ಪಾಪ್ ಕಾರ್ನ್

ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಂಗಿತರಂಗಿ ಡೈರೆಕ್ಟರ್!

ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಸಕ್ರಿಯಸಾಗಿರುವ ಸಾಲು ಸಿನಿಮಾಗಳ ಸರದಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟರ ಪೈಕಿ ಟಾಪ್  5 ನಲ್ಲಿರುವ ನಟ. ನವ ನಟರನ್ನು ...
ಕಲರ್ ಸ್ಟ್ರೀಟ್

ಕಿಚ್ಚ ಸುದೀಪ್ ರ ಹೊಸ ಅವತಾರ

ಸ್ಯಾಂಡಲ್ ವುಡ್ ನಲ್ಲಿ ಕೋಟಿಗೊಬ್ಬ ಅಂದಾಕ್ಷಣ ಸಾಹಸ ಸಿಂಹ ಡಾ. ವಿಷ್ಣು ವರ್ದನ್ ಅವರೇ ಕಣ್ಣ ಮುಂದೆ ಬರುತ್ತಾರೆ. ಕೋಟಿಗೊಬ್ಬ ಆ ಕಾಲದ ಸೂಪರ್ ಹಿಟ್ ಸಿನಿಮಾ ಕೂಡ.  ಕಿಚ್ಚ ಸುದೀಪ್ ...
ಕಲರ್ ಸ್ಟ್ರೀಟ್

ಪವರ್ ಸ್ಟಾರ್ ಗೆ ಭಗವಾನ್ ಸಾಥ್!

ಸಂತೋಷ್ ಆನಂದ್ ರಾಮ್  ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಕಾಂಬಿನೇಷನ್ ನಲ್ಲಿ ಮೂಡಿ ಬರ್ತಾಯಿರೋ ಅದ್ಧೂರಿ ಸಿನಿಮಾ ಯುವರತ್ನ. ರಾಜಕುಮಾರ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗಿದ್ದಾರೆ. ವಿಶೇಷ ಅಂದ್ರೆ ಈಗಾಗಲೇ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸ್ಪೆಷಲ್ ವ್ಯಕ್ತಿಯೊಬ್ಬರು ಚಿತ್ರತಂಡ ಸೇರಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಹತ್ತಾರು ಸಿನಿಮಾಗೆ ಆ್ಯಕ್ಷನ್ ಹೇಳಿದ್ದ ನಿರ್ದೇಶಕ ಭಗವಾನ್ ಸ್ಪೆಷಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಈ ಬಗ್ಗೆ ಸ್ವತಃ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ದೊರೆ ಭಗವಾನ್ ವಿನಯ್ ರಾಘವೇಂದ್ರರಾಜ್‌ಕುಮಾರ್ ನಟಿಸಿದ್ದ ‘ಅನಂತು ವರ್ಸಸ್ ನುಸ್ರತ್’  ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಮತ್ತೆ ಯುವರತ್ನ ಸಿನಿಮಾಗೆ ಬಣ್ಣ ಹಚ್ಚಿದ್ದು, ಯುವರತ್ನ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಕಲರ್ ಸ್ಟ್ರೀಟ್

ಹೊಸ ಸಿನಿಮಾಕ್ಕಾಗಿ ಅನಂತು ವರ್ಕ್ ಔಟ್!

ವಿನಯ್ ರಾಜ್‌ಕುಮಾರ್ ಕರಿಕೋಟು ಹಾಕಿ ಅನಂತುv/s ನುಸ್ರತ್ ಚಿತ್ರದಲ್ಲಿ ಅನಂತು ಆಗಿ ಕೋರ್ಟ್‌ ರೂಂನಲ್ಲಿ ವಾದ ಮಾಡಿದ್ಮೇಲೆ ಈಗ ರಗಡ್ ಬಾಕ್ಸರ್ ಆಗಿಬಿಟ್ಟಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ ಫುಲ್ ಫಿಟ್ ಅಂಡ್ ಫೈನ್‌ ಆಗಿ ಎಂಟ್ರಿ ಕೊಡಲಿದ್ದಾರೆ. ಬಾಕ್ಸಿಂಗ್‌ ಗೇಮ್ ಸುತ್ತ ನಡೆಯುವ, ಸಾಮಾನ್ಯ ಹುಡುಗ ಬಾಕ್ಸರ್ಆಗುವ ಕತೆಯಲ್ಲಿ ಪಾತ್ರ ಮಾಡಲಿದ್ದಾರೆ ವಿನಯ್. ಇನ್ನೂ ಹೆಸರಿಡದ, ಪುಷ್ಕರ್ ನಿರ್ಮಾಣದ 11ನೇ ಚಿತ್ರ ಸೆಟ್ಟೇರುತ್ತಿದ್ದು. ಕಿರಿಕ್‌ ಪಾರ್ಟಿ ಚಿತ್ರದ ಸಿನಿಮಾಟೋಗ್ರಾಫರ್‌ಕರಮ್‌ ಚಾವ್ಲಾ ಬಹಳ ವರ್ಷಗಳಿಂದ ರೆಡಿಮಾಡಿಕೊಂಡಿರೋ ಒಂದು ಉತ್ತಮ ಕಥೆಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಅವರ ಬಾಕ್ಸರ್ ಗೆಟಪ್ ರಿವೀಲ್ ಆಗಿದ್ದು, ಹುಟ್ಟುಹಬ್ಬದಂದೇ ಸಿನಿಮಾದ ಮೊದಲು ಲುಕ್ ನ ಫೋಸ್ಟರ್ ಸಹ ಬಿಡುಗಡೆಯಾಗಿದೆ. ಉಳಿದ ತಾರಾಗಣದ ಆಡಿಶನ್ ಪ್ರಕ್ರಿಯೆ ಕೂಡ ನಡೆಯಲಿದೆ. ಜುಲೈ ಆರಂಭದಲ್ಲಿ ಶೂಟಿಂಗ್‌ಗೆ ಪ್ಲ್ಯಾನ್‌ಮಾಡಲಾಗಿದೆ. ಮೊದಲಿಗೆ ವಿನಯ್ ಮೊದಲ ಹಂತದ ಆಕ್ಟಿಂಗ್ ಪೋಶನ್ ಮುಗಿಸಲಾಗುತ್ತೆ. ನಂತ್ರ 1 ತಿಂಗಳ ಅವಧಿಯಲ್ಲಿ ವಿನಯ್ 20 ಕೆ ಜಿ ತೂಕಕಳೆದುಕೊಳ್ಳಬೇಕಿದೆ. ನಂತ್ರ ಉಳಿದ ಪೋಶನ್ ಚಿತ್ರೀಕರಣವಾಗಲಿದೆ. ಈ ಪಾತ್ರವನ್ನ ಚಾಲೆಂಜಿಂಗ್ ಆಗಿ ಸ್ವೀಕರಿಸಿರೋ ವಿನಯ್ ಇದಕ್ಕಾಗಿ 2-3 ತಿಂಗಳಿನಿಂದಸಖತ್ ವರ್ಕ್‌ಔಟ್ ಮಾಡ್ತಾ ಬೆವರಿಳಿಸಿದ್ದಾರೆ.
ಕಲರ್ ಸ್ಟ್ರೀಟ್

ಬ್ರಹ್ಮಚಾರಿಗೆ ಅನ್ಮೋಲ್‌ ಸಾಥ್

ವಿಶ್ವದಾದ್ಯಂತ ತೆರೆಕಂಡು ಭಾರತದ ಸಿನಿಮಾ ಇಂಡಸ್ಟ್ರಿಯನ್ನೇ ಬೆಕ್ಕಸ ಬೆರಗಾಗುವಂತೆ ಕೆಜಿಎಫ್ ಸಿನಿಮಾ ಮಾಡಿತ್ತು. ಚಿತ್ರದ ಮೇಕಿಂಗ್ ನಿಂದ, ಮ್ಯೂಸಿಕ್ ಜೊತೆ ಮೇನ್ ಆಕರ್ಷಣೆ ಅಂದರೆ ರಾಕಿಯ ಹುಚ್ಚೆಬ್ಬಿಸುವ ಡೈಲಾಗುಗಳು. ಒಂದೆಡೆ ಗಡ್ದದಾರಿಯಾಗಿ ...
ಕಲರ್ ಸ್ಟ್ರೀಟ್

ಬುಡಕಟ್ಟಿನ ದಿರಿಸಿನಲ್ಲಿ ಕಾಳಿದಾಸನ ಹೆಂಡ್ತಿ!

