ಯುವಕ-ಯುವತಿಯರ ಪಲ್ಸ್ ಹಿಡಿದು ಸಿನಿಮಾ ಮಾಡೋದು ಇಂದ್ರಜಿತ್ ಲಂಕೇಶ್ ಅವರಂಥ ಕೆಲವೇ ನಿರ್ದೇಶಕರುಗಳಿಗೆ ಮಾತ್ರ ಸಾಧ್ಯ.. ತುಂಟಾಟ ಸಿನಿಮಾದಲ್ಲೇ ಹಾಡುಗಳ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿ, ಆ ಕಾಲದ ಪಡ್ಡೆ ಹುಡುಗರನ್ನು ರೋಮಾಂಚನ ಗೊಳಿಸಿದವರು ಇಂದ್ರಜಿತ್. ಈಗ ಕಾಲ ಬದಲಾಗಿದೆ. ಸೋಷಿಯಲ್ ಮೀಡಿಯಾ ಅಬ್ಬರಿಸುತ್ತಿದೆ. ಇವತ್ತಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನೇ ಗುರುತಿಸಿ, ಇವತ್ತಿನ ಯೂಥ್ಸ್ ಬಯಸುವ ಸರಕನ್ನು ಕೊಟ್ಟು ಒಳ್ಳೇ ಟೈಮನ್ನು ತಮ್ಮತಾಗಿಸಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್.
ಸ್ಟೈಲಿಷ್ ಡೈರೆಕ್ಟರ್ ಅಂತಲೇ ಕರೆಸಿಕೊಳ್ಳುವ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ಗಾಗಿ ನಿರ್ದೇಶಿಸಿರುವ ʻಗೌರಿʼ ಚಿತ್ರಕ್ಕಾಗಿ ಚಂದನ್ ಶೆಟ್ಟಿ ಸಂಗೀತ ನೀಡಿ ಹಾಡಿರುವ ʻಒಳ್ಳೆ ಟೈಮ್ ಬರತ್ತೆ ಒಳ್ಳೆ ಟೈಮ್ ಬರತ್ತೆ…ʼ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಯಾರ ಬಾಯಲ್ಲಿ ನೋಡಿದರೂ ಇದೇ ಹಾಡು ಗುನುಗುವಂತೆ ಮಾಡಿದೆ. ಪ್ರಚಾರಕ್ಕಾಗಿಯೇ ಪ್ರತ್ಯೇಕವಾಗಿ ಮತ್ತು ಅದ್ಧೂರಿಯಾಗಿ ಚಿತ್ರೀಕರಿಸಿರುವ ಹಾಡಿನ ಸ್ಟೆಪ್ಪುಗಳಂತೂ ಯುವಕರ ಮೈ-ಮನವನ್ನು ಕುಣಿಸುತ್ತಿದೆ. ವಿಜಯ್ ಈಶ್ವರ್ ಬರೆದಿರುವ ಈ ಹಾಡಿನ ಪ್ರತೀ ಸಾಲು ಕೂಡಾ ಯುವಕರ ನಾಡಿ ಮಿಡಿತವನ್ನು ಅರಿತು ಬರೆದಂತಿದೆ.
ʻಗೌರಿʼ ಸಿನಿಮಾದಲ್ಲಿ ಒಟ್ಟು ಎಂಟು ವೆರೈಟಿಯ ಹಾಡುಗಳಿವೆ. ಐದು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ,ಜಾವೇದ್ ಅಲಿ,ಅನನ್ಯ ಭಟ್, ನಿಹಾಲ್ ತೌರೋ ,ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಅವರ ಜೊತೆಗೆ ಸ್ವತಃ ಚಿತ್ರ ಹೀರೋ ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.
ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ʻಗೌರಿʼ ಸಿನಿಮಾದ ಒಂದು ಹಾಡೇ ಇಷ್ಟೊಂದು ಕ್ರೇಜ್ ಕ್ರಿಯೇಟ್ ಮಾಡಿ ವೈರಲ್ ಆಗಿದೆ. ಇನ್ನೂ ಉಳಿದ ಏಳು ಹಾಡುಗಳು ಹೇಗೆ ಅಬ್ಬರಿಸಲಿವೆ ಅನ್ನೋದು ಎಲ್ಲರ ಕುತೂಹಲವಾಗಿದೆ!
No Comment! Be the first one.