ಕಿರುಚಿತ್ರವೊಂದು ಸಿನಿಮಾದ ಮಟ್ಟಕ್ಕೆ ಟಾಕ್ ಕ್ರಿಯೇಟ್ ಮಾಡೋದು ಸಲೀಸಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆದಿರುವ ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ `ಜೀವಸಖಿ’ ಕಿರುಚಿತ್ರ ಬಿಡುಗಡೆಗೊಂಡಿದೆ. ಅಚ್ಚುಕಟ್ಟಾದ ಸಮಾರಂಭವೊಂದರಲ್ಲಿ, ಸಂಗಮ್ ಟಾಕೀಸ್ ಯೂ ಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆಗೊಂಡಿರುವ ಜೀವಸಖಿ, ಮೊದಲಿಗೆ ಅಲ್ಲಿದ್ದ ಪ್ರೇಕ್ಷಕ ವರ್ಗವನ್ನು ಸೆಳೆದುಕೊಂಡಿತ್ತು. ಜೀವಸಖಿಯನ್ನು ನೋಡಿದವರೆಲ್ಲರೂ ಮೆಚ್ಚುಗೆಯ ಮಾತಾಡಿದ್ದರು. ಈಗ ಸೋಷಿಯಲ್ ಮೀಡಿಯಾದ ತುಂಬಾ ಈ ಪುಟ್ಟ ಸಿನಿಮಾಗೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಿದೆ. ಚೆಂದದ ಪ್ರೇಮದ ಪುಳಕಗಳನ್ನು ಒಳಗೊಂಡಿರುವ ಕಿರುಚಿತ್ರ ಜೀವಸಖಿ. […]
ಅನ್ಯಾಯಕ್ಕೊಳಗಾದವರ ಮಾನ ಪ್ರಾಣ ಕಾಪಾಡಲು ಇರುವ ಕಾನೂನು, ವ್ಯವಸ್ಥೆಯನ್ನು ಜನ ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಈಗ ನಮ್ಮ ಕಣ್ಮುಂದೆಯೇ ಇದೆ. ತಿಂಗಳುಗಳ ಹಿಂದೆ ಕನ್ನಡದ ಕೆಲವು ಟೀವಿ ವಾಹಿನಿಗಳಲ್ಲಿ ʻಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಮಾಡಿದ ನಿರ್ಮಾಪಕʼ ಎನ್ನುವ ಸುದ್ದಿಯೊಂದು ಪ್ರಕಟವಾಗಿತ್ತು. ಅದು ೫ಡಿ ಮತ್ತು ಕಲರ್ ಆಫ್ ಟೆಮೇಟೋ ಚಿತ್ರದ ನಿರ್ಮಾಪಕಿ ಸ್ವಾತಿ ಅವರ ಪತಿ ಕುಮಾರ್ ವಿರುದ್ಧ ದಾಖಲಾಗಿದ್ದ ಕೇಸು. ಅವಕಾಶದ ಹೆಸರಿನಲ್ಲಿ ನಿರ್ಮಾಪಕಿಯ ಪತಿ ಹೀಗೆ ಮಾಡಿದ್ದಾರೆ […]
ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ, ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ “ಇನಾಮ್ದಾರ್ ” ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ.ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು. ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ […]
ಮಗಧೀರ, ಬಾಹುಬಲಿ, ಆರ್ ಆರ್ ಆರ್ ದಂತಹ ಹಿಟ್ ಚಿತ್ರಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ , ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್ ಎಸ್ ರಾಜಮೌಳಿಯ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆದ ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದು ಆರ್ ಚಂದ್ರು ಅವರು ಈ ಚಿತ್ರಕ್ಕೆ […]
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಕನ್ನಡಕ್ಕೂ ಪದಾರ್ಪಣೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ನಿರ್ಮಿಸ್ತಿರುವ ಈ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಮೆಗಾ ಅನೌನ್ಸ್ ಮೆಂಟ್ ಮಾಡಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಇಳಯದಳಪತಿ ವಿಜಯ್ ಸುಪುತ್ರ ನಿರ್ದೇಶನದ ಚೊಚ್ಚಲ ಸಿನಿಮಾಗೆ ಲೈಕಾ ಹಣ ಹಾಕುತ್ತಿದೆ. ಸ್ಟಾರ್ ಸಿನಿಮಾ ಮೇಕರ್ಸ್ ಜೊತೆಗೆ ಯುವ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸುತ್ತಿರುವ ಲೈಕಾ ಸೃರ್ಷಿಕರ್ತ ಸುಭಾಷ್ ಕರಣ್ ಈಗ ವಿಜಯ್ ಪುತ್ರ ಜೇಸನ್ ಸಂಜಯ್ ವಿಜಯ್ […]
ಇತ್ತೀಚೆಗೆ ಸುಮಾರಷ್ಟು ಸಿನಿಮಾಗಳು ಬರುತ್ತಿವೆ; ಹೋಗುತ್ತಿವೆ. ಗೆಲುವು ಮಾತ್ರ ಎಲ್ಲರ ಕೈಗೆಟುಕುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಥೇಟರಿಗೆ ಎಳೆದುತರಲು ಸಿನಿಮಾ ತಂಡಗಳು ಹರಸಾಹಸ ಮಾಡುತ್ತಿವೆ. ಇದರ ನಡುವೆ, ಯಾವುದೇ ಪಬ್ಲಿಸಿಟಿ ಗಿಮಿಕ್ ಇಲ್ಲದೆ, ಅಬ್ಬರದ ಪ್ರಚಾರ ಮಾಡಿ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸದೆ, ನೋಡಿದವರ ಮನಸ್ಸಿಗೆ ಹತ್ತಿರವಾಗಿ, ಗೆದ್ದ ಸಿನಿಮಾ ʻಕೌಸಲ್ಯಾ ಸುಪ್ರಜಾ ರಾಮʼ. ಜೈಲರ್ ಸಿನಿಮಾ ಅಡ್ಡ ಬರದಿದ್ದರೆ ಈ ಹೊತ್ತಿಗೇ ಇನ್ನೂ ಬೇರೆಯದ್ದೇ ಲೆವೆಲ್ಲಿಗೆ ತಲುಪಬೇಕಿದ್ದ ಚಿತ್ರವಿದು. ʻಕೌಸಲ್ಯಾ ಸುಪ್ರಜಾ ರಾಮʼ ನೋಡಿದ ಪ್ರತಿಯೊಬ್ಬರಿಗೂ ಖುಷಿ […]
ಜೈಲರ್, ಬೋಳಾ ಶಂಕರ್ ಮೊದಲಾದ ಪರಭಾಷೆ ಸಿನಿಮಾಗಳು ಇದೇ ವಾರ ತೆರೆ ಮೇಲೆ ಲಗ್ಗೆ ಇಡುತ್ತಿವೆ. ಇದರ ನೇರ ಪರಿಣಾಮ ಬಿದ್ದಿರುವುದು ಕನ್ನಡ ಚಿತ್ರರಂಗದ ಮೇಲೆ. ಕೆಟ್ಟ ಸೋಲಿನಿಂದ ಸೊರಗಿದ್ದ ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರಡು ಮೂರು ವಾರಗಳಿಂದ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಹಾಸ್ಟೆಲ್ ಹುಡುಗರು ಮತ್ತು ಕೌಸಲ್ಯಾ ಸುಪ್ರಜಾ ರಾಮ ಎಂಬ ಎರಡು ಸಿನಿಮಾಗಳು ಹುಟ್ಟುಹಾಕಿದ ಭರವಸೆ. ಹೆಚ್ಚೂಕಮ್ಮಿ ಕನ್ನಡ ಸಿನಿಮಾ ಉದ್ಯಮ ಬಾಗಿಲು ಮುಚ್ಚುತ್ತದಾ ಎನ್ನುವ ಹಂತ ತಲುಪಿತ್ತು. ಕಾಂತಾರಾ […]
ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ದಲ್ಲಿ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ತೂಕ ಹೆಚ್ಚಿದೆ. ನವ ಪ್ರತಿಭೆ ಎಸ್.ವಸಂತ್ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು […]
ರವೀಂದ್ರ ತುಂಬರಮನೆ-ರಮೇಶ್ ಬೇಗಾರ್ ಸೃಷ್ಟಿಸಿದ ಜಲಪಾತ ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ, ರಿಂದ. ನಟ ಪ್ರಮೋದ್ ಶೆಟ್ಟಿ ಅವರಿಗಾಗಿ ವೈಶಂಪಾಯನ ತೀರ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಸದ್ಯ ʻಜಲಪಾತʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಜಲಪಾತದಲ್ಲಿದೆ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, […]
ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಆಗಾಗ ಅರಳುತ್ತಿರುತ್ತವೆ. ಈ ವಾರ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾದಲ್ಲೇ ಕನ್ನಡದ ಮೂವರು ಟಾಪ್ ಸ್ಟಾರ್ಗಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾ ಮಾಡಿರೋರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ರವಿಚಂದ್ರನ್ ರಿಂದ ಹಿಡಿದು ಸುದೀಪ್, ಶ್ರೀಮುರಳಿ ತನಕ ಕನ್ನಡ ಹಿರಿ, ಕಿರಿಯ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ಹಿರಿಯ ನಟ ಶಿವಣ್ಣ! ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ […]