ವರ್ಷ ಪೂರ್ತಿ ಗಣೇಶ ಹಬ್ಬಾನೇ!
ಇನ್ನು ಕನ್ನಡ ಚಿತ್ರರಂಗದ ಕಣ್ಮುಚ್ಚಿತು… ಅಂತಲೇ ಎಲ್ಲರೂ ಭಾವಿಸಿದ್ದರು. ವೃತ್ತಿಪರ ನಿರ್ಮಾಪಕರಂತೂ ಏನು ಮಾಡೋದು ಅನ್ನೋದು ಗೊತ್ತಾಗದೆ ಕೈಚೆಲ್ಲಿ ಕುಳಿತಿದ್ದರು. ಈ ಹಿಂದೆ ಕನ್ನಡ ಚಿತ್ರರಂಗ ಇಂಥದ್ದೇ ಪರಿಸ್ಥಿತಿಯಲ್ಲಿದ್ದಾಗ ಇಬ್ಬರು ಹೊಸಾ ಹೀರೋಗಳು ಬಂದು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದರು. ಆ ವರೆಗೆ ಕಾಣದ ಥೇಟರ್ ಗಳಿಕೆ ಆ ಎರಡು ಸಿನಿಮಾಗಳು ಮಾಡಿದ್ದವು. ಒಂದು ಮುಂಗಾರು ಮಳೆ, ಮತ್ತೊಂದು ದುನಿಯಾ! ಈ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಗೆ ಇಬ್ಬರು ಸೂಪರ್ ಸ್ಟಾರ್ಗಳು ಸಿಕ್ಕಿದ್ದು ಮಾತ್ರವಲ್ಲದೆ, ಕನ್ನಡ […]
ಸದ್ದು ಮಾಡುತ್ತಿದೆ “UI” ಚಿತ್ರದ “ಸೌಂಡ್ ಆಫ್ ಯುಐ”
ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ ‘ಯುಐ’ (UI) ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ‘ಸೌಂಡ್ ಆಫ್ ಯುಐ’ ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್ ಗಳ ಈ ಮ್ಯೂಸಿಕ್ ಝಲಕ್ ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ಹಾಡುಗಳ ಬಗ್ಗೆ ಕುತೂಹಲ ಹೆಚ್ಚಿದೆ. “ಯುಐ” ಚಿತ್ರದ ಮ್ಯೂಸಿಕ್ ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್ , […]
“ಬಿಟಿಎಸ್” ನಲ್ಲಿ ಐದು ಜನ ನಿರ್ದೇಶಕರ ಐದು ಕಥೆಗಳು ..
ಒಂದು ಚಿತ್ರವನ್ನು ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿರುವ ಉದಾಹರಣೆ ಸಾಕಷ್ಟಿದೆ. ಆದರೆ ಐದು ಜನ ನಿರ್ದೇಶಕರು, ಐದು ಕಥೆಗಳನ್ನಿಟ್ಟುಕೊಂಡು “ಬಿ ಟಿ ಎಸ್” ಎಂಬ ಸಿನಿಮಾ ಮಾಡಿದ್ದಾರೆ. ಆಸಕ್ತಿಕರ ವಿಷಯಗಳನ್ನಿಟ್ಟುಕೊಂಡು ಜನರ ಮನಸ್ಸು ಗೆಲ್ಲಲ್ಲು ಮುಂದಾಗಿದ್ದಾರೆ.ಯುವ ಪ್ರತಿಭಾನ್ವಿತರ ತಂಡಕ್ಕೆ ನಟ ರಾಜ್ ಬಿ ಶೆಟ್ಟಿ ಸಾಥ್ ನೀಡಿ, ಪ್ರಯತ್ನ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ಟ್ರೇಲರ್ ಅನ್ನು “ಭೀಮ” ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ. ಬಿಟಿಎಸ್ ( ಬಿಹೈಂಡ್ ದಿ ಸ್ಕ್ರೀನ್ ) ಚಿತ್ರವನ್ನು […]
“ರಾನಿ” ನೋಡಲು ಆಗಸ್ಟ್ 30 ಅಲ್ಲ. ಇನ್ನೂ ಎರಡು ವಾರ ಕಾಯಬೇಕು .
