ಅವರು ಮೂವರು. ತೀರಾ ಸಣ್ಣ ವಯಸ್ಸಿನಿಂದಲೂ ಒಟ್ಟಿಗೇ ಆಡಿ ಬೆಳೆದವರು. ಜೊತೆಯಲ್ಲೇ ಓದಿದವರು ಕೂಡಾ. ಇಬ್ಬರು ಹುಡುಗರ ನಡುವೆ ಅವಳೊಬ್ಬಳು ಹುಡುಗಿ. ಅಲ್ಲೀತನಕ ಬದುಕಿನಲ್ಲಿ ಒಬ್ಬರನ್ನೊಬ್ಬರು ಬಿಡದಂತೆ ಅಂಟಿಕೊಂಡೇ ತಿರುಗಿರುತ್ತಾರೆ. ಒಬ್ಬನಿಗೆ ಮನೆಯಲ್ಲಿ ಹುಡುಗಿ ನೋಡಿ ಮದುವೆ ಮಾಡುತ್ತಾರೆ. ತಾಯಿ ಇಲ್ಲದೆ ಬೆಳೆದ ಇವಳಿಗೂ ಮದುವೆ ಮಾಡಲು ಅಪ್ಪ ನಿರ್ಧರಿಸಿರುತ್ತಾರೆ. ಗೊತ್ತೂ ಗುರಿ ಇಲ್ಲದ, ಸ್ನೇಹ ಸಲುಗೆ ಇಲ್ಲದ, ಅಸಲಿಗೆ ಪರಿಚಯವೇ ಇಲ್ಲದ, ಎಲ್ಲಿಂದಲೋ ಬಂದವನ ಜೊತೆ ಬದುಕು ಆರಂಭಿಸೋದು ಅವಳಿಗೆ ಬಿಲ್ ಕುಲ್ ಇಷ್ಟವಿಲ್ಲ. ತನ್ನ […]
ಸಾಮಾನ್ಯಕ್ಕೆ ಸಿನಿಮಾ ಅಂದರೆ ಯಾವುದಾದರೂ ಒಂದು ಜಾನರನ್ನು ಸೆಲೆಕ್ಟ್ ಮಾಡಿಕೊಂಡು ರೂಪಿಸಿರುತ್ತಾರೆ. ಅದನ್ನು ಮೀರಿ, ಹಿಂದೆ ಪುಟ್ಟಣ್ಣನವರು ʻಹಂಗು, ಅಕ್ಕರೆ, ಮುನಿತಾಯಿʼ ಎನ್ನುವ ಮೂರು ಕಥೆಗಳನ್ನು ಒಂದು ಕಡೆ ಸೇರಿಸಿ ಕಥಾಸಂಗಮ ಹೆಸರಿನ ಸಿನಿಮಾ ಮಾಡಿದ್ದರು. ಇತ್ತೀಚೆಗೆ ನಾಲ್ಕಾರು ಕಥೆಗಳನ್ನು ಸೇರಿಸಿ ಒಂದು ಚಿತ್ರ ರೂಪಿಸುವ ಟ್ರೆಂಡ್ ಆರಂಭವಾಗಿದೆ. ರಿಷಬ್ ಶೆಟ್ಟಿ ಕೂಡಾ ಕಥಾ ಸಂಗಮದ ಹೆಸರಿನಲ್ಲಿ ಏಳು ಕಥೆಗಳನ್ನು ಒಟ್ಟು ಸೇರಿಸಿದ್ದರು. ಈಗ ಬದುಕಿನ ಒಂಭತ್ತು ರಸಗಳನ್ನು ಸೇರಿಸಿ ಒಂಭತ್ತು ಭಿನ್ನ ಕಥೆಗಳೊಂದಿಗೆ ತೆರೆಗೆ ಬಂದಿರುವ […]