Connect with us

ಸಿನಿಮಾ ವಿಮರ್ಶೆ

ಚಂಬಲ್‌ನಲ್ಲಿದೆ ಹುಲಿಯಂಥಾ ಅಧಿಕಾರಿಯ ಕೊಲೆಯ ರಹಸ್ಯ!

Published

on

ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಐಎಎಸ್ ಅಧಿಕಾರಿ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಆತನ ಛಲ. ಅದಕ್ಕೆ ವಿರುದ್ಧವಾಗಿ ನಿಲ್ಲುವ ಎಂ.ಎಲ್.ಎ, ಮಂತ್ರಿಗಳು, ಅವರ ಮಕ್ಕಳು, ರಿಯಲ್ ಎಸ್ಟೇಟ್ ದೊರೆಗಳು. ಯಾವುದನ್ನೂ ಲೆಕ್ಕಿಸದೆ, ಮೇಲಿಂದ ಮೇಲೆ ಎದುರಾಗುವ ವರ್ಗಾವಣೆಯೆಂಬ ತಂತ್ರಕ್ಕೂ ಮಣಿಯದೆ ಸಿಕ್ಕ ಜಾಗದಲ್ಲೆಲ್ಲಾ ಕಳೆ ಕೀಳಲು ಮುಂದಾಗುವ ಅಧಿಕಾರಿಯ ಧೈರ್ಯ. ಆತ ರೇಡು ಮಾಡಿ, ಸೀಜು ಮಾಡಿಕೊಂಡು ಬಂದ ದಾಖಲೆಪತ್ರಗಳನ್ನು ಕಳವು ಮಾಡಲು ಸಂಚು ಹೂಡುವ ಸರ್ಕಾರಿ ಕ್ರಿಮಿಗಳು. ಕ್ರಿಮಿನಲ್‌ಗಳನ್ನೇ ಬಳಸಿಕೊಂಡು ವ್ಯವಸ್ಥಿತ ಷಡ್ಯಂತ್ರಗಳನ್ನು ರೂಪಿಸುವ ಗೌರ್ಮೆಂಟ್ ಕೇಡಿಗಳ ನಿಯತ್ತು. ಕಡೆಗೊಂದು ಕೊಲೆ. ಅದನ್ನು ಮುಚ್ಚಿಹಾಕಲು ಸ್ಕೆಚ್ಚು ಹಾಕಿ. ಅಂದುಕೊಂಡಂತೇ ಮಾಡಿಮುಗಿಸುವ ದುಷ್ಟಕೂಟ

ನೋ ಡೌಟ್!
ಡಿ.ಕೆ.ರವಿ ಎನ್ನುವ ನಿಷ್ಟಾವಂತ ಅಧಿಕಾರಿಯ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತಲ್ಲಾ? ಆ ಘಟನೆಯ ಸುತ್ತಮುತ್ತಲಿನ ವಿವರಗಳೆನ್ನೆಲ್ಲಾ ಕಲೆಹಾಕಿ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜೇಕಬ್ ವರ್ಗೀಸ್. ಡಿ.ಕೆ.ರವಿಯ ಸಾವನ್ನು ತಮಗೆ ಬೇಕಾದಂತೆ ತಿರುಚಿಕೊಂಡ ರಾಜಕಾರಣಿಗಳು, ಅವರ ತಂತ್ರಗಳಿಗೆ ವಕಾಲತ್ತು ನೀಡಿದ ಆಗಿನ ಸರ್ಕಾರದ ಕೃಪಾಪೋಷಿತ ಬುದ್ಧಿಜೀವಿಗಳ ಕಣ್ಣಿಗೆ ವರ್ಗೀಸ್ ಅವರ ಸಿನಿಮಾ ಕಟ್ಟುಕಥೆಯೆಂಬಂತೆ ಕಾಣಬಹುದು ಅಥವಾ ಹಾಗಂದು ಅವರೆಲ್ಲಾ ಸುಮ್ಮನಾಗಬಹುದು. ಆದರೆ, ಡಿ.ಕೆ.ರವಿಯವರನ್ನು ಹತ್ತಿರದಿಂದ ಬಲ್ಲ, ಅವರನ್ನು ಅರ್ಥಮಾಡಿಕೊಂಡ ಯಾರಿಗೇ ಆದರೂ ‘ಚಂಬಲ್ ಅನ್ನೋ ಸಿನಿಮಾ ಮೂಲಕವಾದರೂ ಕೇಡುಗರ ಸಂಚಿಗೆ ಬಲಿಯಾದ ರವಿ ಅವರ ಆತ್ಮಕ್ಕೆ ಈಗಲಾದರೂ ಶಾಂತಿ ಸಿಗಬಹುದು’ ಎಂಬ ನಿರುಮ್ಮಳ ಭಾವ ಮೂಡಬಹುದು.

ಚಂಬಲ್ ಅನ್ನೋದು ಕಾರ್ಪೋರೇಟ್ ಮತ್ತು ರಾಜಕೀಯ ಕ್ರಿಮಿಗಳ ಒಳಸುಳಿಗಳನ್ನು ಇಂಚಿಂಚಾಗಿ ಬಿಚ್ಚಿಡುವ ಸಿನಿಮಾ. ಈ ಚಿತ್ರದಲ್ಲಿ ನೀನಾಸಂ ಸತೀಶ್ ಅಧಿಕಾರಿ ರವಿಯವರನ್ನು ಆವಾಹಿಸಿಕೊಂಡವರಂತೆ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಯಾಗುವ ದೃಶ್ಯವೊಂದು ಸಾಕು ಸತೀಶ್ ಎಂಥಾ ಅದ್ಭುತ ನಟ ಅನ್ನೋದನ್ನ ತಿಳಿಯಲು. ಇನ್ನು ಸಿನಿಮಾದಲ್ಲಿ ಎಲ್ಲಿಯೂ ಅತಿರಂಜಕವಾದ ಅಂಶಗಳಿಲ್ಲ. ಯಾವುದನ್ನೂ ವಿಜೃಂಭಿಸುವ ಗೋಜಿಗೆ ಹೋಗದೆ ಎಲ್ಲವೂ ಕಣ್ಣಮುಂದೆ ನಡೆದಂತೆ ಕಟ್ಟಿಕೊಡಲಾಗಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಸಹಜ ಸಾವಿನ ಕುರಿತಾಗಿ ಸಾಮಾನ್ಯ ಜನರ ಒಡಲಲ್ಲಿ ಹೊತ್ತಿ ಉರಿಯುತ್ತಿತ್ತಲ್ಲಾ ಜ್ವಾಲೆ.. ಅದು ‘ಚಂಬಲ್’ ಮೂಲಕ ತಕ್ಕ ಮಟ್ಟಿಗಾದರೂ ತಣ್ಣಗಾಗುವಂತೆ ಮಾಡಿದೆ. ಈ ಕಾರಣಕ್ಕೆ ನಿರ್ದೇಶಕ ಜೇಕಬ್ ಮತ್ತು ಸತ್ತ ಅಧಿಕಾರಿಯ ಕುರಿತಾದ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ ಜೀವ ನೀಡಿದ ಸತೀಶ್ ಅವರನ್ನು ಅಭಿನಂದಿಸಬೇಕು.

ಮೆದುಳನ್ನು ನಿಯತ್ತಿನ ಸಮೇತ ಆಳೋ ಮಂದಿಯ ಬೂಟುಗಾಲುಗಳಿಗೆ ಸಮರ್ಪಿಸಿಕೊಂಡ ಅಧಿಕಾರಿಗಳಿಗೆ ಸಾರ್ವಜನಿಕ ವಲಯದಲ್ಲಿ ಯಾವ ಕಿಮ್ಮತ್ತೂ ಇಲ್ಲ. ಹಾಗೆಂದ ಮೇಲೆ ಅಂಥವರೇ ಸೇರಿ ಕೊಟ್ಟ ಡಿಕೆ ರವಿ ಸಾವಿನ ವರದಿಯನ್ನವರು ಗಂಭೀರವಾಗಿ ಪರಿಗಣೆಸುತ್ತಾರಾ? ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ಆಳುವ ದುಷ್ಟರು ಬಡ ಬಡಿಸಿದರು. ಕೆಲ ಹೈಪ್ರೊಫೈಲ್ ಎತ್ತುವಳಿವೀರರು ಅದಕ್ಕೆ ಕೋರಸ್ಸು ಹಾಡಿದರು. ಆದರೂ ಜನಸಾಮಾನ್ಯರೊಳಗೊಂದು ಸತ್ಯ ರವಿ ಕುರಿತಾಗಿ ಪ್ರವಹಿಸುತ್ತಿತ್ತಲ್ಲಾ? ಅದಕ್ಕೆ ಜೇಕಬ್ ವರ್ಗೀಸ್ ಕನ್ನಡಿ ಹಿಡಿದಿದ್ದಾರೆ. ಹುಲಿಯಂಥಾ ಮಗನದ್ದು ಆತ್ಮಹತ್ಯೆ ಅಲ್ಲ ಎಂಬ ರವಿಯವರ ಹೆತ್ತವರ ಕರುಳ ಸಂಕಟ ನೀಗಿ ಸುಪ್ತ ಸಮಾಧಾನ ನೀಡುವಂತೆ ಚಂಬಲ್ ಮೂಡಿ ಬಂದಿದೆ.

