ಮುಂಬರುವ ನಿರೀಕ್ಷಿತ ಚಿತ್ರಗಳ ಒಂದು ಇಣುಕುನೋಟ
ಈ ವರ್ಷ ಪ್ರಾರಂಭವಾಗುವುದಕ್ಕೆ ಮುನ್ನ ಕನ್ನಡ ಚಿತ್ರರಂಗದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಇದು ಚಿತ್ರರಂಗದ ಪಾಲಿಗೆ ಬಹಳ ಮಹತ್ವದ ವರ್ಷವಾಗಿತ್ತು. ‘ಕೆಜಿಎಫ್ 2’, ‘ವಿಕ್ರಾಂತ್ ರೋಣ’, ‘777 ಚಾರ್ಲಿ’, ಜೇಮ್ಸ್, ಅವತಾರ ಪುರುಷ ಸೇರಿದಂತೆ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಗೆ ಕಾದಿದ್ದವು. ಅವೆಲ್ಲವೂ ದೊಡ್ಡ ಬಜೆಟ್ ಚಿತ್ರಗಳಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಮಟ್ಟದ ಚಿತ್ರಗಳು. ಹಾಗಾಗಿ, ಈ ಚಿತ್ರಗಳು ಏನಾಗಬಹುದು ಎಂದು ಎಲ್ಲರಿಗೂ ಕುತೂಹಲವಿತ್ತು. ಈಗ 2022 ಮುಗಿಯುತ್ತಾ ಬಂದಿದೆ. ಈ ವರ್ಷ ಹೇಗಿತ್ತು ಎಂಬುದನ್ನು ಬಿಡಿಸಿ […]
ಹಳ್ಳಿ ಹುಡುಗನೊಬ್ಬ ಮನಸ್ಸು ಮಾಡಿ ‘ಚಾಂಪಿಯನ್’ ಆಗುವ ಕಥೆ
ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಚಾಂಪಿಯನ್’ ಚಿತ್ರವು ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಚಿನ್ ಸಹ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘ಚಾಂಪಿಯನ್’ ಕುರಿತು ಮಾತನಾಡುವ ಸಚಿನ್, ‘ಇದೊಂದು ಕ್ರೀಡೆ ಆಧಾರಿತ ಸಿನಿಮಾ. ನಾನು ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ, ಎರಡ್ಮೂರು ಕಥೆಗಳನ್ನು ಕೇಳಿದೆ. ಆ ಪೈಕಿ ಈ ಚಿತ್ರ ನನಗೆ ಬಹಳ ಇಷ್ಟವಾಯಿತು. ಕ್ರೀಡೆ ಚಿತ್ರಗಳಲ್ಲಿ ಹಲವು ಅಂಶಗಳಿರುತ್ತವೆ. ಪ್ರಮುಖವಾಗಿ ಒಂದು […]
ಚಾಂಪಿಯನ್ ಜೀವನದಲ್ಲಿ ಪ್ರೀತಿಯ ಗಾಳಿ ಬೀಸುವ ಅದಿತಿ
ಅದಿತಿ ಅಭಿನಯದ ತಿಂಗಳಿಗೊಂದರಂತೆ ಬಿಡುಗಡೆಯಾಗುತ್ತಿವೆ. 15 ದಿನಗಳ ಹಿಂದಷ್ಟೇ ಅದಿತಿ ಅಭಿನಯದ ‘ತೋತಾಪುರಿ’ ಚಿತ್ರವು ಬಿಡುಗಡೆಯಾಗಿತ್ತು. ಈಗ ‘ಚಾಂಪಿಯನ್’ ಜೊತೆಗೆ ಮತ್ತೆ ಬರುತ್ತಿದ್ದಾರೆ ಅದಿತಿ. ಈ ಚಿತ್ರದಲ್ಲಿ ಅವರು ಸಚಿನ್ಗೆ ನಾಯಕಿಯಾಗಿ ನಟಿಸಿದ್ದು, ಅವನ ಜೀವನದಲ್ಲಿ ಪ್ರೀತಿಯ ಗಾಳಿ ಬೀಸುವ ಯುವತಿಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಬಗ್ಗೆ ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅದಿತಿ, ಚಿತ್ರದ ಬಗ್ಗೆ ಥ್ರಿಲ್ ಆಗಿ ಮಾತನಾಡುತ್ತಾರೆ. ‘ಎಲ್ಲರಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅಂಥವರಿಗೆ ಸ್ಫೂರ್ತಿ ತುಂಬುವ ಚಿತ್ರ […]
‘ಚಾಂಪಿಯನ್’ನಲ್ಲಿ ‘ಡಿಂಗರ್ ಬಿಲ್ಲಿ’ ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್ಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ, ಅವರು ‘ಡಿಕೆ’ ಮತ್ತು ‘ಲವ್ ಯೂ ಆಲಿಯಾ’ ಚಿತ್ರಗಳ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರಿಗೆ ಬಂದು, ಇಲ್ಲಿ ನಡೆದ ಚಿತ್ರೀಕರಣದಲ್ಲಿ ಕುಣಿದು ಹೋಗಿದ್ದರು. ಈಗ ಬರೋಬ್ಬರಿ ಏಳು ವರ್ಷಗಳ ಬಳಿಕ ಅವರು ಚಾಂಪಿಯನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸು ಬಂದಿದ್ದಾರೆ. ಸಚಿನ್ ಧನಪಾಲ್ ನಾಯಕನಾಗಿರುವ ‘ಚಾಂಪಿಯನ್’ ಚಿತ್ರದಲ್ಲಿ ಸನ್ನಿ ಲಿಯೋನ್, ‘ಡಿಂಗರ್ ಬಿಲ್ಲಿ’ಯಾಗಿ ಸೊಂಟ ಬಳುಕಿಸಿದ್ದಾರೆ. ಈ ಹಾಡಿನ ಚಿತ್ರೀಕರಣದಲ್ಲಿ ಬಾಗವಹಿಸುವಾಗಲೇ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ತಮಗೆ ಅವಕಾಶ ಕೊಡಬೇಕು ಎಂದು ಹೇಳಿದ್ದರಂತೆ. ಅದರಂತೆ ಕೆಲವು […]
ಡಾಲಿಗೆ ಡಿಸ್ಟರ್ಬ್ ಮಾಡಬೇಡಿ ಪ್ಲೀಸ್!
ಭಾರತೀಯ ಚಿತ್ರರಂಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಬಿಟ್ಟರೆ ಬಹುಶಃ ಅತೀ ಹೆಚ್ಚು ಬ್ಯುಸೀ ಇರುವ ನಟ ಅಂದರೆ ಅದು ಡಾಲಿ ಧನಂಜಯ ಇರಬೇಕು! ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ […]