ಆತ್ಮೀಯರೆ,
ಕಳೆದ ಆರು ತಿಂಗಳ ಈ ಪ್ರಯತ್ನ ಈಗ ಕೊನೆ ಘಟ್ಟ ತಲುಪಿದೆ. ಕನ್ನಡ ಚಿತ್ರೋದ್ಯಮಕ್ಕೆ 90 ಹರೆಯ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯು ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರ ತರುತ್ತಿದೆ. ಇದೇ ಭಾನುವಾರ ಡಿಸೆಂಬರ್ 15ಕ್ಕೆ ಈ ದ್ವಿಭಾಷಾ ಪುಸ್ತಕ ಲೋಕಾರ್ಪಣೆ. ಈ ಮೂಲಕ ಸಿನಿಮಾ ಪತ್ರಕರ್ತರು ಚಿತ್ರೋದ್ಯಮವನ್ನು ಸ್ಮರಿಸುತ್ತಿದ್ದೇವೆ.
ಈ ಕಾರ್ಯಕ್ರಮವು ಹೆಚ್ಚು ಅರ್ಥಪೂರ್ಣವಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಈ ಸಮಾರಂಭದಲ್ಲಿ ಕನ್ನಡ ಸಿನಿಮಾ ರಂಗದ ಗಣ್ಯರು ಮತ್ತು ತಾರೆಯರು ಭಾಗಿಯಾಗಲಿದ್ದಾರೆ. ಅಂದು ನಮ್ಮ ಜೊತೆ ನೀವು ಇರಿ. ಇದು ನಮ್ಮ ವೈಯಕ್ತಿಕ ಆಹ್ವಾನವೆಂದು ಸ್ವೀಕರಿಸಿ.
ಕಾರ್ಯಕ್ರಮ: “Landmarks of Sandalwood/ ಚಂದನವನದ ಚಿಲುಮೆಗಳು” ಪುಸ್ತಕ ಬಿಡುಗಡೆ
ದಿನಾಂಕ: ಡಿ.15, ಭಾನುವಾರ
ವೇಳೆ: ಬೆಳಗ್ಗೆ 10.30ಕ್ಕೆ
ಸ್ಥಳ: ಎಂ.ಎಂ.ಬಿ ಲೆಗಸ್ಸಿ, 4ನೇ ಮಹಡಿ, ಜಿಟಿ ವರ್ಲ್ಡ್ ಮಾಲ್, ರಾಜಾಜಿನಗರ, ಬೆಂಗಳೂರು
ಅಕಾಡಮಿ ಪರವಾಗಿ
ಎಸ್.ಶ್ಯಾಮ್ ಪ್ರಸಾದ್
ಡಾ. ಶರಣು ಹುಲ್ಲೂರು
No Comment! Be the first one.