ಅಧಿಕಾರಶಾಹಿಯ ದುಷ್ಟತನಗಳ ಬೆಚ್ಚಿ ಬೀಳಿಸೋ ದೃಷ್ಯಾವಳಿಗಳನ್ನೂ ಕೂಡಾಜೇಕಬ್ ವರ್ಗೀಸ್ ಅಬ್ಬರವಿಲ್ಲದೆ ಕಟ್ಟಿ ಕೊಟ್ಟಿದ್ದಾರೆ. ಅದಕ್ಕೆ ನೀನಾಸಂ ಸತೀಶ್ ಸಾಥ್ ನೀಡಿರೋ ರೀತಿಯೇ ಅವರನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು: ಸಾವಿನ ಸಮ್ಮುಖದಲ್ಲಿ ನಿಂತವನ ತ್ರಿಕೋನ ಪ್ರೇಮಗಾನ!

Published

on

ನಾಯಕನ ಪಾಲಿಗೆ ಸಾವೆಂಬುದು ಆಗಾಗ ನೆತ್ತಿ ಸವರಿ ಅಪ್ಪಿಕೊಳ್ಳಲು ಆತುರಗೊಂಡು ನಿಂತಿರುತ್ತದೆ. ಹೀಗೆ ಸಾವಿನ ಸಮ್ಮುಖದಲ್ಲಿ ನಿಂತಾಗ ಕೆಲಮಂದಿ ಮಾನಸಿಕವಾಗಿ ಕುಗ್ಗಿ ತಾವೇ ತಾವಾಗಿ ಅದರ ತೆಕ್ಕೆಗೆ ಬೀಳಿತ್ತಾರೆ. ಮತ್ತೆ ಕೆಲ ಮನಸುಗಳು ಇರೋವಷ್ಟು ದಿನ ತಾವು ಬಯಸಿದಂತೆಯೇ ಉತ್ಕಟವಾಗಿ ಬದುಕಿ ಹೋಗಲು ಬಯಸುತ್ತಾರೆ. ಯಾರಿಗೆ ಯಾರುಂಟು ಚಿತ್ರದ ನಾಯಕನದ್ದು ಎರಡನೇ ಸಾಲಿನ ಜಾಯಮಾನ. ಆಯುಷ್ಯ ಅಕಾಲದಲ್ಲಿ ಮುಗಿಯುತ್ತಾ ಬಂದಿದ್ದರೂ ಆತನಿಗೆ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಮಿಂದೆದ್ದು ಕಣ್ಮುಚ್ಚುವ ಬಯಕೆ. ಭಾವನೆಗಳ ತೊಳಲಾಟದ ಈ ಕಥೆಯನ್ನು ಎಲ್ಲರೂ ಮೆಚ್ಚಿಕೊಳ್ಳುವ ಮನೋರಂಜನಾತ್ಮಕ ಚೌಕಟ್ಟಿಗೆ ಒಗ್ಗಿಸಿ ದೃಷ್ಯವಾಗಿಸುವಲ್ಲಿ ನಿರ್ದೇಶಕ ಕಿರಣ್ ಗೋವಿ ಯಶ ಕಂಡಿದ್ದಾರೆ.

ಹೆಚ್.ಸಿ ರಘುನಾಥ್ ನಿರ್ಮಾಣದ ಈ ಸಿನಿಮಾ ತ್ರಿಕೋನ ಪ್ರೇಮಕಥೆ ಹೊಂದಿದೆ.ಒಂದು ಮನಮಿಡಿಯುವ ಕಥಾ ಎಳೆಗೆ, ಎಲ್ಲಿಯೂ ಭಾವತೀವ್ರತೆ ಮುಸುಕಾಗದಂತೆ ಪಾತ್ರಗಳನ್ನ ಪೋಣಿಸಿ ದೃಷ್ಯ ಕಟ್ಟಲಾಗಿದೆ. ಆರಂಭ ಕಾಲದಿಂದಲೂ ಮಾಧುರ್ಯ ತುಂಬಿದ ಹಾಡುಗಳ ಮೂಲಕವೇ ಯಾರಿಗೆ ಯಾರುಂಟು ಗಮನ ಸೆಳೆದಿತ್ತಲ್ಲಾ? ಅದಕ್ಕೆ ಪೂರಕವಾದ ದೃಷ್ಯಗಳೇ ತೆರೆಯ ಮೇಲೆಯೂ ಬಿಚ್ಚಿಕೊಂಡು ಪ್ರೇಕ್ಷಕರು ಪುಳಕಗೊಳ್ಳುವಂತೆ ಮಾಡಿದೆ.

ಚಿತ್ರದ ನಾಯಕ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವಾತ. ಅಕಾಲಿಕವಾಗಿ ಎದುರು ನಿಂತ ಸಾವೇ ಕಂಗಾಲಾಗುವಂಥಾ ಜೀವನ ಪ್ರೇಮ ಹೊಂದಿರೋ ಈತ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇನ್ನೇನು ಕಡೇ ದಿನಗಳು ಹತ್ತಿರಾಗಿದೆ ಅಂತ ಗೊತ್ತಾದೇಟಿಗೆ ಹುಡುಗಿಯೊಬ್ಬಳನ್ನು ಪ್ರೀತಿಸಿ ಆ ಖುಷಿಯಲ್ಲಿಯೇ ನೆಮ್ಮದಿಯಾಗಿ ಎದ್ದು ನಡೆಯೋ ಆಸೆ ಆತನನ್ನು ಕಾಡುತ್ತೆ. ಈ ಹಾದಿಯಲ್ಲಿ ಎಂದಲ್ಲ, ಮೂರು ಹುಡುಗಿಯರು ನಾಯಕನಿಗೆ ಒಬ್ಬರಾದ ಮೇಲೊಬ್ಬರಂತೆ ಸಿಗುತ್ತಾರೆ. ಆದರೆ ಆ ಮೂರೂ ಹುಡುಗೀರು ಯಾವುದೋ ಅನಿವಾರ್ಯತೆಗೆ ಬಂಧಿಗಳಾಗಿರುತ್ತಾರೆ.

ಹಾಗಾದರೆ ನಾಯಕನನ್ನು ಸಾವಿನ ಸಮ್ಮುಖದಲ್ಲಿ ನಿಲ್ಲಿಸಿದ ಕಾಯಿಲೆ ಯಾವುದು? ಮೂವರು ನಾಯಕಿಯರಲ್ಲಿ ಯಾರು ಕಡೆಗೂ ಈತನಿಗೆ ಸಿಗುತ್ತಾರೆ? ಅಷ್ಟಕ್ಕೂ ನಾಯಕ ಪ್ರಾಣಾಪಾಯದಿಂದ ಪಾರಾಗುತ್ತಾನಾ? ಇಷ್ಟು ಕುತೂಹಲವಿಟ್ಟುಕೊಂಣಡು ನೋಡಿದರೆ ಯಾರಿಗೆ ಯಾರುಂಟು ಚಿತ್ರ ಬೇರೆಯದ್ದೇ ಆದ ಮೋಹಕ ಅನುಭವವೊಂದನ್ನು ಪ್ರತಿಯೊಬ್ಬರ ಮನಸುಗಳಿಗೂ ತುಂಬಿಸುತ್ತೆ.

