ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರೋ ಈ ಹಾಡು ಎಲ್ಲರ ಮನಸುಗಳನ್ನೂ ನವಿರಾಗಿ ತಾಕುತ್ತಾ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ.
ಕಳೆದೇ ಹೋದೆ ನಾನು ಎಂಬ ಈ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಉದಿತ್ ಹಾಡಿರೋ ಈ ಹಾಡು ಮೆಲ್ಲಗೆ ತನ್ನ ನವಿರು ಭಾವಗಳಿಂದಲೇ ಎಲ್ಲರನ್ನೂ ಆವರಿಸಿಕೊಂಡು ಸಾಗುತ್ತಿದೆ. ಈ ಮೂಲಕ ನಿರ್ದೇಶಕ ಜೇಕಬ್ ವರ್ಗೀಸ್ ಅವರ ಮೆಲೋಡಿ ಇಮೇಜ್ ಕೂಡಾ ಮತ್ತಷ್ಟು ಲಕಲಕಿಸಿದೆ.
ಜೇಕಬ್ ವರ್ಗೀಸ್ ಚಿತ್ರಗಳೆಂದರೆ ಭಿನ್ನವಾಗಿಯೇ ಇರುತ್ತವೆ ಅನ್ನೋ ನಂಬಿಕೆ ಪ್ರೇಕ್ಷಕರಲ್ಲಿದೆ. ಅದರಲ್ಲಿಯೂ ಅವರೊಂದು ಚಿತ್ರ ಘೋಶಣೆ ಮಾಡಿದರೆ ಹಾಡುಗಳಿಗಾಗಿ ಕಾಯೋ ಜನರೂ ಇದ್ದಾರೆ. ಸವಾರಿ ಚಿತ್ರದ ವಿಭಿನ್ನ ಹಾಡುಗಳ ಮೂಲಕವೇ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿರೋ ಜೇಕಬ್ ವರ್ಗೀಸ್ ಅದನ್ನು ಚಂಬಲ್ ಮೂಲಕವೂ ಮುಂದುವರೆಸಿದ್ದಾರೆ.ಈ ಮೂಲಕ ಪೂರ್ಣಚಂದ್ರ ತೇಜಸ್ವಿ ಕೂಡಾ ಸಂಗೀತ ನಿರ್ದೇಶಕನಾಗಿ ಮತ್ತೊಂದು ದಿಕ್ಕಿನ ಯಾನ ಆರಂಭಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಭಾರೀ ಹವಾ ಸೃಷ್ಟಿಸಿರೋ ಚಂಬಲ್ ಈಗ ಹಾಡಿನ ಮೂಲಕ ಪ್ರೇಕ್ಷಕರನ್ನ ತಲುಪಿಕೊಂಡಿದೆ.
https://youtu.be/uaV4gaa_oAc #