ಮದುವೆಯ ಮಮತೆಯ ಕರೆಯೋಲೆ ಸಿನಿಮಾದ ನಂತರ ಸಾಹಿತ್ಯ ರಚನೆಕಾರ ಕವಿರಾಜ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಅದಕ್ಕೆ ಕಾಳಿದಾಸ ಕನ್ನಡ ಮೇಷ್ಟ್ರು ಎಂದು ಹೆಸರಿಟ್ಟಿರುವುದು, ಜತೆಗೆ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಅವರನ್ನು ...
ಕಲರ್ ಸ್ಟ್ರೀಟ್

ಮೊದಲ ಆದ್ಯತೆ ನಾರಾಯಣನಿಗೆ ಮಾತ್ರವಂತೆ!

ಅಜನೀಶ್ ಬಗ್ಗೆ ಅಪಸ್ವರ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಸಿನಿಮಾಗಳಿಗೆ ತೀರಾ ಹೊಸದೆನ್ನುವಂತಾ  ಟ್ಯೂನುಗಳನ್ನು ನೀಡಿ ಕೇಳುಗರ ಕರ್ಣಾನಂದಗೊಳಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅದಾಗಲೇ ಕನ್ನಡದಲ್ಲಿ ಸಾಕಷ್ಟು ಜನ ಮ್ಯೂಸಿಕ್ ...
ಕಲರ್ ಸ್ಟ್ರೀಟ್

ರಾಬರ್ಟ್ ಬಜೆಟ್ಟು ಐವತ್ತೈದು ಕೋಟಿ!

ಡಾ. ರಾಜ್ ಕುಮಾರ್‍ರಂತೆ ಬಜೆಟ್ಟಿನ ಬಗೆಗೆಲ್ಲಾ ತಲೆ ಕೆಡಿಸಿಕೊಳ್ಳದೇ, ಪಡೆದ ಸಂಭಾವನೆಗೆ ತಕ್ಕಷ್ಟು ಕೆಲಸ ಮಾಡಿಬರೋದನ್ನು ಮಾತ್ರ ರೂಢಿಸಿಕೊಂಡ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು. ದರ್ಶನ್ ಅನ್ನೋ ಪವರ್ರನ್ನು ...
ಕಲರ್ ಸ್ಟ್ರೀಟ್

ಮದಗಜನ  ಬೆನ್ನುಬಿದ್ದಳಂತೆ ಆಶಿಕಾ!

ಕ್ರೇಜಿಬಾಯ್ ಅನ್ನೋ ಸಿನಿಮಾದಲ್ಲಿ ಆರಂಭಿಸಿ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರ್ಯಾಂಬೋ-2, ಗರುಡ, ತಾಯಿಗೆ ತಕ್ಕ ಮಗ, … ಹೀಗೆ ಆರಂಭದಲ್ಲಿ ಸ್ಟಾರ್ ನಟರು ಮತ್ತು ದೊಡ್ಡ ...
ಕಲರ್ ಸ್ಟ್ರೀಟ್

ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡ ನವೀನ‌ ಪ್ರತಿಭೆಗಳು!

ಕಾಮನ್ನಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಾಣಸಿಗುವ ಬಹುತೇಕ ಪ್ರಕಟಣೆಗಳಲ್ಲೂ ಸಾರ್ವಜನಿಕರಿಗೆ ವಿನಂತಿ ಎಂಬ ಹೆಡ್ ಲೈನ್ ಗಳನ್ನು ಕಾಣುತ್ತಲೇ ಇರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿಯೂ ಸೇಮ್ ಟೈಟಲ್ಲೇ ಹೆಚ್ಚು ಸದ್ದು ...

Posts navigation