ಇಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ Dr. 56 ತೆರೆಗೆ ಬರುತ್ತಿದೆ. ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ, ಈ ವರೆಗೆ ಯಾರೂ ಹೇಳದ ವಿಚಾರದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ. ಸ್ವತಃ ನಾಯಕನಟರಾಗಿ ಕಾಣಿಸಿಕೊಂಡಿರುವ ಪ್ರವೀಣ್ ರೆಡ್ಡಿ ಈ ಚಿತ್ರಕ್ಕೆ ಕಥೆ ಕೂಡಾ ಬರೆದಿದ್ದಾರೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಐದು ರಾಜ್ಯಗಳಲ್ಲಿ ಏಕಕಾದಲ್ಲಿ ಬಿಡುಗಡೆಯಾಗುತ್ತಿದೆ. ʻʻಸಿನಿಮಾವನ್ನು ನೋಡಲು ಬನ್ನಿ. ಚಿತ್ರ ನೋಡಿದ ಮೇಲೆ ಖಂಡಿತಾ ನಿಮ್ಮ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ವಿಜ್ಞಾನ […]
#a2music #nangeyaru #rajeshkrishnan #kannadamovies #kannadasongs #pankhurimovie
ಉತ್ತರ ಕರ್ನಾಟಕದ ಯುವ ಪ್ರತಿಭೆ ಸಚಿನ್ ಧನಪಾಲ್ ನಾಯಕನಾಗಿ ಅಭಿನಯಸಿದ ಚಾಂಪಿಯನ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಚಿತ್ರ ವೀಕ್ಷಿಸಿದ ಬಹುತೇಕರು ಆ್ಯಕ್ಷನ್ ಬ್ಲಾಕ್ ಹಾಗೂ ಹಾಡುಗಳ ಬಗ್ಗೆಯೇ ಹೆಚ್ಚು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಸಂತಸವನ್ನು ನಿರ್ಮಾಪಕ ಶಿವಾನಂದ್ ಎಸ್.ನೀಲಣ್ಣನವರ್ ಹಾಗೂ ನಾಯಕ ಸಚಿನ್ ಧನಪಾಲ್ ಮಾದ್ಯಮ ಮಿತ್ರರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಪ್ರತಿಯೊಬ್ಬರೂ ಚಿತ್ರದ ಮೇಕಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ನಮ್ಮ ನಿರೀಕ್ಷೆಯಂತೆಯೇ ಚಿತ್ರ ಜನರನ್ನು ತಲುಪಿದೆ. […]
ಹಾರರ್, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ’1900’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಲವ್ ಮಾಕ್ಟೆಲ್ ಖ್ಯಾತಿಯ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್.ಬಿ ಮತ್ತು ಉಮೇಶ್.ಕೆ.ಎನ್ ಬಂಡವಾಳ ಹೂಡುತ್ತಿದ್ದಾರೆ. ಮೂಡಿಬಿದರೆಯ ರಾಜೇಶ್.ಬಿ ಮೂಲತ: ನಟನಾಗಿ ಗುರುತಿಸಿಕೊಂಡಿದ್ದು, ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಉಮೇಶ್.ಕೆ.ಎನ್ ದುಡಿದ ಹಣವನ್ನು ಚಿತ್ರಕ್ಕೆ ವಿನಿಯೋಗಿಸುತ್ತಿದ್ದು ಅಲ್ಲದೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. […]
ಸಿನಿಮಾ ಬಹುತೇಕರ ಆಕರ್ಷಣೆಯ ಕ್ಷೇತ್ರ. ಬದುಕಿಗಾಗಿ ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲಾ ಚಿತ್ರರಂಗದಲ್ಲಿ ಹೆಸರು ಮಾಡಿಬಿಡಬೇಕು ಎನ್ನವ ತುಡಿತ. ಸಿನಿಮಾವನ್ನು ಧ್ಯಾನಿಸುತ್ತಾ, ತಮ್ಮದಲ್ಲದ ಕೆಲಸಗಳನ್ನು ಮಾಡುವವರೂ ಅಂತಿಮವಾಗಿ ಇಲ್ಲಿ ಬಂದು ಗೆದ್ದ ಉದಾಹರಣೆಗಳಿವೆ. ಮಿನರಲ್ ವಾಟರ್ ಮಾರಾಟ ಮಾಡುತ್ತಿದ್ದ ರಿಷಬ್ ಶೆಟ್ಟಿ ಇವತ್ತು ಕನ್ನಡ ಚಿತ್ರರಂಗದ ಮುಂಚೂಣಿ ಸ್ಥಾನ ಗಿಟ್ಟಿಸಿದ್ದಾರೆ. ಒಂದು ಕಾಲದಲ್ಲಿ ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡುತ್ತಿದ್ದ ವಿಜಯ್ ಸೇತುಪತಿ ಇವತ್ತು ಭಾತರದ ಅತ್ಯುತ್ತಮ ನಟ ಅನ್ನಿಸಿಕೊಂಡಿದ್ದಾರೆ. ಛಲ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ […]
ಕೆಲವೊಂದು ಸಿನಿಮಾಗಳೇ ಹಾಗೆ. ಕಾರಣವೇ ಇಲ್ಲದೆ ಎಳೆದಾಡಿಬಿಟುತ್ತವೆ. ಎಲ್ಲವೂ ತಯಾರಿದ್ದೂ ಬಿಡುಗಡೆ ಲೇಟಾಗಿಬಿಡುತ್ತವೆ. ಆ ಕೆಟಗರಿಗೆ ಸೇರುವ ಸಿನಿಮಾ ಎಂ.ಆರ್.ಪಿ.. ಸದ್ಯದ ಮಟ್ಟಿಗೆ ಸೀನಿಯರ್ ಡೈರೆಕ್ಷರ್ ಅನ್ನಿಸಿಕೊಂಡಿರುವ ಎಂ.ಡಿ. ಶ್ರೀಧರ್,, ಎಂ.ಡಿ.ಶ್ರೀಧರ್, ಎ.ವಿ.ಕೃಷ್ಣಕುಮಾರ್, ಮೋಹನ್ಕುಮಾರ್ ಎನ್.ಜಿ. ಹಾಗೂ ರಂಗಸ್ವಾಮಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲಾ ಸಿನಿಮಾ ರಂಗವನ್ನು ತೀರಾ ಹತ್ತಿರದಿಂದ ಬಲ್ಲವರು. ಯಾವಾಗ ಶುರು ಮಾಡಿ ಹೇಗೆ ರಿಲೀಸ್ ಮಾಡಿದರೆ ಲಾಭ ಮಾಡಬಹುದು ಅನ್ನೋದನ್ನು ಕರಾರುವಕ್ಕಾಗಿ ತಿಳಿದಿರುವವರು. ಇಷ್ಟು ಅನುಭವಿಗಳಿದ್ದೂ ಸಹ ಎಂ.ಆರ್.ಪಿ. ಎನ್ನುವ ಸಿನಿಮಾ […]