ಅದೇನು ದುರಂತವೋ ಗೊತ್ತಿಲ್ಲ. ತಮಿಳಿನ ಹಾಸ್ಯನಟರೆಲ್ಲಾ ಒಬ್ಬರ ಹಿಂದೆ ಒಬ್ಬರು ಕಾಲವಾಗುತ್ತಿದ್ದಾರೆ. ನೆನ್ನೆ ಫೆಬ್ರವರಿ 19ರಂದು ಸುಪ್ರಸಿದ್ದ ಕಾಮಿಡಿ ಕಲಾವಿದ ಮೈಲ್ಸಾಮಿ ಇಹಲೋಕ ತ್ಯಜಿಸಿದ್ದಾರೆ. (57 ವರ್ಷ ವಯಸ್ಸು) ಸತ್ಯಮಂಗಲ ಮೂಲದ ಮೈಲ್ಸಾಮಿ ಬೆಳೆದಿದ್ದೆಲ್ಲಾ ಕೊಯಮತ್ತೂರಿನಲ್ಲಿ. 1984ರಲ್ಲಿ ಬಂದ ದಾವಣಿ ಕನವುಗಳ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದವರು ಮೈಲ್ಸಾಮಿ. ನಂತರ ಪಾಂಡ್ಯರಾಜ ನಿರ್ದೇಶನದ ಕನ್ನಿ ರಾಸಿ ಸಿನಿಮಾದ ದಿನಸಿ ಅಂಗಡಿ ಹುಡುಗನ ಪಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದಾಗುತ್ತಿದ್ದಂತೇ ಪ್ರಭು ನಟನೆಯ ಎನ್ ತಂಗಚ್ಚಿ […]
ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು. ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ […]
ಬದುಕು ನಿರ್ದಯಿ ಅನ್ನಿಸೋದೇ ಇಂಥಾ ಸಂದರ್ಭಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 55 ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿರುವವರು ಬಿ.ಆರ್. ಕೇಶವ. ಸಿನಿಮಾ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಅಂದುಕೊಳ್ಳುವ ಕಾಲದಲ್ಲಿ ತಿಂಗಳಿಗೊಂದು ಚಿತ್ರವನ್ನು ಸುತ್ತಿ ಬಿಸಾಕುತ್ತಿದ್ದವರು ಇದೇ ಕೇಶವ್. ಆಗಿನ್ನೂ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಧಾರಾವಾಹಿಗಳ ನಿರ್ದೇಶನ ಶುರು ಮಾಡಿದ ಕೇಶವ್ ಅತೀ ಕಡಿಮೆ ವಯಸ್ಸಿಗೇ ಡೈರೆಕ್ಟರ್ ಕ್ಯಾಪ್ ತೊಟ್ಟವರು. ಈ ವರೆಗೆ ಇವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 55. ಕೇಶವ್ ಸಿನಿಮಾ ಮಾಡೋ […]
ನಟಿ ಶೃತಿ ಅವರ ಮನೆಯ ಮೂರನೇ ತಲೆಮಾರು ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದೆ. ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದೊಡ್ಡಮ್ಮ ಶೃತಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಮಾವ ಶರಣ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ನಡುವೆ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ […]