“ನನಗೇನಾದರೂ ಹೆಚ್ಚು ದುಡ್ಡು ಸಿಕ್ಕರೆ, ನಿನ್ನನ್ನು ಹೀರೋ ಮಾಡಿ ಒಂದು ಚಿತ್ರ ಮಾಡುತ್ತೇನೆ … ಎಂದು ಹೇಳಿದ್ದರಂತೆ ಶಿವಾನಂದ್ ಎಸ್. ನೀಲಣ್ಣನವರ್. ಅದರಂತೆ ಅವರು ನಡೆದುಕೊಂಡಿದ್ದು, ತಮ್ಮ ಸ್ನೇಹಿತನನ್ನು ಹೀರೋ ಆಗಿ ಮಾಡಿ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಆ ಚಿತ್ರ ಅಕ್ಟೋಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಾಂಪಿಯನ್ ಕೋವಿಡ್ಗೂ ಮೊದಲೇ ಪ್ರಾರಂಭವಾದ ಚಿತ್ರ. ದಿವಂಗತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಮೆಚ್ಚಿನ ಅಸೋಸಿಯೇಟ್ ಆಗಿದ್ದ ಶಾಹುರಾಜ್ ಶಿಂಧೆ ನಿರ್ದೇಶನದ ಚಿತ್ರ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗ […]
ಜೈದ್ ಖಾನ್ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಅಪ್ಪ ಕರ್ನಾಟಕ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿ. ಕೂತರೂ ನಿಂತರೂ ಸುದ್ದಿಯಾಗುವ ಉದ್ಯಮಿ. ಇಂಥರವ ಮಗ ಸಿನಿಮಾರಂಗಕ್ಕೆ ಬಂದಾಗ ಜನ ತಲೆಗೊಂದು ಮಾತಾಡಿದ್ದರು. ಯಾವಾಗ ಜೈದ್ ನಟನೆಯ ಮೊದಲ ಸಿನಿಮಾ ʻಬನಾರಸ್ʼ ಚಿತ್ರದ ʻಮಾಯ ಗಂಗೆʼ ಹಾಡು ಲೋಕಾರ್ಪಣೆಯಾಯಿತೋ? ಆಗ ಅಂದವರ ಅಂಡು ಸದ್ದು ನಿಲ್ಲಿಸಿತು. ʻಹುಡುಗ ಸಿನಿಮಾರಂಗದಲ್ಲಿ ಭದ್ರವಾಗಿ ನಿಲ್ಲೋದು ಗ್ಯಾರೆಂಟಿʼ ಅಂತಾ ಒಳಗೊಳಗೇ ಮಾತಾಡಿಕೊಂಡರು. ಅಪ್ಪನ ರಾಜಕಾರಣದ ವರ್ಚಸ್ಸು, ವ್ಯವಹಾರ, ಶ್ರೀಮಂತಿಕೆ – ಇವೆಲ್ಲದರ ಹೊರತಾಗಿ […]
ಭಾರತೀಯ ಚಿತ್ರರಂಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಬಿಟ್ಟರೆ ಬಹುಶಃ ಅತೀ ಹೆಚ್ಚು ಬ್ಯುಸೀ ಇರುವ ನಟ ಅಂದರೆ ಅದು ಡಾಲಿ ಧನಂಜಯ ಇರಬೇಕು! ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ […]