ಇಷ್ಟು ದಿನ ಬಹುತೇಕ ವಾಹಿನಿಗಳು ಟಿ.ಆರ್.ಪಿ. ಟ್ಯಾಂಪರಿಂಗ್ ಮಾಡಿ ಬೋಗಸ್ ರೇಟಿಂಗ್ ತೋರಿಸುತ್ತಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಬ್ರೇಕ್ ಬಿದ್ದಿದೆ. ದರ್ಶನ್ ಒಬ್ಬರ ಸಿನಿಮಾ ಬಿಟ್ಟರೆ ಉಳಿದಂತೆ ದೊಡ್ಡ ಹೀರೋಗಳ ಸಿನಿಮಾಗಳು ಕೂಡಾ ಒಂದೂವರೆ ಎರಡು ದಾಟುತ್ತಿಲ್ಲ. ಸದ್ಯ ಡಾಲಿ ಇಂಡಿಯಾ ಲೆವೆಲ್ಲಿನಲ್ಲಿ ಹೆಸರು ಮಾಡಿರುವ ನಟ. ಟಗರು ನಂತರ ಬೇರೆ ಇಮೇಜು ಪಡೆದಿರುವ ಧನಂಜಯ ನಿರ್ಮಾಪಕರಾಗಿ ಗೆದ್ದಿದ್ದು ಬಡವ ರಾಸ್ಕಲ್ ಸಿನಿಮಾದಲ್ಲಿ. ಆ ನಂತರ ಡಾಲಿ ಧನಂಜಯ ನಟನೆಯ ನಾಲ್ಕಾರು ಸಿನಿಮಾಗಳು ಬಂದಿವೆ. ಆದರೆ ಯಾವುದೂ […]
ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ…. -ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು […]
ಅಭಿಶೇಕ್ ಅಂಬರೀಶ್ ಥರದ ಎಳೇ ಹುಡುಗರು, ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ? ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು […]
ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ. ಅನಂತ್ ನಾಗ್ ಕನ್ನಡ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಟರ ಲಿಸ್ಟಗೆ ಸೇರುವ ಮಹಾನ್ ನಟ. ಪಾತ್ರ ಯಾವುದೇ ಆದರೂ ಅದರ ಆಳಕ್ಕಿಳಿದು ನಟಿಸುವ ಕಲಾವಿದ. ಕನ್ನಡದ ಮಟ್ಟಿಗೆ ʻಮೆಥೆಡ್ ಆಕ್ಟಿಂಗ್ʼ ಅನ್ನು ಮೈಗೂಡಿಸಿಕೊಂಡ ಅಪರೂಪ ಆಕ್ಟರ್. ಎಷ್ಟೋ ಪಾತ್ರಗಳನ್ನು ನಿರ್ದೇಶಕರು ಅನಂತ್ ನಾಗ್ ಅರನ್ನೇ ಗಮನದಲ್ಲಿಟ್ಟುಕೊಂಡು ಬರೆದುಕೊಂಡಿರುತ್ತಾರೆ. ಆದರೆ, ಆ ಎಲ್ಲ ಪಾತ್ರಗಳನ್ನೂ ಮಾಡಲು […]
ಇನ್ನೈದು ನಿಮಿಷದಲ್ಲಿ ಫೋನ್ ಎತ್ತಲಿಲ್ಲ ಎಂದರೆ ಗ್ರಹಚಾರ ಬಿಡಿಸುತ್ತೀನಿ ಮಗನೆ ಎಂದು ವಾರ್ನಿಂಗ್ ಕೊಟ್ಟೇ ಚಳಿ ಬಿಡಿಸಿದ್ದಾರೆ ಯೋಗರಾಜ್ ಭಟ್. ಅವರು ಜ಼ಡ್ ಕನ್ನಡದ ರಾಘು ಕುಣಸೂರು ಅವರಿಗೆ ಕಳೆದ 20 ದಿನಗಳಿಂದ ಫೋನ್ ಮಾಡುತ್ತಿದ್ದರಂತೆ. ರಾಘು ಎಂದಿನಂತೆ ನಾಟ್ ರೀಚಬಲ್. ಯಾವಾಗ ಅಷ್ಟು ದಿನವಾದರೂ ಫೋನ್ ಎತ್ತಲಿಲ್ಲವೋ, ಆಗ ಭಟ್ಟರ ತಲೆ ಕೆಟ್ಟಿದೆ. ತಲೆ ಕೆಟ್ಟ ಭಟ್ಟ ಯಬುಡಾ ತಬುಡಾ ಎಂದು ಅವರೇ ಬರೆದುಕೊಂಡಂತೆ, ಅವರೇ ರಾಘುಗೆ ಇನ್ನೊಂದು ವಾಯ್ಸ್ ರೆಕಾರ್ಡ್ ಬಿಟ್ಟಿದ್ದಾರೆ. ಅದರಲ್ಲಿ ಹಿಗ್ಗಾಮುಗ್ಗಾ […]
ಕಿಟ್ಟಿಗೆ ಮಾರ್ಕೆಟ್ ಇಲ್ಲ ಅಂತೇಳಿ ಬಹುತೇಕರು ಮೂಲೆಗೆ ತಿಳ್ಳಿಬಿಟ್ಟಿದ್ದರು. ಇದರ ನಡುವೆ ನನಗೆ ಕಿಟ್ಟೀನೇ ಬೇಕು ಅಂತಾ ಹಠ ಹಿಡಿದು, ಅವರನ್ನು ಕರೆತಂದು, ಅವರಿಗೊಪ್ಪುವ ಪಾತ್ರ ಮಾಡಿಸಿ, ಈಗ ವ್ಯಾಪಾರದಲ್ಲೂ ಗೆಲ್ಲುತ್ತಿರುವ ನಿರ್ದೇಶಕನ ಹೆಸರು ಸೂರಾ ಶ್ರೀನಗರ ಕಿಟ್ಟಿ ಅಂದರೆ ಯಾರು ಅನ್ನೋದನ್ನೇ ಹೆಚ್ಚೂಕಮ್ಮಿ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಮರೆತುಬಿಟ್ಟಿದ್ದರು. ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ವೆಡ್ಸ್ ಗೀತಾ ಎನ್ನುವ ಮೂರು ಸಿನಿಮಾಗಳನ್ನು ಹೊರತುಪಡಿಸಿ ಕಿಟ್ಟಿ ಹೀರೋ ಆಗಿ ನಟಿಸಿದ ಯಾವ ಸಿನಿಮಾಗಳೂ ತಲೆಯೆತ್ತಲಿಲ್ಲ. […]
ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು. ಬದುಕಲ್ಲಿ ಕಷ್ಟ ಕಂಡವರು ಮಾತ್ರ ಮತ್ತೊಬ್ಬರ ಕಣ್ಣೀರು ಒರೆಸಲು ಸಾಧ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವ ದೊಡ್ಡಬಳ್ಳಾಪುರದಲ್ಲಿ ದೊಡ್ಡರಾಯಪ್ಪನಹಳ್ಳಿ ಎನ್ನುವ ಪುಟ್ಟ […]
‘ಬನಾರಸ್’ ಚಿತ್ರ ಶುರುವಾಗಿ ಎರಡ್ಮೂರು ವರ್ಷಗಳೇ ಆಗಿವೆ. ಇನ್ನು, ಚಿತ್ರದ ಪ್ರಮೋಷನ್ ಶುರುವಾಗಿ ಕೂಡಾ ತಿಂಗಳುಗಳೇ ಆಗಿವೆ. ಒಂದಿಷ್ಟು ಇವೆಂಟುಗಳೂ ಆಗಿವೆ. ಆದರೆ, ಎಲ್ಲೂ ನಾಯಕ ಝೈದ್ ಖಾನ್ ಅವರ ತಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಚಿತ್ರತಂಡದ ಜೊತೆಯಾಗಲೀ, ಝೈದ್ ಜೊಯಾಗಿಲೀ ಕಾಣಿಸಿಕೊಂಡಿರಲಿಲ್ಲ. ಚಿತ್ರದ ಬಗ್ಗೆಯಾಗಲೀ, ತಮ್ಮ ಮಗನ ಬಗ್ಗೆಯಾಗಲೀ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಜಮೀರ್ ಅಹ್ಮದ್ ಖಾನ್ ಚಿತ್ರ ಹಾಗೂ ತಮ್ಮ ಮಗನ ಕುರಿತು ಮಾತನಾಡಿದ್ದಾರೆ. ‘ನನಗೆ ಹೆಚ್ಚು ಟೈಮ್ ಸಿಗುವುದಿಲ್ಲ […]
ಲವ್ ಸಬ್ಜೆಕ್ಟಿನ ಸಿನಿಮಾ ಮಾಡುವವರು ತೀರಾ ಫ್ರೆಶ್ ಎನಿಸುವ ಸಂಭಾಷಣೆ ಬೇಕೆನಿಸಿದರೆ, ಹೇಗಾದರೂ ಅಜ್ಜೀಪುರದ ಈ ರವಿಯನ್ನು ಒಪ್ಪಿಸಿ ಬರೆಸಿಕೊಳ್ಳಿ. ಇವರು ರವಿ ಅಜ್ಜೀಪುರ. ಮಾಧ್ಯಮ ವಲಯದಲ್ಲಿವರು ಸದಾ ಪ್ರವಹಿಸುವ ಅಚ್ಚರಿ. ಪ್ರಿಂಟ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾಗಲೇ ಸಡನ್ನಾಗಿ ಟೀವಿ ಮಾಧ್ಯಮದತ್ತ ಮುಖ ಮಾಡಿದವರು. ಅಲ್ಲಿಂದ ಮತ್ತೆ ಪತ್ರಿಕೆಯ ಕಡೆ ‘ಮನಸು’ ಕೊಟ್ಟವರು. ಪತ್ರಕರ್ತರಾಗಿದ್ದುಕೊಂಡೇ ವಿನ್ಯಾಸ ಕಲಾವಿದರಾಗಿ, ನೂರಾರು ಪುಸ್ತಕಗಳ ಮುಖಪುಟಗಳಿಗೆ ಬಣ್ಣ ತುಂಬಿದವರು. ಒಂದು ಪತ್ರಿಕೆಯ ಕಂಟೆಂಟ್ ಹೇಗಿರಬೇಕು ಅನ್ನೋದರ ಜೊತೆಗೆ ಅದರ ಪ್ರೆಸೆಂಟೇಷನ್ ಕೂಡಾ […]
ನೀರ್ ದೋಸೆ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ ‘ತೋತಾಪುರಿ’ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಮೂಲಕ ಝಲಕ್ ತೋರಿಸಿದ್ದಾರೆ. ಇದಕ್ಕೆ ದೇಶಾದ್ಯಂತ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದು ಎರಡೂ ಭಾಗದ ಚಿತ್ರೀಕರಣವನ್ನೂ ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಾಪ್ಟರ್ 1 […]