Category: ಸಿನಿಬಜ಼್ ಸುದ್ದಿಸ್ಪೋಟ
-
ರಾಜಕಾರಣಿಗಳ ಚರ್ಮರೋಗಕ್ಕೆ ಮುಲಾಮು ಹಚ್ಚಿದ ನಟಿಯರು ಯಾರು?
ʻʻಯಾವುದಕ್ಕೂ ಇರಲಿ ಅಂತಾ ಜಗದೀಶ್ ಒಂದು ಬಾಲು ಎಸೆದರು.. ಅದನ್ನು ರಪಕ್ಕಂತಾ ಮಾ.ಮು. ಕ್ಯಾಚು ಹಿಡಿದುಬಿಟ್ಟಿತು… ಇದರ ಹೊರತಾಗಿ ಜಗದೀಶ್ ಬಳಿ ಯಾವುದೇ ವಿಡಿಯೋ ಇದ್ದಂತಿಲ್ಲ.ʼʼ ಅನ್ನೋದು ಜಗದೀಶ್ ಅವರನ್ನು ತೀರಾ ಹತ್ತಿರದಿಂದ ಬಲ್ಲ, ಖ್ಯಾತ ವಕೀಲರೊಬ್ಬರ ಈ ಕ್ಷಣದ ಅಭಿಪ್ರಾಯ. ಫೈರ್ ಬ್ರಾಂಡ್ ಅಂತಲೇ ಫೇಮಸ್ಸಾಗಿರೋ ವಕೀಲ ಜಗದೀಶ್ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಲಾಯರ್ ಜಗದೀಶ್ ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿಯೊಬ್ಬರ ಖಾಸಗೀ ವಿಡಿಯೋ ಇದೆ ಅಂತಾ ಹೇಳುತ್ತಲೇ ಬಂದಿದ್ದರು. ಅವರು ವಿಡಿಯೋ…
-
ರವಿಚಂದ್ರನ್ ಅವರ ಬಗ್ಗೆ ದಿಗಂತ್ ಜಡ್ಜ್ ಮೆಂಟ್ ಏನು..?
ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್‌ಲುಕ್ ಮತ್ತು ಟೀಸರ್‌ಗಳಲ್ಲಿ ನಟ ದಿಗಂತ್ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು ಹೊಸ ಪಾತ್ರದ ಬಗ್ಗೆ ದಿಗಂತ್ ಒಂದಷ್ಟು ಮಾತನಾಡಿದ್ದಾರೆ. ೧) ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ನಿಮ್ಮ…
-
ಸಲಾರ್-2 STOP?
2023ರ ಡಿಸೆಂಬರ್ ತಿಂಗಳಲ್ಲಿ ಸಲಾರ್ ಚಿತ್ರ ತೆರೆಗೆ ಬಂದಿತ್ತು. ಕೆ.ಜಿ.ಎಫ್ ಚಿತ್ರದ ಬ್ರಹ್ಮಾಂಡ ಗೆಲುವಿನ ನಂತರ ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನಲ್ಲಿ ತಯಾರಾದ ಚಿತ್ರವಿದು. ಪ್ರಬಾಸ್ ಹೀರೋ ಆಗಿ ನಟಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ದೇಶಾದ್ಯಂತ ವಿಪರೀತ ಕ್ರೇಜ್ ಕ್ರಿಯೇಟ್ ಆಗಿತ್ತು. ಇಡೀ ಇಂಡಿಯಾ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿತ್ತು. ಚಿತ್ರ ಬಿಡುಗಡೆಯ ನಂತರ ಇದು ಉಗ್ರಂ ಚಿತ್ರದ್ದೇ ಮತ್ತೊಂದು ಅವತಾರ ಅನ್ನೋದು ರವೀಲ್ ಆಗಿತ್ತು. ಅತಿಯಾದ ನಿರೀಕ್ಷೆಯಿಂದಲೋ ಏನೋ…
-
ಮೆಹಬೂಬ ಸಿನಿಮಾ ಹಿಂದೆ ರುದ್ರ ನರ್ತನ!
