ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುದೀಪ್ ಅವರನ್ನು ರಾಜ್ಯಾದ್ಯಂತ ಸ್ಟಾರ್ ಪ್ರಾಚಾರಕನನ್ನಾಗಿಸುವ ಪ್ಲಾನ್ ಬಿಜೆಪಿಯದ್ದು. ಎಲ್ಲವೂ ನಾಳೆ ಮಧ್ಯಾಹ್ನ1.30ಕ್ಕೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಬಯಲಾಗಲಿದೆ ಕಿಚ್ಚ ಸುದೀಪ ರಾಜಕಾರಣಕ್ಕೆ ಬರ್ತಾರಂತೆ… ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಇಂಥದ್ದೊಂದು ಸುದ್ದಿ ಸರಸರನೆ ಹರಿದಾಡುತ್ತದೆ. ಅದು ಹಾಗೇ ತಣ್ಣಗಾಗುತ್ತದೆ. ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಕರಸತ್ತು ನಡೆಸಿವೆ ಅನ್ನೋದಂತೂ ನಿಜ. ಆದರೆ ಸುದೀಪ್ ಯಾವತ್ತೂ ಅಧಿಕೃತವಾಗಿ ಈ ಬಗ್ಗೆ […]
ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್ ಒಂದು ನೆಪವಾಗಿದೆ. ನೂರಿನ್ನೂರು ಸಬ್ಸ್ಕ್ರೈಬರ್ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ. ಸಿನಿಮಾ ವಲಯದಲ್ಲಿ ಸುಶಾಂತ್ ಎನ್ನುವ ಹೇತ್ಲಾಂಡಿಯ ಕಾಟ […]
ಅದೆಷ್ಟು ಜನ ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದರೋ, ಯಾರೆಲ್ಲ ಅಯ್ಯೋ ಅಂದಿದ್ದರೋ, ಅವರೆಲ್ಲರ ಶಾಪ ಒಂದೇ ಏಟಿಗೆ ತಟ್ಟಿದೆ. ಮಾಡಬಾರದ್ದನ್ನೆಲ್ಲಾ ಮಾಡಿ ಧಿಮಾಕಿನಿಂದ ತಿರುಗುತ್ತಿದ್ದ ದವನ್ ಎನ್ನುವ ಬ್ಲೇಡ್ ಗಿರಾಕಿ ಈಗ ಬೇಸಿಗೆ ರಜೆ ಕಳೆಯಲು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾನೆ! ರಾಜಾಜಿನಗರದಲ್ಲಿ ʻಫ್ಲೆಮಿಂಗೋ ಸೆಲೆಬ್ರೆಟೀಸ್ ವರ್ಲ್ಡ್ʼ ಎನ್ನುವ ಕಾಸು ಗೆಬರುವ ಅಂಗಡಿ ಇದೆ. ಕಳೆದ ಹತ್ತು ವರ್ಷಗಳಿಂದ ದವನ್ ಸೋಹಾ ಎನ್ನುವ ಫೋರ್ ಟ್ವೆಂಟಿಯೊಬ್ಬ ಈ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಸಿನಿಮಾ ರಂಗದ ಎಲ್ಲ ವಿಭಾಗಗಳ ತರಬೇತಿ ಕೊಡುತ್ತೇನೆ ಅಂತಾ ಬೋರ್ಡು […]
ನಿರ್ದೇಶಕ ಗುರುಪ್ರಸಾದ್ ಬದುಕು ಹೆಚ್ಚೂಕಮ್ಮಿ ಕೇರ್ ಆಫ್ ಫುಟ್ ಪಾತ್ ಲೆವೆಲ್ಲಿಗೆ ಬಂದು ನಿಂತಿದೆ. ನಂಬಿದವರಿಗೆ ಲಕ್ಷಗಟ್ಟಲೆ ವಂಚಿಸಿದ ಪ್ರತಿಫಲವಾಗಿ ಮಠ ಗುರುಪ್ರಸಾದ ಜೈಲಿಗೆ ಹೋಗಿದ್ದಾನೆ. ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವನು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವನ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ […]
ಕನ್ನಡ ಚಿತ್ರರಂಗವನ್ನು ಕೆಲವು ಅಲಾಲುಟೋಪಿಗಳು ನಿರಂತರವಾಗಿ ಯಾಮಾರಿಸುತ್ತಲೇ ಬಂದಿದ್ದಾರೆ. ಸದ್ಯ ಆ ಲಿಸ್ಟಿಗೆ ಹೊಸೂರು ವೆಂಕಟನೆಂಬ ಗಿರಾಕಿಯೂ ಸೇರಿಕೊಂಡಿದ್ದಾನೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಬಹಿರಂಗ ಸಭೆಯಂತಾ ಸಮಾರಂಭ ಮಾಡಿ ‘ಗಡಿ’ ಎನ್ನುವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಆ ಟ್ರೇಲರಲ್ಲಿ ಹೆಚ್ಚೂ ಕಡಿಮೆ ತಮಿಳು ಕಲಾವಿದರೇ ತುಂಬಿಕೊಂಡಿದ್ದರು. ಅಲ್ಲಿನ ವಾತಾವರಣವನ್ನು ನೋಡಿದವರಿಗೆ, ಇದೇನಿದು ಪ್ಯಾನ್ ಇಂಡಿಯಾ ಸಿನಿಮಾನಾ? ಅಥವಾ ಡಬ್ಬಿಂಗ್ ಚಿತ್ರವಾ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು. ಇದು ಎಷ್ಟು ಭಾಷೆಯಲ್ಲಿ ರಿಲೀಸಾಗುತ್ತಿದೆ? ಅಂತಾ ಕೇಳಿದ್ದಕ್ಕೆ […]
ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ದೂರು ದಾಖಲು ಮಠ, ಎದ್ದೇಳು ಮಂಜುನಾಥ ಮತ್ತಿತರ ಸಿನಿಮಾಗಳ ನಿರ್ದೇಶಕ, ನಟ ಗುರುಪ್ರಸಾದನ ವಂಚನಾ ಪುರಾಣ ಬಗೆದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತಿದೆ. ತಮ್ಮ ಜೊತೆಯಲ್ಲಿದ್ದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಎಂಬುವವರಿಗೆ ಗುರು ಮಾಡಿದ ಮಹಾ ಮೋಸದ ವಿಚಾರವನ್ನು ಇತ್ತೀಚೆಗೆ ತಾನೆ ಪ್ರಕಟಿಸಲಾಗಿತ್ತು. ಈಗ ಮತ್ತೊಬ್ಬರು ಗುರು ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಕಂಪ್ಲೇಂಟು ನೀಡಿದ್ದಾರೆ. […]
ರವಿಚಂದ್ರನ್ ಮನೆ ಮಾರಿಬಿಟ್ಟರಂತೆ. ಸಿಕ್ಕಾಪಟ್ಟೆ ಸಾಲಕ್ಕೆ ಸಿಲುಕಿರುವ ಕ್ರೇಜಿಸ್ಟಾರ್ ಮನೆ ಮಾರಿ ಬಾಡಿಗೆ ಮನೆಗೆ ಹೋಗಿದ್ದಾರೆ – ಎಂಬಿತ್ಯಾದಿ ವಿಚಾರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಪ್ಪ ಮಾಡಿಟ್ಟಿದ್ದ ಮನೆಯನ್ನೂ ಮಾರುವಷ್ಟು ಕನಸುಗಾರ ಕಷ್ಟಕ್ಕೆ ಸಿಲುಕಿದ್ದಾರಾ? ಏನಿದು ವಿಚಾರ? ಇದರ ಅಸಲೀಯತ್ತೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ವತಃ ವಿ. ರವಿಚಂದ್ರನ್ ಮನಬಿಚ್ಚಿ ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ. ನಾನು ಅಂದುಕೊಂಡಂತೆ ನನ್ನ ಸಿನಿಮಾ ಯಶ್ವಿಯಾಗಿಲ್ಲ. ರವಿ ತೋಪಣ್ಣ ಆಗಿದ್ದು ನಿಜ. ಆದರೆ ನನ್ನ ಮನೆಯ ವಿಚಾರದಲ್ಲಿ ಕೆಲವು ಮೀಡಿಯಾದವರು […]
rockne venkatesh
darshan
ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವರು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವರ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡಿದ್ದಾರೆ. ನಂಬಿದವರನ್ನು ಮತ್ತೆ ಮತ್ತೆ ವಂಚಿಸಿದ್ದಾರೆ. ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ. ಮುಲಾಜಿಲ್ಲದೆ ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಎಲ್ಲ ತಿಳಿದಿದ್ದೂ ಆತ್ಮದ್ರೋಹ […]
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರಿಗಿಂತ ಹೆಚ್ಚು ಶಾಕ್ಗೊಳಗಾದವರೆಂದರೆ ಮಾಧ್ಯಮದವರು. ಅವರಿಗೆ ಆಹ್ವಾನವಿರಲಿಲ್ಲ ಅಥವಾ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ ಆ ಕಾರ್ಯಕ್ರಮಕ್ಕೆ ಬಂದ ಕೆಲವು ನಟಿಯರು ಮತ್ತು ಅವರು ತೊಟ್ಟ ಉಡುಗೆಗೊಳು. ಕನ್ನಡದ ಹಲವು ನಟಿಯರು ತಮ್ಮ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಬರುವುದು, ಮಾಧ್ಯಮದವರನ್ನು ಭೇಟಿ ಮಾಡುವುದು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು, ಟಿವಿ ಕ್ಯಾಮೆರಾಗಳ ಮುಂದೆ ಫೋಸು ಕೊಡುವುದು ಎಲ್ಲವೂ ಸಹಜ. ಆದರೆ, ಪತ್ರಿಕಾಗೋಷ್ಠಿಗಳಿಗೆ ಅವರು ಬರವ ರೀತಿ ಮತ್ತು ಇಂತಹ ಕಾರ್ಯಕ್ರಮಗಳಿಗೆ ಬರುವ […]