರದ ಪ್ರಮುಖ ಆಕರ್ಷಣೆ. ಅಭಿಷೇಕ್‌ ದುದೈಯಾ ನಿರ್ದೇಶನದ ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ.

CG ARUN

ಮಲಯಾಳಂ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್!

Previous article

ಆಗಸ್ಟ್ ಗೆ ತಮಿಳು ಸಿನಿಮಾ ಬಕ್ರೀದ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *