ತುಂಬಾ ಜನರ ಲೈಫ್ ಹೀಗೇ ಅನ್ಸುತ್ತೆ… ನಮ್ಮನ್ನು ಯಾರೋ ಇಷ್ಟ ಪಡ್ತಾರೆ. ನಾವ್ ಯಾರನ್ನೋ ಇಷ್ಟ ಪಡ್ತೀವಿ. ಆದ್ರೆ, ಕೊನೆಗೆ ಇನ್ಯಾರನ್ನೋ ಮದುವೆಯಾಗ್ತೀವಿ. ಇನ್ನು ಎಷ್ಟೋ ಸಲ ಹೀಗೂ ಆಗತ್ತೆ. ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ಆಜನ್ಮ ಶತ್ರುಗಳಂತಾಡಲು ಶುರು ಮಾಡುತ್ತಾರೆ. ಮುಖ ನೋಡಿದರೂ ಉರಿದುರಿದು ಬೀಳುತ್ತಾರೆ. ಕೆಟ್ಟ ರೀತಿಯಲ್ಲಿ ಕಿತ್ತಾಡಿಕೊಂಡು ಬಿಟ್ಟು ನಡೆಯುವ ತೀರ್ಮಾನಕ್ಕೆ ಬರುತ್ತಾರೆ. ಮತ್ತೊಂದು ವರ್ಗವಿರುತ್ತದೆ. […]
ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರು, ಬಂಧವಿದ್ದೂ ದಿಕ್ಕಾಪಾಲಾದವರು. ಎಲ್ಲ ಇದ್ದೂ ಏನೂ ಇಲ್ಲದವರು… ಬದುಕಿಗೆ ನೂರೆಂಟು ಮುಖಗಳು. ಒಬ್ಬೊಬ್ಬರ ಲೈಫಲ್ಲೂ ಒಂದೊಂದು ಬಗೆಯ ಕೊರತೆ, ಸಂಕಟ. ಇವುಗಳ ನಡುವೆಯೂ ಖುಷಿಯನ್ನು ಹುಡುಕಿಕೊಳ್ಳಬೇಕು. ಆಗ ತೆರೆದುಕೊಳ್ಳೋದು ಹೊಸ ದಿನಚರಿ! ಖರೀದಿಸಲು ಸಾಧ್ಯವಾಗದ್ದು ಅಂತೇನಾದರೂ ಇದ್ದರೆ ಅದು ಪ್ರೀತಿ ಮಾತ್ರ. ಅದು ಮಾಯೆ. ಯಾರಿಗೆ, ಯಾವಾಗ, ಎಲ್ಲಿ ದಕ್ಕುತ್ತದೆ ಅಂತಾ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಬದುಕು ಇಷ್ಟೇ ಅಂತಾ ತೀರ್ಮಾನಿಸಿ ನಿಂತ ಒಣ ಹೃದಯದಲ್ಲಿಯೂ, ಯಾವುದೇ ಕ್ಷಣ ಒಲವಿನ ಚಿಗುರು ಟಿಸಿಲೊಡೆಯಬಹುದು. ಸಾವಿರ […]