ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಕೋಟಿಕೋಟಿ ಹಣ-ವರ್ಷಗಳಿಗೆ ಲೆಕ್ಕ ಇಡದೆ ಸಿನಿಮಾ ಮಾಡಿ ಗೆದ್ದವರು ಪ್ರಶಾಂತ್ ನೀಲ್. ಈಗ ಬರುತ್ತಿರುವ ಹೊಸ ನಿರ್ದೇಶಕರೆಲ್ಲಾ ಪ್ರಶಾಂತ್ ನೀಲ್ ಅನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳೋದನ್ನು ಬಿಟ್ಟು ಪೂರ್ತಿ ಆವಾಹಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಆದರೆ ಹುಟ್ಟಾ ಶ್ರೀಮಂತ. ಸಿನಿಮಾದಿಂದಲೇ ದುಡೀಬೇಕು ಅನ್ನೋ ಯಾವ ದರ್ದೂ ಅವರಿಗಿರಲಿಲ್ಲ ಮತ್ತು ಇಲ್ಲ. ಒಂದು ವೇಳೆ ಹಣ ಹೂಡಿದ ನಿರ್ಮಾಪಕ ನನಗೆ ಭಾರ ಹೊರಲು ಸಾಧ್ಯವಿಲ್ಲ ಅಂತಾ ಕೈಚೆಲ್ಲಿ ಕುಂತರೆ ʻನಾನೇ ಮುಂದುವರೆಸಿಕೊಳ್ತೀನಿ. ನೀವು ಖರ್ಚು ಮಾಡಿರೋ ದುಡ್ಡನ್ನು […]
ಗಾನ ಗಂಧರ್ವ ಡಾ||ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹಾಡುಗಳ ಮೂಲಕ ಎಂದಿಗೂ ಜೀವಂತ. ದೇಶ ಕಂಡ ಅದ್ಭುತ ಗಾಯಕನ ಮೇಲೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರಿಗೂ ಅತೀವ ಪ್ರೀತಿ. ಆ ಪ್ರೀತಿಗಾಗಿ ಮಧುಸೂದನ್ ಹವಾಲ್ದಾರ್ ಎಸ್ ಪಿ ಬಿ ಅವರ ಸುಂದರ ಪುತ್ಥಳಿ ಮಾಡಿಸಿದ್ದಾರೆ. ಇತ್ತೀಚಿಗೆ ಈ ಪ್ರತಿಮೆಯ ಅನಾವರಣ ಸಮಾರಂಭ ನಡೆಯಿತು. ಡಾ||ವೆಂಕಟರಮಣ ಎಸ್ ಪಿ ಬಿ ಅವರ ಪುತ್ಥಳಿ ಅನಾವರಣ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ […]
ಹೆಸರಾಂತ ನಟ ಅರ್ಜುನ್ ಸರ್ಜಾ ಹಾಗೂ ನಿವೇದಿತಾ ಸರ್ಜಾ ಅವರ ಪುತ್ರಿ ಚಿ|ಸೌ|ಐಶ್ವರ್ಯ ಅರ್ಜುನ್ ಅವರ ವಿವಾಹ ಮಹೋತ್ಸವ ಚಿ|ಉಮಾಪತಿ ರಾಮಯ್ಯ ಅವರೊಂದಿಗೆ(ಶಾಂತಿ ರಾಮಯ್ಯ ಹಾಗೂ ತಂಬಿ ರಾಮಯ್ಯ ಅವರ ಪುತ್ರ) ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಜೂನ್ ಹತ್ತರಂದು ಅದ್ದೂರಿಯಾಗಿ ನೆರವೇರಿತು. ಜೂನ್ ಏಳರಂದು ಅರಿಶಿನ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ದೂರಿ ಸೆಟ್ […]
ನಿಖಿಲ್ ಕಾಮತ್ ಅವರ ನಾಯಕತ್ವದಲ್ಲಿ ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶನ ಕಾರ್ಯಕ್ರಮ (KMSPP) ಕರ್ನಾಟಕದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಕರ್ನಾಟಕ ಸರ್ಕಾರದ ಬೆಂಬಲ ಹಾಗೂ ಸತ್ವ ಸಹಯೋಗದಿಂದ ಈ ಕಾರ್ಯಕ್ರಮವು 2025-26 ಶೈಕ್ಷಣಿಕ ವರ್ಷದ ವೇಳೆಗೆ ತುಮಕೂರು, ದಾವಣಗೆರೆ, ಹಾವೇರಿ, ಯಾದಗಿರಿ ಮತ್ತು ಚಿತ್ರದುರ್ಗದಾದ್ಯಂತ 210 ಕ್ಕೂ ಹೆಚ್ಚು ಶಾಲೆಗಳು ಮತ್ತು ಅಂಗನವಾಡಿಗಳು/ಪ್ರಿಸ್ಕೂಲ್ಗಳನ್ನು ಪರಿವರ್ತಿಸಲು ರೂಪುರೇಷೆಗಳು ತಯಾರಾಗುತ್ತಿವೆ. ನಿಖಿಲ್ ಕಾಮತ್, ಭಾರತೀಯ ವ್ಯಾಪಾರ ಮತ್ತು ಲೋಕೋಪಕಾರಿ ಸಮುದಾಯದ ಪ್ರಮುಖ ವ್ಯಕ್ತಿ ಮತ್ತು ಯುವ ಅನ್ಸ್ಟಾಪಬಲ್ […]
ರಾಜರಾಜೇಶ್ವರಿ ನಗರದ ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕನಲ್ಲಿ ಎಸ್ ವ್ಯಾಸ ವಿಶ್ವ ವಿದ್ಯಾನಿಲಯವು ನೂತನವಾಗಿ ನಲವತ್ತು ವಿವಿಧ ಕೋರ್ಸ್ಗಳನ್ನು ಬರುವ ಆಗಸ್ಟ್ ತಿಂಗಳಲ್ಲಿ ಆರಂಭಿಸಲಿದೆ ಎಂದು ಎಸ್ ವ್ಯಾಸದ ಸ್ಥಾಪಕ ಡಾ.ಎಚ್.ಆರ್. ನಾಗೇಂದ್ರ ಅವರು ಮಾಹಿತಿ ನೀಡಿದರು. ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಸಣ್ಣ ದೇಶಗಳಲ್ಲಿ ಕ್ರೀಡಾಪಟುಗಳು ಅಧಿಕ ಸಂಖ್ಯೆಯಲ್ಲಿದ್ದಾರೆ, ಆದರೆ ನಮ್ಮ ಭಾರತದಲ್ಲಿ ಮಾತ್ರ ಕ್ರೀಡಾಪಟುಗಳ ಸಂಖ್ಯೆ ಬೆರಳಣಿಕೆಯಷ್ಟಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. […]
ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುದೀಪ್ ಅವರನ್ನು ರಾಜ್ಯಾದ್ಯಂತ ಸ್ಟಾರ್ ಪ್ರಾಚಾರಕನನ್ನಾಗಿಸುವ ಪ್ಲಾನ್ ಬಿಜೆಪಿಯದ್ದು. ಎಲ್ಲವೂ ನಾಳೆ ಮಧ್ಯಾಹ್ನ1.30ಕ್ಕೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಬಯಲಾಗಲಿದೆ ಕಿಚ್ಚ ಸುದೀಪ ರಾಜಕಾರಣಕ್ಕೆ ಬರ್ತಾರಂತೆ… ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಇಂಥದ್ದೊಂದು ಸುದ್ದಿ ಸರಸರನೆ ಹರಿದಾಡುತ್ತದೆ. ಅದು ಹಾಗೇ ತಣ್ಣಗಾಗುತ್ತದೆ. ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಕರಸತ್ತು ನಡೆಸಿವೆ ಅನ್ನೋದಂತೂ ನಿಜ. ಆದರೆ ಸುದೀಪ್ ಯಾವತ್ತೂ ಅಧಿಕೃತವಾಗಿ ಈ ಬಗ್ಗೆ […]
ಕುರಿ ಪ್ರತಾಪ ಅನ್ನೋ ಹೆಸರಿನ ಕಾಮಿಡಿ ನಟ ಒಬ್ಬ ಇದ್ದಾನಲ್ಲಾ? ಒಂದು ಕಾಲದಲ್ಲಿ ʻಕುರಿಗಳು ಸಾರ್ ಕುರಿಗಳುʼ ಎನ್ನುವ ಪ್ರಾಂಕ್ ಶೋದಿಂದ ಸಿಕ್ಕಾಪಟ್ಟೆ ಫೇಮಸ್ಸಾಗಿದ್ದವನು ಈತ. ಆ ಕಾರ್ಯಕ್ರಮದ ಮೂಲಕವೇ ಒಂದಿಷ್ಟು ಮಂದಿ ಸಿನಿಮಾದವರನ್ನು ಪರಿಚಯ ಮಾಡಿಕೊಂಡು, ಛಾನ್ಸು ಗಿಟ್ಟಿಸಿಕೊಂಡ. ಅದೇ ಹೊತ್ತಿಗೆ ಸಾಧು ಕೋಕಿಲನ ಹಾವಳಿ ಮಿತಿ ಮೀರಿ ಹೋಗಿತ್ತು. ಸಿನಿಮಾವೊಂದರಲ್ಲಿ ನಟಿಸಲು ಈತ ಲಕ್ಷಾಂತರ ರುಪಾಯಿ ಪ್ಯಾಕೇಜ್ ಡೀಲ್ ಮಾಡುತ್ತಿದ್ದರು. ಕಾಸು ಕೊಟ್ಟರೂ ಕೈಗೆ ಸಿಗದೆ ಆಟವಾಡಿಸುತ್ತಿದ್ದರು. ಪೇಮೆಂಟು ಈಸಿಕೊಂಡು ಸೀದಾ ಗೋವಾ, ಮಲೇಶಿಯಾ […]