ಎಲ್ಲರೂ ಕಾತರದಿಂದ ಕಾಯುತ್ತಿದ್ದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ಸವಾರಿ ಬೇರೆಯದ್ದೇ ದಾರಿಯತ್ತ ಹೊರಳಿಕೊಂಡಿರೋದೂ ಕೂಡಾ ಸ್ಪಷ್ಟವಾಗಿದೆ. ಅಯೋಗ್ಯ ಚಿತ್ರಕ್ಕೆ ಸಿಕ್ಕ ಅಗಾಧ ಗೆಲುವಿನ ಖುಷಿ ಚಂಬಲ್ ಮೂಲಕ ಸತೀಶ್ ಪಾಲಿಗೆ ಮತ್ತೆ ಎದುರಾಗಲಿರೋ ಲಕ್ಷಣವೂ ದಟ್ಟವಾಗಿಯೇ ಗೋಚರಿಸಿದೆ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿರೋ ಚಂಬಲ್ ಟ್ರೈಲರ್ ನಿಜಕ್ಕೂ ಪವರ್ ಫುಲ್ಲಾಗಿದೆ. ಭ್ರಷ್ಟಾಚಾರದ ವಿರುದ್ಧ ಎದೆಯೊಡ್ಡಿ ನಿಲ್ಲೋ ಖಡಕ್ ಅಧಿಕಾರಿಯೊಬ್ಬನ ರೋಚಕ ಕಥನವನ್ನ ಈ ಸಿನಿಮಾ ಒಳಗೊಂಡಿದೆ ಎಂಬ ವಿಚಾರವನ್ನ ಈ ಟ್ರೈಲರ್ ರವಾನಿಸಿದೆ.
ಪೊಲೀಸರಿಗೆ ದೂರು ಕೊಡೋಕೆ ಭಯವಾದ್ರೆ ನನಗೆ ಹೇಳಿ ಅನ್ನೋವಷ್ಟು ಖದರ್ ಹೊಂದಿರೋಫ ನಾಯಕನ ಪಾತ್ರದಲ್ಲಿ ನೀನಾಸಂ ಸತೀಶ್ ಮಿಂಚಿದ್ದಾರೆ.ಸವಾರಿಯಿಂದ ಆರಂಭವಾಗ ಪ್ರಥ್ವಿ ವರೆಗೆ ನಿರ್ದೇಶಕ ಜೇಕಬ್ ವರ್ಗೀಸ್ ಅವರದ್ದು ಭಿನ್ನವಾದ ಹಾದಿ. ಪೃಥ್ವಿ ಚಿತ್ರದಲ್ಲಂತೂ ಒಂದು ಮಾಫಿಯಾ ಮೇಲೇ ಅವರು ಬೆಳಕು ಚೆಲ್ಲಿದ್ದರು.
ಈಗ ಬಿಡುಗಡೆಯಾಗಿರೋ ಟ್ರೈಲರ್ ಚಂಬಲ್ನಲ್ಲಿಯೂ ಅಂಥಾದ್ದೇ ಸತ್ಯ ಘಟನೆಯಾಧಾರಿತವಾದ ಕತೆ ಇದೆ ಎಂಬುದರ ಸುಳಿವು ನೀಡಿದೆ. ಅದು ನಿಜವೋ ಅಲ್ಲವೋ ಎಂಬುದು ಚಿತ್ರ ಬಿಡುಗಡೆಯಾದನಂತರವೇ ಗೊತ್ತಾಗಬೇಕಿದೆ. ಆದರೆ ಚಂಬಲ್ ಎಂಬುದು ಈ ನೆಲದ ಜನಸಾಮಾನ್ಯರ ಆಕ್ರೋಶದ ಕಿಡಿಯಂತಿರೋ ಕಥನ ಹೊಂದಿದೆ ಎಂಬುದಂತೂ ಸತ್ಯ. ಭ್ರಷ್ಟಾಚಾರದಿಂದ ಕಂಗಾಲಾಗಿ ನಿಂತವರ ಮನಸಿಂದ ಹಾರಿದ ಕಿಡಿಯೊಂದಕ್ಕೆ ಜೀವ ಬಂದಂಥಾ ಪಾತ್ರದಲ್ಲಿ ನೀನಾಸಂ ಸತೀಶ್ ನಟಿಸಿದ್ದಾರೆ. ಆರಂಭದಿಂದಲೂ ಕೂಡಾ ಸತೀಶ್ ಈ ಚಿತ್ರದಲ್ಲಿ ಇದುವರೆಗಿನ ಚಿತ್ರಗಳಿಗಿಂತ ಬೇರೆಯದ್ದೇ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರ ಅಸಲೀ ಲುಕ್ಕು ಅನಾವರಣಗೊಂಡಿದೆ. ಈ ಟ್ರೈಲರ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತಿದೆ.
https://www.facebook.com/ActorSathish/videos/789191601429177/ #