ವಾರಕ್ಕೆ ಮುಂಚೆ ಮೆಹಬೂಬ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಸನ್ ಎರಡು ಸಾವಿರದ ಇಪ್ಪತ್ತನೇ ಮಾಹೆಯಲ್ಲಿ ಶುರುವಾಗಿ ವರ್ಷಾಂತರಗಳ ನಂತರ ಬಿಡುಗಡೆಗೊಂಡ ಚಿತ್ರವಿದು. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋನಲ್ಲಿ ಗೆದ್ದ ಸ್ಪರ್ಧಿಗಳು ಆರಂಭದಲ್ಲಿ ಶ್ಯಾನೆ ಟಾಪಲ್ಲಿ ಕುಂತಿರುತ್ತಾರೆ. ಶಶಿ ಎನ್ನುವ ಹುಡುಗ ಕೂಡಾ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು. ನೀರ್ ದೋಸೆ ಖ್ಯಾತಿಯ ಸ್ಕಂದ ಪ್ರಸನ್ನ ನಿರ್ಮಾಣದಲ್ಲಿ ಆರಂಭಗೊಂಡಿದ್ದ ಸಿನಿಮಾ ಮೆಹಬೂಬ. ಈ ಪಿಚ್ಚರ್ ತಯಾರಾಗೋದು ಕೂಡಾ ತೀರಾ ವಿಳಂಬವಾಯಿತು. ಪ್ರಸನ್ನ ಶುರು ಮಾಡಿದ…
-
ಬಾಲಿವುಡ್ ಪಾಲಾದ ಕನ್ನಡ ಸಿನಿಮಾ
ashwatthama movie shahid kapoor shivarajkumar kannada
-
ಸಲಾರ್ ಮೇಲೆ ಯಾಕೆ ಇವರಿಗೆ ಸೇಡು?
ಕಿತಾಪತಿ ಮಾಡಲು ಎಂತೆಂಥಾ ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ ನೋಡಿ. ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಹೆಮ್ಮೆಯ ನಿರ್ಮಾಣ ಸಂಸ್ಥೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಕೆ.ಜಿ.ಎಫ್., ಕಾಂತಾರ ಎನ್ನುವ ಎರಡು ಸಿನಿಮಾಗಳು ಸಾಕು ಹೊಂಬಾಳೆಯ ಹಿರಿಮೆಯನ್ನು ಸಾರಲು. ಸಧ್ಯ ಹೊಂಬಾಳೆ ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಯಾಗಿದೆ. ಪ್ರಬಾಸ್ ನಟನೆಯ ಸಲಾರ್ ಚಿತ್ರದ ಮೂಲಕ ಹೊಂಬಾಳೆ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲು ಸಿದ್ದವಾಗಿದೆ. ಇದೇ ಹೊತ್ತಿನಲ್ಲಿ ಯಾರೋ ನೀಚನೊಬ್ಬ ಹೊಂಬಾಳೆ…
-
ನಿರ್ಮಾಪಕ ಕುಮಾರ್ ಮೇಲಿನ ಅತ್ಯಾಚಾರ ಆರೋಪ ನಿಜಾನಾ?
ಅನ್ಯಾಯಕ್ಕೊಳಗಾದವರ ಮಾನ ಪ್ರಾಣ ಕಾಪಾಡಲು ಇರುವ ಕಾನೂನು, ವ್ಯವಸ್ಥೆಯನ್ನು ಜನ ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಈಗ ನಮ್ಮ ಕಣ್ಮುಂದೆಯೇ ಇದೆ. ತಿಂಗಳುಗಳ ಹಿಂದೆ ಕನ್ನಡದ ಕೆಲವು ಟೀವಿ ವಾಹಿನಿಗಳಲ್ಲಿ ʻಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಮಾಡಿದ ನಿರ್ಮಾಪಕʼ ಎನ್ನುವ ಸುದ್ದಿಯೊಂದು ಪ್ರಕಟವಾಗಿತ್ತು. ಅದು ೫ಡಿ ಮತ್ತು ಕಲರ್ ಆಫ್ ಟೆಮೇಟೋ ಚಿತ್ರದ ನಿರ್ಮಾಪಕಿ ಸ್ವಾತಿ ಅವರ ಪತಿ ಕುಮಾರ್ ವಿರುದ್ಧ ದಾಖಲಾಗಿದ್ದ ಕೇಸು. ಅವಕಾಶದ ಹೆಸರಿನಲ್ಲಿ ನಿರ್ಮಾಪಕಿಯ ಪತಿ ಹೀಗೆ ಮಾಡಿದ್ದಾರೆ…
-
ದೇಸಾಯಿ ಸೆಟ್ಟಲ್ಲಿ ನಡೆಯಿತೊಂದು ಅನಾಹುತ!
