#bytwolove #Banner #KVNProductions #HariSanthosh #AjaneeshLoknath #Mano #Dhanveerrah #Sreeleela #MahenSimha

ʻಯಾರೇ  ಏನಂತಾ ಅನ್ಕೊಂಡ್ರೇನಂತೆ… ಹೀಗೆ ಇರ್ತೀವಿ ಇಷ್ಟ ಬಂದಂತೆ….ʼ ಎನ್ನುವ ಲಾಲಿತ್ಯಪೂರ್ಣ ಹಾಡು ಕೇಳಿದೇಟಿಗೆ ಹಂಸಲೇಖಾ ಜಮಾನಾ ನೆನಪಾಗೋದು ನಿಜ. ಚೆಂದದ ಹಾಡಿಗೆ ಅಷ್ಟೇ ಸೊಬಗನ್ನು ತುಂಬಿ ಚಿತ್ರೀಕರಿಸಿದ್ದಾರೆ. ಧನ್ವೀರ, ಶ್ರೀಲೀಲಾ ಜೋಡಿ ಕ್ಯೂಟ್‌ ಆಗಿ ಕಾಣಿಸುತ್ತಿದೆ.

ಹೂವಾ ರೋಜಾ ಹೂವ, ಯಾರೆಲೇ ನಿನ್ನ ಮೆಚ್ಚಿದವನು, ಪುಟ್ಟಮಲ್ಲಿ ಪುಟ್ಟಮಲ್ಲಿ, ಹಾಂಗ ನೋಡಬೇಡ ಹೆಣ್ಣೇ…, ಕಾಯಿಸುವ ಹುಡುಗಿರ, ಅಪರಂಜೀ ಚಿನ್ನವೋ, ಭೂತವಿಲ್ಲ ಪಿಶಾಚಿಯಿಲ್ಲ…. ಇಂಥ ಹತ್ತು ಹಲವರು ಕನ್ನಡದ  ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದವರು ಗಾಯಕ ಮನೊ. ಥೇಟು ಎಸ್ಪಿಬಿ ಅವರಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡುತ್ತಾ ಬಂದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ರಜನಿಕಾಂತ್‌ ನಟನೆಯ ಸಿನಿಮಾಗಳಿಗೆ ತೆಲುಗು ಭಾಷೆಯಲ್ಲಿ ಡಬ್‌ ಮಾಡುತ್ತಿರುವವರೂ ಇವರೇ.

ನಾದಭ್ರಹ್ಮ ಹಂಸಲೇಖಾ ಅವರ ಸಂಗೀತ ನಿರ್ದೇಶನದಲ್ಲಿ ಮನೊ ಹಾಡಿದ  ಸಾಕಷ್ಟು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಎರಡು ದಶಕಗಳ ಹಿಂದಿನ ಹಾಡುಗಳನ್ನು ಕೇಳುವಾಗ ಇಂಥಾ ಮಾಧುರ್ಯ ಈಗೀಗ ಮರೆಯಾಗಿಬಿಟ್ಟಿದೆಯಲ್ಲಾ? ಅಂತಾ ಯಾರಿಗಾದರೂ ಅನ್ನಿಸಬಹುದು. ಕನ್ನಡದ ಹಾಡು ಪ್ರಿಯರ ಕಲೆಕ್ಷನ್ನಿನಲ್ಲಿ ಹಂಸಲೇಖಾ-ಎಸ್ಪಿಬಿ ಹಾಡಿನ ಜೊತೆ ಮನೊ ಹಾಡುಗಳೂ ಖಂಡಿತಾ ಸೇರಿಕೊಂಡಿರುತ್ತವೆ. ಎಷ್ಟೋ ಸಲ ಇದು ಬಾಲು ಅವರ ದನಿಯಾ? ಮನೋ ಹಾಡಿದ್ದಾ? ಅನ್ನುವಷ್ಟರ ಮಟ್ಟಿಗೆ ಗೊಂದಲವಾಗುವುದೂ ಇದೆ. ಆಂಧ್ರದಲ್ಲಿ ಹುಟ್ಟಿಬೆಳೆದ ಮನೋ ಅವರ ಮೂಲ ಹೆಸರು ನಾಗೂರು ಬಾಬು. ಇಳಯರಾಜಾ ಇವರಿಗೆ ಮನೊ ಎನ್ನುವ ಹೆಸರಿಟ್ಟಿದ್ದರು. ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಲು ಸಾಧ್ಯವಾಗದೇ ಬಿಟ್ಟ ಎಷ್ಟೋ ಹಾಡುಗಳು ಮನೊ ಪಾಲಾಗಿದ್ದವು. ಅನೇಕ ಬಾರಿ ಖುದ್ದು ಬಾಲು ಕೂಡಾ ʻನನಗೋಸ್ಕರ ಕಾಯಬೇಡಿ… ನನ್ನ ಉತ್ತರಾಧಿಕಾರಿ ಮನೊ ಬಳಿ ಹಾಡಿಸಿʼ ಎಂದು ಹೇಳಿಬಿಡುತ್ತಿದ್ದರು.

