ಕಳೆದ ಮೂರು ದಶಕಗಳಲ್ಲಿ ರೌಡಿಸಂ ಕಥಾವಸ್ತುವಿನ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಸ್ವತಂತ್ರ ಬಂದ ನಂತರ ರೌಡಿಸಂ ಹೇಗೆ ಜನ್ಮ ಪಡೆಯಿತು? ಅಂಡರ್ ವರ್ಲ್ಡ್ ಎನ್ನುವ ಕಾನ್ಸೆಪ್ಟು ಹುಟ್ಟಿಕೊಂಡಿದ್ದು ಹೇಗೆ ಅನ್ನೋದನ್ನು ಬಹುಶಃ ಯಾರೂ ಅನಾವರಣಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಈಗ ತೆರೆ ಕಂಡಿರುವ ಕಬ್ಜ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ; ಅದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗೆದ್ದಿದೆ. ಚಿತ್ರದ ಕಥೆ ಶುರುವಾಗೋದೇ ಸ್ವತಂತ್ರ್ಯಪೂರ್ವದಲ್ಲಿ. ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮನ ಪತ್ನಿ ತನ್ನಿಬ್ಬರು ಮಕ್ಕಳ ಜೊತೆಗೆ ಬದುಕು ಕಟ್ಟಿಕೊಳ್ಳುತ್ತಾಳೆ. […]
ಬಾಲ್ಯ ಅನ್ನೋದು ಒಟ್ಟಾರೆ ಬದುಕಿನ ತಳಹದಿ. ಆ ಅಡಿಪಾಯ ಒಂಚೂರು ಆಚೀಚೆ ಆದರೂ ಭವಿಷ್ಯವೆನ್ನು ಬಿಲ್ಡಿಂಗು ವಕ್ರವೆದ್ದು ಹೋಗುತ್ತದೆ. ಯಾವುದೇ ವ್ಯಕ್ತಿಯ ಬಾಲ್ಯದ ದಿನಗಳು ಆತನ ಬದುಕನ್ನು ರೂಪಿಸುತ್ತವೆ ಅನ್ನೋದನ್ನು ಬಹುಶಃ ʻಕಡಲ ತೀರದ ಭಾರ್ಗವʼ ಚಿತ್ರ ನಿರೂಪಿಸುತ್ತದೆ. ದೇಹ ಎರಡು ಜೀವ ಒಂದೇ ಎನ್ನುವಂತೆ ಬೆಳೆಯುವ ಇಬ್ಬರು ಸ್ನೇಹಿತರು. ಅವರ ನಡುವೆ ಬರುವ ಮತ್ತೊಂದು ಪಾತ್ರ. ಆ ನಂತರದ ಬೆಳವಣಿಗೆಗಳು, ಬದಲಾಗುವ ಮನಸ್ಥಿತಿ, ಪರಿಸ್ಥಿತಿಗಳು ಮುಂದೆ ನಡೆಯುವ ಏನೆಲ್ಲಾ ಘಟನೆಗಳಿಗೆ ಕಾರಣವಾಗುತ್ತದೆ ಅನ್ನೋದು ಕಡಲ ತೀರದ […]
ಕನ್ನಡದ ಚಿತ್ರರಂಗ ಇನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡಿದೆ. ಅಪ್ಪನ ಆಸೆ ಈಡೇರಿಸಲು ಮಗ ಮುಂದೆ ನಿಲ್ಲೋ ಕತೆಗಳಿಲ್ಲಿ ಮಾಮೂಲು. ಆದರೆ ಅದಕ್ಕೆ ತದ್ವಿರುದ್ದವಾದ ಕತೆಯ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಜೂಲಿಯೆಟ್೨. ಯಾವುದೋ ಕಾಲದಲ್ಲಿ ಅಪ್ಪ ಬಿಟ್ಟುಬಂದ ಊರಿನ ದಾರಿಯಲ್ಲಿ ಸಾಗುವ ಹೆಣ್ಣುಮಗಳು. ಅದಕ್ಕೆ ಕಾರಣ ಅಪ್ಪನಿಗೆ ಕೊಟ್ಟ ಮಾತು. ಅನಿರೀಕ್ಷಿತವಾಗಿ ಸಾವನ್ನಪ್ಪುವ ಅಪ್ಪ ಉಸಿರು ನಿಲ್ಲಿಸುವ ಮುನ್ನ ಮಗಳಿಗೆ ಒಂದು ಟಾಸ್ಕ್ ಕೊಟ್ಟಿರುತ್ತಾರೆ. ಅದನ್ನು ಈಡೇರಿಸಲು ಈಕೆ ಅಪ್ಪನ ಊರಿಗೆ ಹೋಗುತ್ತಾಳೆ. ಅಲ್ಲಿನ ಚಿತ್ರಣ ಸಂಪೂರ್ಣ […]
ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ… ಅನ್ನೋ ಮಾತಿದೆಯಲ್ಲಾ ಹಾಗೇ ಚಿತ್ರರಂಗದಲ್ಲಿ ಕೂಡಾ. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ಈಗೇ ಬೆಳೆದಿರುತ್ತದೆ. ಎಲ್ಲೆಲ್ಲಿಂದಲೋ ಬಂದವರು ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ. ಅದಾಗಲೇ ಎರಡು ಬಾರಿ ಸೋಲು ಕಂಡ ನಿರ್ದೇಶಕ. ಅವನನ್ನು ಅವಮಾನಿಸುವ ಬೆಳೆದು ನಿಂತ ಹೀರೋಗಳು. ಸೆಟೆದು ನಿಂತವನು ಮಾಡೋದು ಏನೇನೂ ಅಲ್ಲದ, ಯಾವುದೋ ಶಾಲೆಯಲ್ಲಿ ಪಾಠ ಮಾಡುವ ಮೇಷ್ಟ್ರನ್ನು ಕರೆತಂದು ಹೀರೋ ಮಾಡುತ್ತಾನೆ. […]
ಬುಡಕಟ್ಟು ಜನರ ಬದುಕೇ ಹೀಗಾ? ಒಂದಲ್ಲಾ ಒಂದು ಭಯದಲ್ಲೇ ಇವರು ಬದುಕಬೇಕಾ? ಕಾಡು, ಮೃಗಗಳ ನಡುವೆ ಜೀವಿಸುವ ಈ ಜನ ಅಲ್ಲಿನ ಪಶು, ಪ್ರಾಣಿಗಳಿಗಿಂತಾ ಹೆಚ್ಚು ಭಯಪಡೋದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ. ಯಾವ ಹೊತ್ತಿನಲ್ಲಿ ಬೇಕಾದರೂ ಇವರು ಆದಿವಾಸಿಗಳ ಮಾನ, ಪ್ರಾಣ, ಬದುಕುವ ಹಕ್ಕುಗಳಿಗೆ ಸಂಚಕಾರ ತರಬಹುದು. ʻಗೌಳಿʼ ಎನ್ನುವ ಚಿತ್ರವೊಂದು ಬಿಡುಗಡೆಯಾಗಿದೆ. ಬಹುಕಾಲದ ನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಮರುಪ್ರವೇಶಿಸಿರುವ ಸಿನಿಮಾ ಇದು. ತಾನೇ ಕಟ್ಟಿದ ಹಸು, ಮೇಕೆಗಳನ್ನೂ ಕೊಯ್ಯಲು ಕೊಡದ, ಅವುಗಳು ನೀಡುವ […]
ದುಡ್ಡೊಂದಿದ್ರೆ ಸಾಕು. ಎಲ್ಲವನ್ನೂ ಪಡೆದುಕೊಳ್ಳಬಹುದು. ಎನ್ನುವ ಮನಸ್ಥಿತಿಯ ಹುಡುಗರು. ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜ. ಹಾಗಂತ ಅದನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ದುಡ್ಡಿನ ಕುರಿತು ನಾನಾ ಮಜಲುಗಳನ್ನು ತೆರೆದು ತೋರಿಸುವ ಸಿನಿಮಾ ʻರೂಪಾಯಿʼ. ಎಲ್ಲೆಲ್ಲಿಂದಲೋ ಬಂದು ಒಂದು ಕಡೆ ಸೇರಿದವರ ಮನಸ್ಥಿತಿ, ಪಪರಿಸ್ಥಿತಿಗಳು ಬೇರೆಯದ್ದೇ ಆಗಿರುತ್ತದೆ. ಆದರೆ ಎಲ್ಲರ […]
ಈ ದುನಿಯಾದಲ್ಲಿ ಇವರು ಒಳ್ಳೆಯವರು, ಅವರು ಕೆಟ್ಟವರು ಅಂಥಾ ಒಂದೇ ಏಟಿಗೆ ಏಳಿಬಿಡಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಬರಿಯ ಒಳ್ಳೆಯತನ, ಪ್ರಾಮಾಣಿಕತೆ ವ್ಯಕ್ತಿಯೊಬ್ಬನನ್ನು ನೋಡುಗರ ದೃಷ್ಟಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಚಿತ್ರಿಸಿಬಿಡುತ್ತದೆ. ಹಾಗೆಯೇ, ವ್ಯಸನಕ್ಕೆ ಬಿದ್ದ ವ್ಯಕ್ತಿ ಎಂಥ ಹೀನ ಕೆಲಸ ಮಾಡಲು ಕೂಡಾ ಮುಂದಾಗುತ್ತಾನೆ. ಯಾವತ್ತಾದರೊಂದು ದಿನ ಮುಖವಾಡ ಕಳಚಿಬೀಳುತ್ತದೆ ಅನ್ನೋ ಭಯದಲ್ಲಿ ಬದುಕುವುದಕ್ಕಿಂತಾ ಗೌರವಯುತವಾಗಿ ಬಾಳ್ವೆ ನಡೆಸೋದು ಉತ್ತಮ… ʻಲಾಂಗ್ ಡ್ರೈವ್ʼ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿದೆ. ಈ ಚಿತ್ರದಲ್ಲೂ ಇಂಥ […]
ತುಂಬಾ ಜನರ ಲೈಫ್ ಹೀಗೇ ಅನ್ಸುತ್ತೆ… ನಮ್ಮನ್ನು ಯಾರೋ ಇಷ್ಟ ಪಡ್ತಾರೆ. ನಾವ್ ಯಾರನ್ನೋ ಇಷ್ಟ ಪಡ್ತೀವಿ. ಆದ್ರೆ, ಕೊನೆಗೆ ಇನ್ಯಾರನ್ನೋ ಮದುವೆಯಾಗ್ತೀವಿ. ಇನ್ನು ಎಷ್ಟೋ ಸಲ ಹೀಗೂ ಆಗತ್ತೆ. ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ಆಜನ್ಮ ಶತ್ರುಗಳಂತಾಡಲು ಶುರು ಮಾಡುತ್ತಾರೆ. ಮುಖ ನೋಡಿದರೂ ಉರಿದುರಿದು ಬೀಳುತ್ತಾರೆ. ಕೆಟ್ಟ ರೀತಿಯಲ್ಲಿ ಕಿತ್ತಾಡಿಕೊಂಡು ಬಿಟ್ಟು ನಡೆಯುವ ತೀರ್ಮಾನಕ್ಕೆ ಬರುತ್ತಾರೆ. ಮತ್ತೊಂದು ವರ್ಗವಿರುತ್ತದೆ. […]