ಸಿನಿಮಾರಂಗದ ಕೆಲವೊಂದು ವ್ಯವಸ್ಥೆ ಹಡಾಲೆದ್ದುಕೂತಿದೆ. ಅನುಭವವಿಲ್ಲದ ನಿರ್ಮಾಪಕ, ಪ್ಯಾಕೇಜ್ ಡೀಲು ಪಡೆದು ಕಾಸು ಮಾಡಲು ಹೊಂಚು ಹಾಕಿದ ಸಾಹಸ ನಿರ್ದೇಶಕ, ಎಲ್ಲೆಲ್ಲಿ ಎಷ್ಟೆಷ್ಟು ಕೀಳಬಹುದು ಅಂತಾ ಲೆಕ್ಕ ಹಾಕುವ ಮ್ಯಾನೇಜರು, ಛಾನ್ಸು ಸಿಕ್ಕಿದ್ದೇ ಬದುಕಿನ ಸಾಧನೆ ಅಂದುಕೊಂಡ ನಿರ್ದೇಶಕ… ಇವರೆಲ್ಲರ ನಡುವೆ ಬೆಂದು ಬಸವಳಿದ ಪುರಾತನ ಛಾಯಾಗ್ರಾಹಕ. ಸ್ವಲ್ಪವೇ ಯಾಮಾರಿದ್ದರೂ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದ ಸೇರಿದಂತೆ ಕನ್ನಡದ ಇಬ್ಬರು ನಟರ ಹೆಣ ಉರುಳುತ್ತಿತ್ತು. ಅದಕ್ಕೆ ಕಾರಣವಾಗಿರೋದು, ʻದೇಸಾಯಿʼ ಎನ್ನುವ ಸಿನಿಮಾ ಮಾಡಲು ಒಟ್ಟಾಗಿರುವ ಕೆಲವು ಬೇಜವಾಬ್ದಾರಿ…
-
ಶಿವಮೊಗ್ಗ ಜೈಲಿನ ಸುತ್ತ…
ಸಾಕಷ್ಟು ಸಿನಿಮಾಗಳಲ್ಲಿ ಜೈಲಿನ ಚಿತ್ರಣಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ವರ್ಕಿಂಗ್ ಜೈಲುಗಳಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದರು. ʼಕೆಂಪʼ ಎನ್ನುವ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೈದಿಯೊಬ್ಬ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಭಾರತದ ಇತರೇ ಜೈಲುಗಳಲ್ಲೂ ಇಂಥಾ ಪ್ರಕರಣಗಳಾಗಿದ್ದವು. ಸಿನಿಮಾದವರ ಸಾವಾಸವೇ ಬೇಡ ಅಂತಾ ಬಂದೀಖಾನೆ ಇಲಾಖೆ ತೀರ್ಮಾನ ಮಾಡಿಬಿಟ್ಟಿತ್ತು. ಬೆಂಗಳೂರಿನ ಹಳೇ ಸೆಂಟ್ರಲ್ ಜೈಲು ಕೂಡಾ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಮಾರ್ಪಟ್ಟಿರೋದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಜೈಲರ್ನಂತಾ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇಡೀ ಜೈಲಿನ ಸೆಟ್ ರೂಪಿಸಿಕೊಳ್ಳುತ್ತಾರೆ.…
-
ಶಿಲ್ಪಾ-ಗಣೇಶ್ ಮಾಡುತ್ತಿರೋದು ಸರಿನಾ?
ಅರುಣ್ ಕುಮಾರ್.ಜಿ ಫೋಟೋಗಳು : ಕೆ.ಎನ್. ನಾಗೇಶ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ 2023ರ ಸೆಪ್ಟೆಂಬರ್ 23ರಂದು ನಡೆಯಲಿದೆ. ಈ ಸಲ ಛೇಂಬರ್ ಅಧ್ಯಕ್ಷ ಸ್ಥಾನಕ್ಕೆ ಯಾರು ಬಂದು ಕೂರಬಹುದು ಎನ್ನುವ ಕುತೂಹಲ ಒಂದು ಕಡೆಯಾದರೆ, ಅಭ್ಯರ್ಥಿಗಳ ನಡುವೆ ಪೈಪೋಟಿ ಮತ್ತೊಂದು ಕಡೆ. ಈ ಬಾರಿ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಥೇಟು ರಾಜಕೀಯ ಪಕ್ಷಗಳ ಪುಢಾರಿಗಳಂತೆ ತಂತ್ರಗಾರಿಕೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ, ಪ್ರಸಕ್ತ ವರ್ಷ ಅಧ್ಯಕ್ಷಸ್ಥಾನ…