ನಿರ್ದೇಶಕ ಜೇಕಬ್ ವರ್ಗೀಸ್ ಗೊತ್ತಲ್ಲ? ಸವಾರಿ, ಪೃಥ್ವಿಯಂಥ ಬ್ರಿಲಿಯಂಟ್ ಸಿನಿಮಾಗಳನ್ನು ನಿರ್ದೇಶಿಸಿದವರು. ಮಾಮೂಲಿ ಸಿನಿಮಾಗಳನ್ನು ಹೊರತಾಗಿ ಬೇರೆಯದ್ದೇ ಜಗತ್ತನ್ನು ತೆರೆದಿಡುವ ಅವರ ಸಿನಿಮಾಗಳು, ಈ ನೆಲದ ಸಮಸ್ಯೆಗಳನ್ನೆ ಕಥೆಯನ್ನಾಗಿಸುವ ಬಗೆ ಬಹುಶಃ ಜೇಕಬ್ಗೆ ಒಲಿದಿದೆ.
ಸದ್ಯ ಜೇಕಬರ್ ವರ್ಗೀಸ್ ನೀನಾಸಂ ಸತೀಶ್ ಅವರ ‘ಚಂಬಲ್’ ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾದ ಪಬ್ಲಿಸಿಟಿ ಕೂಡಾ ಅಷ್ಟಾಗಿ ಆರಂಭವಾಗಿಲ್ಲ. ಅಷ್ಟರಲ್ಲಾಗಲೇ ಸಿನಿಮಾವನ್ನು ಖರೀದಿಗಾಗಿ ಪೈಪೋಟಿ ಶುರುವಾಗಿದೆ.
ಈ ಬಗ್ಗೆ ಸ್ವತಃ ನೀನಾಸಂ ಸತೀಶ್ ಹೇಳಿದ ಒಂದು ವಿಚಾರ ಇಲ್ಲಿದೆ ನೋಡಿ
“ಹಾಯ್ ಗೆಳೆಯರೇ ಜೇಕಬ್ ವರ್ಗೀಸ್ ನಿರ್ದೇಶನದ ನನ್ನ ಅಭಿನಯದ ಚಂಬಲ್ ಸಿನಿಮಾ ಟ್ರೈಲರ್ ನೋಡಿ ನೆಟ್ ಫ್ಲಿಕ್ಸ್ ೧೦ಕೋಟಿಗೆ ಆಫರ್ ನೀಡಿದೆ.ಆದರೆ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಹಾಗಿಲ್ಲ ಎಂಬ ಶರತ್ತಿನೊಂದಿಗೆ,ಆದರೆ ನಮ್ಮ ನಿರ್ಮಾಪಕ ನಿರ್ದೇಶಕರಾದ ನಮ್ಮ ಜೇಕಬ್ ಕನ್ನಡ ಪ್ರೇಕ್ಷಕರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಈ ಆಫರ್ ತಿರಸ್ಕಾರ ಮಾಡಿದ್ದಾರೆ ,ಚಂಬಲ್ ಚಿತ್ರದ ಮೊದಲ ಹೆಜ್ಜೆ ತುಂಬ ದಿಟ್ಟವಾಗಿದೆ ,ನಿಮ್ಮೆಲ್ಲರ ಪ್ರೀತಿಯಿದ್ದರೆ ೧೦, ೧೦೦ ಆಗಬಹುದು ಎಂಬ ಧೈರ್ಯದಿಂದ ಪ್ರೇಕ್ಷಕರಿಗಾಗಿ ನಾವು ,ದುಡ್ಡಿಗಾಗಿ ಅಲ್ಲ ಎಂಬುದನ್ನ ಇಲ್ಲಿ ತಿಳಿಸಲು ಇಚ್ಚಿಸುತ್ತೇನೆ ಧನ್ಯವಾದಗಳು”
#
No Comment! Be the first one.