ಒರಟ ಪ್ರಶಾಂತ್ ನಾಯಕನಾಗಿ ಬೇರೆಯದ್ದೇ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ಅವರದ್ದಿಲ್ಲಿ ಭಾವನಾತ್ಮಕ ಸನ್ನಿವೇಶಗಳೇ ತುಂಬಿಕೊಂಡಿರೋ ಪಾತ್ರ. ಇದನ್ನವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇನ್ನು ಸೀರಿಯಲ್‌ಗಳಲ್ಲಿ ಖ್ಯಾತರಾಗಿದ್ದ ಕೃತಿಕಾ ರವೀಂದ್ರ ಪಾಲಿಗಿದು ಮೊದಲ ಕಮರ್ಶಿಯಲ್ ಚಿತ್ರ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನಾಯಕಿಯಾಗಿ ಮತ್ತಷ್ಟು ಅವಕಾಶಗಳನ್ನು ಬಾಚಿಕೊಳ್ಳುವ ಸೂಚನೆ ನೀಡಿದ್ದಾರೆ. ಇನ್ನುಳಿದಂತೆ ಇನ್ನಿಬ್ಬರು ನಾಯಕಿಯರಾದ ಲೇಖಾ ಚಂದ್ರ ಮತ್ತು ಅದಿತಿ ರಾವ್ ಕೂಡಾ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರಾಕೇಶ್ ಅವರ ಕ್ಯಾಮೆರಾ ಕೈಚಳಕ ಇಡೀ ಚಿತ್ರದ ಒಟ್ಟಂದವನ್ನ ಹೆಚ್ಚಿಸಿದೆ. ಹಾಡುಗಳು ಈ ಸಿನಿಮಾದ ಶಕ್ತಿಯೆಂಬಂತೆ ಮೂಡಿ ಬಂದಿದೆ. ಈ ಮೂಲಕ ಕಿರಣ್ ಗೋವಿಯವರ ಮ್ಯೂಸಿಕಲ್ ಹಿಟ್ ಜರ್ನಿ ಅನೂಚಾನವಾಗಿ ಮುಂದುವರೆದಿದೆ.

cinibuzz ರೇಟಿಂಗ್ : *****/***1/2

Continue Reading

ಕಲರ್ ಸ್ಟ್ರೀಟ್

ಕದ್ದುಮುಚ್ಚಿ: ಪ್ರೀತಿಯ ಹಸಿರಲ್ಲಿ ಮೈಮರೆಸುವ ಚಿತ್ರ!

Published

on

ಸಂಬಂಧ ಸೂಕ್ಷ್ಮಗಳನ್ನು ಮೆಲುವಾಗಿ ಅನಾವರಣಗೊಳಿಸುತ್ತಾ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡಿದ್ದ ಚಿತ್ರ ಕದ್ದುಮುಚ್ಚಿ. ಮಂಜುನಾಥ್ ನಿರ್ಮಾಣದ ಈ ಸಿನಿಮಾ ಇದೀಗ ತೆರೆ ಕಂಡಿದೆ. ಮಲೆನಾಡಿನ ಹಸಿರ ಹೊದಿಕೆಯ ನಡುವೆಯೇ ಬಿಚ್ಚಿಕೊಳ್ಳೋ ಕಥೆಯೊಂದಿಗೆ ನವಿರಾಗಿಯೇ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ.

ಇಲ್ಲಿ ನಾಯಕ ಬೆಂಗಳೂರಿನ ಹುಡುಗ. ಆತನದ್ದು ಭಾರೀ ಶ್ರೀಮಂತಿಕೆಯ ಹಿನ್ನೆಲೆ. ಆದರೂ ಯಾವುದೇ ಕಸಿಸುರಿಲ್ಲದ ಪ್ರೀತಿ ಪಡೆಯೋ ವಿಚಾರದಲ್ಲಿ ಆತನಿಗೆ ಭೀಕರ ಬಡತನದ ಭಾವವೊಂದು ಬಿಟ್ಟೂ ಬಿಡದಂತೆ ಬಾಧಿಸಲಾರಂಭಿಸುತ್ತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ನಾಯಕನ ಪಯಣ ಸೀದಾ ಹೋಗಿ ತೀರ್ಥಹಳ್ಳಿ ಸೀಮೆಯ ಹಸಿರಿನ ನೆರಳಿನತ್ತ ಹೊರಳಿಕೊಳ್ಳುತ್ತೆ. ಹಾಗೆ ಬಂದ ನಾಯಕನಿಗೆ ಅಲ್ಲೊಬ್ಬಳು ದೇವತೆಯಂಥಾ ಹುಡುಗಿ ಎದುರಾಗ್ತಾಳೆ.

