ರೆಡ್ ಅಂಡ್‌ ವೈಟ್  ಖ್ಯಾತಿಯ  ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ಸೆವೆನ್ ರಾಜ್‌ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ  ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಸೆ.೧೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ  ಆಸ್ಕರ್    ಕೃಷ್ಣ ಆ್ಯಕ್ಚನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ.   ಹಿಂದೆ  ಮನಸಿನ  ಮನಸಿನ ಮರೆಯಲಿ  ಎಂಬ ಅಪ್ಪಟ ಪ್ರೇಮಕಥಾನಕದ  ಸಿನಿಮಾ ಮಾಡಿದ್ದ  ಆಸ್ಕರ್  ಕೃಷ್ಣ  ಅವರ ನಿರ್ದೇಶನದ  ಮತ್ತೊಂದು  ಮಾಸ್ ಎಂಟರ್‌ಟೈನರ್  ಚಿತ್ರ  ಇದಾಗಿದೆ.  ನಿರ್ಮಾಪಕ   ಸೆವೆನ್ ರಾಜ್ ಅವರು   ಈ ಚಿತ್ರದಲ್ಲಿ ಖಳನಾಯಕನಾಗುವ ಮೂಲಕ  ಬಹಳ ದಿನಗಳ ನಂತರ ಚಿತ್ರರಂಗಕ್ಕೆ  ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ  ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ  ನಿರ್ಮಾಣ ಸಹ ಮಾಡಿದ್ದಾರೆ.

ಕಾಮಿಡಿ  ಜೊತೆಗೆ  ಕ್ರೈಮ್, ಥ್ರಿಲ್ಲರ್  ಕಥಾನಕ  ಹೊಂದಿರುವ  ಈ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ,  ಚಿತ್ರಕಥೆ ಹಾಗೂ  ಸಂಭಾಷಣೆಗಳನ್ನು  ರಚಿಸಿದ್ದಾರೆ. ಲೋಕೇಂದ್ರ ಸೂರ್ಯ ಕೂಡ ಒಬ್ಬ ನಿರ್ದೇಶಕರಾಗಿದ್ದು,   ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು  ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.  ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ  ಚಿತ್ರದ ಇಬ್ಬರು ಸ್ನೇಹಿತರ  ಪ್ರಮುಖ ಪಾತ್ರಗಳನ್ನು ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸಿದ್ದಾರೆ.  ಈ ಚಿತ್ರದಲ್ಲಿ ಸ್ನೇಹ ಸಂಬಂಧ,  ಪ್ರೀತಿ,  ಪ್ರೇಮ, ರಾಜಕೀಯ. ಕ್ರೈಮ್  ಮತ್ತು ಈಗಿನ ಪೊಲೀಸ್ ವ್ಯವಸ್ಥೆಯಂಥ  ಹಲವಾರು  ಅಂಶಗಳು ಹೇಗೆ ಒಂದಕ್ಕೊಂದು ಸಂಬಂಧ  ಹೊಂದಿರುತ್ತವೆ ಎಂಬುದನ್ನು  ಹೇಳಲಾಗಿದೆ.

ಸೆವೆನ್ ರಾಜ್ ಪ್ರೊಡಕ್ಷನ್ ನಿರ್ಮಿಸಿರುವ  ಈ ಚಿತ್ರದಲ್ಲಿ  ನಾಯಕಿಯಾಗಿ  ಮಲಯಾಳಿ ಬೆಡಗಿ ಗೌರಿ ನಾಯರ್ ಕಾಣಿಸಿಕೊಂಡಿದ್ದಾರೆ.  ಈಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ   ನಿರ್ದೇಶಕ ಆಸ್ಕರ್ ಕೃಷ್ಣ  ಮಾತನಾಡುತ್ತ   ಆರಂಭದಲ್ಲಿ ಈ ಚಿತ್ರಕ್ಕೆ ಬೇರೆ ಬೇರೆ ಟೈಟಲ್ ಪ್ಲಾನ್ ಮಾಡಿದ್ದೆವು. ಇಬ್ಬರು  ಸ್ನೇಹಿತರ ನಡುವಿನ ಬಾಂಡಿಂಗ್, ಅದರ ಸುತ್ತ ಒಂದಷ್ಟು ಘಟನೆಗಳು, ಅವರ ನಡುವೆ ಒಂದು ಹುಡುಗಿ ಬಂದಾಗ ಎದುರಾಗುವಂಥ ಸಂದರ್ಭಗಳು ಈ ಚಿತ್ರದ ಪ್ರಮುಖ ಕಥಾನಕ. ಲೋಕೇಂದ್ರ ಸೂರ್ಯ ಕಲಾವಿದನಾಗಿ ಬಂದವರು ನಂತರ  ಚಿತ್ರಕಥೆಯಲ್ಲೂ ಇನ್‌ವಾಲ್ ಆಗಿ ಅತ್ಯದ್ಭುತವಾದ ಚಿತ್ರಕಥೆ, ಸಂಭಾಷಣೆ ಬರೆದರು. ಚಿತ್ರ ಮಾಡ್ತಾ ಮಾಡ್ತಾ  ಬಜೆಟ್ ಜಾಸ್ತಿಯಾದಾಗ ದೇವರಂತೆ ಬಂದವರೇ ಸೆವೆನ್‌ರಾಜ್. ಒಂದು ಮೂಲದಿಂದ ಇವರ ಪರಿಚಯವಾಯಿತು, ಒಂದೇ ಲೈನ್‌ನಲ್ಲಿ ಕಥೆ ಕೇಳಿ ಬಂಡವಾಳ ಹಾಕಲು ಒಪ್ಪಿದರು.

ಜೊತೆಗೆ ಚಿತ್ರದಲ್ಲಿ  ಖಳನಾಯಕನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಈ ಥರ ಸಿನಿಮಾ ಪ್ರೀತಿಸುವ  ಪ್ರೊಡ್ಯೂಸರ್ ಸಿಗುವುದು ತುಂಬಾ ಕಮ್ಮಿ. ನಮ್ಮ ಶ್ರಮ ಹಾಗೂ ನಿರ್ಮಾಪಕರ ಪ್ರಾಮಾಣಿಕತೆ  ಸೇರಿ ಉತ್ತಮ ಪ್ರಾಜೆಕ್ಟ್ ಹೊರಬಂದಿದೆ. ಲಾಕ್‌ಡೌನ್ ನಂತರ  ಆರಂಭವಾದ  ಮೊದಲ ಚಿತ್ರವೇ ನಮ್ಮದು. ಗೌರಿ ನಾಯರ್ ನನಗೆ ೪-೫ ವರ್ಷಗಳ ಸ್ನೇಹಿತೆ.  ಈಗಾಗಲೇ ಮಲಯಾಳಂನಲ್ಲಿ ಅಭಿನಯಿಸಿದ್ದು, ನಮ್ಮ  ಚಿತ್ರದಲ್ಲಿ  ಉತ್ತಮ  ಅಭಿನಯ ನೀಡಿದ್ದಾರೆ. ಸಿಂಗಲ್‌ಟೇಕ್ ನಾಯಕಿ, ನಿರ್ಮಾಪಕರೂ ಅದ್ಭುತವಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸುನಧುರವಾಗಿ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಅದ್ಭುತವಾಗಿ  ಹಾಡಿದ್ದಾರೆ. ಗಗನ್ ತುಂಬಾ ಚೆನ್ನಾಗಿ ಕ್ಯಾಮೆರಾ ವರ್ಕ್ ಮಾಡಿಕೊಟ್ಟಿದ್ದಾರೆ.