ಕಿರಣ್ ರಾಜ್ ಅಭಿನಯದ ‘ರಾನಿ’ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ಮೊದಲು ಹೇಳಿದ ಹಾಗೆ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ ‘ರಾನಿ’ ಆಗಸ್ಟ್ 30 ರ ಬದಲು ಸೆಪ್ಟೆಂಬರ್ 12 ರಂದು ತೆರೆಗೆ ಬರಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದೆಂದು ಈ ನಿರ್ಧಾರ ತೆಗದುಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ತಿಳಿಸಿದೆ. ಮೊದಲು ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ […]
ಡಿಂಕು ಮಾತಾಡೋ ಗೊಂಬೆಯ ಫ್ಯಾಂಟಸಿ ಚಿತ್ರ
ಈ ಹಿಂದೆ ಷಡ್ಯಂತ್ರ, ರೆಡ್ ಹೀಗೆ ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿದ ರಾಜೇಶ್ ಮೂರ್ತಿ ಅವರು ಈಸಲ ಸಸ್ಪೆನ್ಸ್, ಫ್ಯಾಂಟಸಿ ಜಾನರ್ ಚಲನ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು ಡಿಂಕು. ಇದು ಅವರ ನಿರ್ದೇಶನದ ಹತ್ತನೇ ಚಿತ್ರ. ಈ ಚಿತ್ರದಲ್ಲಿ ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿದ್ದಾರೆ. ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ […]
ಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್
ಸಿನಿಮಾ ರಿಲೀಸ್ ಗೂ ಮೊದ್ಲೆ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಟೆಂಪಲ್ ರನ್ ಮೈಸೂರಿನ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದ ಚಿತ್ರತಂಡ ಪೌಡರ್ ಸಿನಿಮಾಗೆ ಒಳ್ಳೆದಾಗಲಿ ಎಂದು ಬೇಡಿಕೊಂಡ ಚಿತ್ರತಂಡ ಆಗಸ್ಟ್ 23ಕ್ಕೆ ತೆರೆಗೆ ಬರ್ತಿದೆ ಪೌಡರ್ ಸಿನಿಮಾ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಪೌಡರ್ ಸಿನಿಮಾ ಕಾರ್ತಿಕ್ ಗೌಡ, ಯೋಗಿ ಜಿ. […]
‘ಗೋಪಿಲೋಲ’ನ ಹೊಸ ಗಾನಬಜಾನ…ಇದ್ದಕ್ಕಿದ್ದಂಗೆ ಪ್ರಪಂಚವೆಲ್ಲಾ ಎಂದು ಹೆಜ್ಜೆ ಹಾಕಿದ ಮಂಜುನಾಥ್ ಅರಸು -ನಿಮಿಷಾ
ಗೋಪಿಲೋಲ ಸಿನಿಮಾ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಈ ಚಿತ್ರದ ಎರಡು ಗೀತೆಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಮೂರನೇ ಹಾಡು ಬಿಡುಗಡೆ ಮಾಡಲಾಗಿದೆ. ಕೇಶವ ಚಂದ್ರ ಬರೆದ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ವಾರಿಜಶ್ರೀ ಕಂಠ ಕುಣಿಸಿದ್ದಾರೆ. ಮಿಥುನ್ ಅಶೋಕನ್ ಟ್ಯೂನ್ ಹಾಕಿದ್ದು, ನಾಯಕ ಮಂಜುನಾಥ್ ಅರಸು ಹಾಗೂ ನಿಮಿಷಾ ಕೆ ಚಂದ್ರ ಇದ್ದಕ್ಕಿದ್ದಂತೆ ಪ್ರಪಂಚವೆಲ್ಲಾ ಯಾಕೋ ಸುತ್ತಿದಂಗೆ ಆಗುತೈತೆ ಅಂತಾ ಕುಣಿದು ಕುಪ್ಪಳಿಸಿದ್ದಾರೆ. ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಗೋಪಿಲೋಲ ಸಿನಿಮಾವನ್ನು […]
ಕಂಠೀರವ ಸ್ಟುಡಿಯೋದಲ್ಲಿ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಕುಂಬಳಕಾಯಿ.
ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಮುಕ್ತಾಯವಾಯಿತು. ನಾಯಕಿ ರಚಿತಾರಾಮ್ ಡ್ರಾಯಿಂಗ್ ಬೋರ್ಡ್ ಮೇಲೆ ಆರ್ಟ್ ಬಿಡಿಸುತ್ತಿರುವ ದೃಶ್ಯದೊಂದಿಗೆ ಮಾಧ್ಯಮಗಳ ಸಮ್ಮುಖದಲ್ಲಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮಾಡಲಾಯಿತು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ […]
‘ವೆಟ್ಟೈಯನ್’ ಎಂಟ್ರಿಗೆ ಡೇಟ್ ಫಿಕ್ಸ್..ಅಕ್ಟೋಬರ್ 10ಕ್ಕೆ ತೆರೆಗೆ ಬರ್ತಿದೆ ರಜನಿ ಸಿನಿಮಾ.
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯನ್’. ಜೈ ಭೀಮ್ ಖ್ಯಾತಿಯ ಟಿ.ಜೆ.ಜ್ಞಾನವೇಲ್ ನಿರ್ದೇಶನದಲ್ಲಿರುವ ತಯಾರಾಗುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 10ಕ್ಕೆ ಬೆಳ್ಳಿಪರದೆಗೆ ವೆಟ್ಟೈಯನ್ ಸಿನಿಮಾ ಲಗ್ಗೆ ಇಡುತ್ತಿದೆ. ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೆಟ್ಟೈಯನ್’ ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ […]
‘ಪೆಪೆ’ ಶೋ ರೀಲ್ ನೋಡಿ ಕಿಚ್ಚ ಸುದೀಪ್ ಫಿದಾ
ಇಂಥ ಪಾತ್ರದಲ್ಲಿ ವಿನಯ್ ಅವರನ್ನ ನೋಡಲು ನಾನು ಇಷ್ಟ ಪಡುತ್ತೇನೆ. ಯಾವತ್ತಿಗೂ ಪಾತ್ರ ಮಾತನಾಡ ಬೇಕು. ಹೀರೋಗಿಂತ ಪಾತ್ರ ದೊಡ್ಡದು. ವಿನಯ್ ನಿರ್ವಹಿಸಿರುವ ಪಾತ್ರ ಸಖತ್ ಕುತೂಹಲ ಮೂಡಿಸಿದೆ.. ಇಂತಹ ಸಿನಿಮಾಗಳನ್ನ ನೀವು ಮಾಡಿ , ನಿಮಗೆ ಒಪ್ಪುತ್ತದೆ.. ಖಂಡಿತವಾಗಿ ನಾನು ಈ ನಿಮ್ಮ ಸಿನಿಮಾಕ್ಕೆ ಸಪೋರ್ಟ್ ಮಾಡ್ತಿನಿ. ಇದು ಕಿಚ್ಚ ಸುದೀಪ್ ಅವರು ವಿನಯ್ ರಾಜ್ ಕುಮಾರ್ ನಟನೆಯ ಪೆಪೆ ಸಿನಿಮಾದ ಬಗ್ಗೆ ವಿನಯ್ ರಾಜ್ ಕುಮಾರ್ ಬಳಿ ಮಾತನಾಡಿರೋ ಮೆಚ್ಚುಗೆಯ ಮಾತುಗಳು. ಇಂದು ಕಿಚ್ಚ […]