ಅಲ್ಲಿಂದಾಚೆಗೆ ಲವ್ವು, ಸುತ್ತಾಟ ಮತ್ತು ಮಾಮೂಲಿ ಫಾರ್ಮುಲಾಗಳೇ ಕೊಂಚ ಬೇರೆ ರೀತಿಯಲ್ಲಿ ಜೀಕಾಡುತ್ತವೆ. ಆದರೆ ಏಕಾಏಕಿ ಅಲ್ಲೊಂದು ಟ್ವಿಸ್ಟು. ನಾಯಕಿ ತುಂಬಾ ಇಷ್ಟಪಟ್ಟ ನಾಯಕನನ್ನು ಒಲ್ಲೆ ಅಂದು ಬಿಡುತ್ತಾಳೆ. ನಾಯಕನ ಪಾಲಿಗೆ ತಾನು ಪ್ರೀತಿಸಿದ ಹುಡುಗಿಯ ಮದುವೆಯ ಸಾರಥ್ಯ ವಹಿಸಿಕೊಳ್ಳೋ ದೌರ್ಭಾಗ್ಯ ಬಂದೊದಗುತ್ತದೆ. ಹಸಿರ ನಡುವೆ ಅರಳಿಕೊಂಡ ಪ್ರೀತಿ ನಡುವಲ್ಲಿಯೇ ಬಾಡಿ ಬೆಂಡಾಗಲು ಕಾರಣವೇನು? ಅದು ಮತ್ತೆ ಚಿಗುರಿಕೊಳ್ಳುತ್ತದಾ ಎಂಬುದು ಅಸಲೀ ಕುತೂಹಲ.

ವಸಂತ್ ರಾಜಾ ಒಟ್ಟಾರೆ ಚಿತ್ರವನ್ನು ಬೇರೆಯದ್ದೇ ಜಾಡಿನಲ್ಲಿ ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಕೆಲವೊಂದು ತಿರುವುಗಳಲ್ಲಿ ದೃಷ್ಯಗಳೂ ಬಾಡಿದಂತೆ ಅನ್ನಿಸಿದರೂ ಮತ್ತೆ ಹಸಿರಾಗುತ್ತದೆ. ನಾಯಕ ವಿಜಯ್ ಸೂರ್ಯ, ನಾಯಕಿ ಮೇಘಶ್ರೀ, ದೊಡ್ಡಣ್ಣ, ಸುಚೇಂದ್ರ ಪ್ರಸಾದ್ ಅವರನ್ನೊಳಗೊಂಡ ತಾರಾಗಳ ದೃಷ್ಯಗಳನ್ನೆಲ್ಲ ವರ್ಣಮಯವಾಗಿಸಿದೆ. ಮಾಮೂಲಿಯಾಗಿ ಕಳೆದು ಹೋಗ ಬಹುದಾದ ಕಥೆಯನ್ನ ವಿಭಿನ್ನವಾಗಿಸುವಲ್ಲಿಯೂ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.

ಹಂಸಲೇಖಾ ಅವರ ಸಂಗೀತ ಕದ್ದುಮುಚ್ಚಿ ಚಿತ್ರದ ನಿಜವಾದ ತಾಕತ್ತು. ಬಹು ಕಾಲದಿಂದ ಸಂಗೀತ ನಿರ್ದೇಶಕರಾಗಿ ಮರಳಿರೋ ಹಂಸಲೇಖಾರ ಸಂಗೀತದ ಪಟ್ಟುಗಳು ಬೆರಗಾಗಿಸುತ್ತವೆ. ಒಂದು ಸಲ ಸರಾಗವಾಗಿ ನೋಡ ಬಹುದಾದ, ಪ್ರೀತಿ, ಸಂಬಂಧ, ಭಾವನೆಗಳ ಜಗತ್ತಿನಲ್ಲಿ ವಿಹರಿಸುವಂತೆ ಮಾಡುವಲ್ಲಿ ಕದ್ದುಮುಚ್ಚಿ ಸಫಲವಾಗಿದೆ.

Trending