ಸಮಾಜದ ಕಣ್ಣಲ್ಲಿ ನಾಯಕರಿಬ್ಬರೂ ಕ್ರಿಮಿನಲ್ ಆಗಿದ್ದರೂ ಅವರ ನಡುವಿನ ಸ್ನೇಹ ಸಂಬಂಧ ಉತ್ತಮವಾಗಿರುತ್ತದೆ. ಎಷ್ಟೋ ದೊಡ್ಡ ದೊಡ್ಡ ಘಟನೆಗಳು ಸಣ್ಣ ಸಣ್ಣ ಕಾರಣಗಳಿಂದ ಜರುಗುತ್ತವೆ,  ಆದೇ ರೀತಿ ಇಲ್ಲೂ ಆಗುತ್ತದೆ. ಇವರಲ್ಲಿ  ಕ್ರಿಮಿನಲ್ ಯಾರು ? ನಿಜವಾದ ಇನ್ನೋಸೆಂಟ್ ಯಾರು ? ಅನ್ನೋದರ ಮೇಲೆ  ಈ ಚಿತ್ರದ ಕಥೆ ಸಾಗುತ್ತದೆ.  ಬೆಂಗಳೂರು, ತುಮಕೂರು, ಕುಣಿಗಲ್ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ೩ ಹಾಡು. ೨ ಫೈಟ್ಸ್ ಚಿತ್ರದಲ್ಲಿದೆ. ಈಗ ೫೦% ಇದ್ದರೂ ಬಿಡುಗಡೆ ಮಾಡುತ್ತಿದ್ದೇವೆ. ನಿರ್ಮಾಪಕರ ಲಕ್ಕಿ ನಂಬರ್ ೭, ಚಿತ್ರವೂ ೧೭ರಂದೇ ಬಿಡುಗಡೆಯಾಗುತ್ತಿದೆ ಎಂದು  ಚಿತ್ರದ ಕುರಿತಂತೆ ಬಹುತೇಕ ಮಾಹಿತಿಯನ್ನು ಹಂಚಿಕೊಂಡರು.   ನಿರ್ಮಾಪಕ ಸೆವೆನ್ ರಾಜ್ ಮಾತನಾಡಿ ನಮ್ಮ ಕುಟುಂಬದಲ್ಲಿ ನಾನು ಏಳನೇ ಮಗ , ಹಾಗಾಗಿ ನಮ್ಮ ತಂದೆ ನನಗೆ ಸೆವೆನ್‌ರಾಜ್ ಅಂತ ಹೆಸರಿಟ್ಟಿದ್ರು. ಚಿತ್ರದಲ್ಲಿ ಮೇನ್ ವಿಲನ್ ಆಗಿ ಕಾಣಿಸಿಕೊಂಡಿದ್ದೇನೆ. ೩೦ ವರ್ಷಗಳ ಹಿಂದಾದ ಅವಮಾನವೇ ನಾನೀ ಮಟ್ಟಕ್ಕೆ ಬೆಳೆಯಲು ಕಾರಣ, ನಮ್ಮ ಚಿತ್ರವನ್ನು ೭ ಕೋಟಿ ಕನ್ನಡಿಗರು ಗೆಲ್ಲಿಸುತ್ತಾರೆ ಎಂದು ಹೇಳಿದರು. ನಾಯಕಿ ಬಂದಿತಲಿಲ್ಲ, ಛಾಯಾಗ್ರಾಹಕ ಗಗನ್ ಕುಮಾರ್,    ಸಂಗೀತ ನಿರ್ದೇಶಕ ಅನಂತ್ ಅರ್ಯನ್ ಕೂಡ ಹಾಜರಿದ್ದು ಮಾತನಾಡಿದರು.‌

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕರಿಯ ನಿರ್ಮಾಪಕರ ಮತ್ತೊಂದು ಸಿನಿಮಾ!

Previous article

ಲಂಕೆಯೊಳಗೆ ನಿಘಿ ನಿಘಿ ಬೆಂಕಿ ಇದೆ…

Next article

You may also like

Comments

Leave a reply

Your email address will not be published.