ಯಾವುದೇ ಕ್ಷೇತ್ರದಲ್ಲಿ ಎದ್ದು ನಿಲ್ಲಬೇಕೆಂದರೆ, ಎಲ್ಲ ಕಷ್ಟಗಳಿಗೂ ಎದೆಯೊಡ್ಡಿ ನಿಲ್ಲಬೇಕು. ಚಂದನ್ಗೆ ಸಮಸ್ಯೆಗಳಿರಬಹುದು. ಅದನ್ನೇ ನೆಪ ಮಾಡಿಕೊಂಡು ವ್ಯಕ್ತಿತ್ವ ಹಾಳು ಮಾಡಿಕೊಳ್ಳಬಾರದು ಅನ್ನೋದಷ್ಟೇ ಈ ಬರಹದ ಉದ್ದೇಶ
ಚಂದನ್ ಆಚಾರ್ ಎನ್ನುವ ನಟ ನೆನಪಿದ್ದಾನಾ? ಸರಿಯಾದ ಪ್ರಯತ್ನ ಮಾಡಿದ್ದರೆ ಈತ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಸ್ಥಾನ ಗಿಟ್ಟಿಸಿಕೊಳ್ಳಬಹುದಿತ್ತು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಜನ ಗುರುತಿಸುವಂತಾದವನು ಚಂದನ್. ಆ ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಮತ್ತು ಮಂಗಳವಾರ ರಜಾದಿನ ಎಂಬ ಎರಡು ಸಿನಿಮಾಗಳಲ್ಲಿ ಚೆಂದದ ನಟನೆ ಮಾಡಿದ್ದ ಚಂದನ್ ಆಚಾರ್.
ಪ್ರತಿಭೆಯ ಬಗ್ಗೆ ಈತನ ಬಗ್ಗೆ ದೂಸ್ರಾ ಮಾತಾಡುವಂತಿಲ್ಲ. ನೋಡೋಕೆ ಒಣಗಿಬಿದ್ದ ನುಗ್ಗೇಮರದ ಕೊಂಬೆಯಂತಿದ್ದರೂ ಎಂಥವರನ್ನೂ ಮರುಳು ಮಾಡಿಬಿಡಬಲ್ಲ ನಟನೆ ಈತನದ್ದು. ಆದರೆ ಇವನ ವ್ಯಕ್ತಿತ್ವ ಕೂಡಾ ನುಗ್ಗೆ ಟೊಂಗೆಯಂತೆ ಟೊಳ್ಳುಟೊಳ್ಳಾದಂತೆ ಕಾಣುತ್ತಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಎನ್ನುವ ಪಿಚ್ಚರು ತಯಾರಾಗೋ ಟೈಮಲ್ಲೇ ಇವನು ಪಕ್ಕಾ ʻಕಿರಿಕ್ ಪಾರ್ಟಿʼ ಅನ್ನೋದು ಗೊತ್ತಾಗಿತ್ತು. ಟ್ಯಾಲೆಂಟೆಂಡ್ ಫೆಲೋ ಅನ್ನೋ ಕಾರಣಕ್ಕೆ ಇವನಿಂದಾಗುವ ತರಲೆ ತಾಪತ್ರಯಗಳನ್ನೆಲ್ಲಾ ಸಿನಿಮಾ ಮಂದಿ ಹೊಟ್ಟೆಗಾಕಿಕೊಳ್ಳುತ್ತಿದ್ದರು. ದಿನೇದಿನೇ ಅದು ಅತಿಯಾದಾಗ ಒಂದಷ್ಟು ಜನ ಇವನ ಸಾವಾಸವೇ ಬೇಡ ಅಂತಾ ಜಾರಿಕೊಂಡಿದ್ದರು.
ಸದ್ಯಕ್ಕೆ ಚಂದನ್ ಬಗ್ಗೆ ಎಲ್ಲ ಕಡೆಯಿಂದ ಅಪಾದನೆಯೊಂದು ಕೇಳಿಬರುತ್ತಿದೆ. ಅದೇನೆಂದರೆ, ಈತ ಸಿಕ್ಕ ಸಿಕ್ಕವರ ಬಳಿಯೆಲ್ಲಾ ಕಾಸು ಕೇಳುತ್ತಾನಂತೆ. ಹೊಸದಾಗಿ ಪರಿಚಯಗೊಂಡವರಾದರೂ ಪರವಾಗಿಲ್ಲ, ʻಅರ್ಜೆಂಟಾಗಿ ಟೆನ್ ಥೌಸೆಂಡ್ ಸೆಂಡ್ ಮಾಡಿ ಪ್ಲೀಸ್. ಅಂತಾ ತರಾತುರಿಯಲ್ಲಿ ಮೆಸೇಜ್ ಕಳಿಸ್ತಾನಂತೆ. ಹೆಸರು ಮಾಡುತ್ತಿರುವ ನಟನಲ್ಲವಾ? ಅಂತಾ ಯಾರಾದರೂ ಕಾಸು ಕೊಟ್ಟರೆ ಅದನ್ನು ವಾಪಾಸು ಕೊಡೋ ಮಾತೇ ಆಡುವುದಿಲ್ಲವಂತೆ. ಬಾಯಿಬಿಟ್ಟು ಕೇಳಿದರೂ, ಈಗ ಕೊಡ್ತೀನಿ, ಆಗ ಕೊಡ್ತೀನಿ ಅಂತಾ ಟಕಾಯಿಸುತ್ತಾನಂತೆ. ಅದನ್ನೂ ಮೀರಿ ಬೈದು ಕೇಳಿದರೆ, ʻಏನ್ ಕಿತ್ಕೊತೀರ ಕಿತ್ಕೊಳಿʼ ಅಂತಾ ದೌಲತ್ತಿನ ಮಾತಾಡುತ್ತಾನಂತೆ. ಸಾಕಷ್ಟು ಜನರಿಂದ ಹತ್ತಿಪ್ಪತ್ತು ಸಾವಿರ ಈಸಿಕೊಂಡು ವಾಪಾಸು ಕೊಡದ ಚಂದನ್ ಬಗ್ಗೆ ಜನ ಅಸಹ್ಯ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟ-ಸುಖ ಎಲ್ಲರಿಗೂ ಇದ್ದಿದ್ದೇ. ಆದರೆ ಕಮಿಟ್ಮೆಂಟ್ ಇಲ್ಲ ಅಂದರೆ ಯಾರ ಬದುಕೂ ಏಳಿಗೆಯಾಗೋದಿಲ್ಲ. ದುಡ್ಡು ಬರತ್ತೆ, ಹೋಗತ್ತೆ. ಆದರೆ ವಿಶ್ವಾಸ ಉಳಿಸಿಕೊಳ್ಳೋದಷ್ಟೇ ಮುಖ್ಯ. ಅದನ್ನು ಈ ʻಕಡ್ಡಿ ಪೈಲ್ವಾನ್ʼ ಅರ್ಥಮಾಡಿಕೊಳ್ಳಬೇಕು.
ಅದೇನು ದುರಂತವೋ ಗೊತ್ತಿಲ್ಲ ಬಿಗ್ ಬಾಸು ಅನ್ನೋ ಕಿತ್ತೋದ ಶೋಗೆ ಹೋಗಿ ಬಂದವರ ಕತೆಯೆಲ್ಲಾ ಹೀಗೆ ಕಿತ್ತರಿದು ಕೂತಿದೆ!