ಈಗ ದಿಢೀರಂತ ಹಂಸಲೇಖಾ, ಎಸ್ಪಿ, ಮನೊ ಇವರನ್ನೆಲ್ಲಾ ನೆನಪಿಸಿಕೊಳ್ಳಲೂ ಕಾರಣವಿದೆ. ಬೈ ಟೂ ಲವ್‌ ಹೆಸರಿನ ಸಿನಿಮಾ ಇದೇ ತಿಂಗಳ 25ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಈ ಚಿತ್ರದ ಹಾಡೊಂದು ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಅಜನೀಶ್‌ ಲೋಕನಾಥ್‌ ನೀಡಿರುವ ಸಂಗೀತ, ಹರಿ ಸಂತೋಷ್‌ ಬರೆದಿರುವ ಸಾಲುಗಳಿರುವ ʻಯಾರೇ  ಏನಂತಾ ಅನ್ಕೊಂಡ್ರೇನಂತೆ… ಹೀಗೆ ಇರ್ತೀವಿ ಇಷ್ಟ ಬಂದಂತೆ….ʼ ಎನ್ನುವ ಲಾಲಿತ್ಯಪೂರ್ಣ ಹಾಡು ಕೇಳಿದೇಟಿಗೆ ಹಂಸಲೇಖಾ ಜಮಾನಾ ನೆನಪಾಗೋದು ನಿಜ. ಚೆಂದದ ಹಾಡಿಗೆ ಅಷ್ಟೇ ಸೊಬಗನ್ನು ತುಂಬಿ ಚಿತ್ರೀಕರಿಸಿದ್ದಾರೆ. ಧನ್ವೀರ, ಶ್ರೀಲೀಲಾ ಜೋಡಿ ಕ್ಯೂಟ್‌ ಆಗಿ ಕಾಣಿಸುತ್ತಿದೆ. ನಿರ್ದೇಶಕ ಹರಿ ಸಂತೋಷ್‌ ಸಿನಿಮಾವನ್ನೂ ಕೂಡಾ ಅಷ್ಟೇ ಮುದ್ದಾಗಿ ಕಟ್ಟಿರುತ್ತಾರೆ.

ಒಟ್ಟಿನಲ್ಲಿ ಚೆಂದದ ಹಾಡೊಂದು ಎಲ್ಲರ ಮನಸ್ಸನ್ನೂ ಇಪ್ಪತ್ತು ವರ್ಷಗಳ ಹಿಂದಕ್ಕೆ ಕರೆದೊಯ್ದು ಬೆಚ್ಚಗಿನ ಅನುಭವ ನೀಡಿದೆ. ಜೊತೆಗೆ ಹೊಸತನಕ್ಕೂ ತೆರೆದುಕೊಂಡಿದೆ. ಕೇಳುಗರ ಎಂದೂ ಮರೆಯದ ಹಾಡುಗಳ ಪಟ್ಟಿಗೆ ಇದು ಸೇರುವುದು ಖಚಿತ. ಈದೇ ಥರದ ಫ್ಲೇವರಿನ ಹಾಡಗಳು ಅಜನೀಶ್‌, ಸಂತು ಥರದ ಕ್ರಿಯಾಶೀಲ ಮನಸ್ಸುಗಳಿಂದ ಸೃಷ್ಟಿಯಾಗುತ್ತಿರಲಿ.

ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್‌’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸದ್ದು ಮಾಡ್ತಿದೆ ‘ತೋತಾಪುರಿ’ ಹಾಡು

Previous article

ಪ್ರಚಾರಪ್ರಿಯನ ಪುರಾಣ!

Next article

You may also like

Comments

Leave a reply

Your email address will not be published.

More in cbn