2005ರಲ್ಲಿ 9ನೇ ತರಗತಿ ಓದುತ್ತಿದ್ದ ಲಕ್ಷ್ಮೀ ಅಗರ್ವಾಲ್ಗೆ 32 ವರ್ಷದ ನಯೀಮ್ ಎಂಬಾತ ಮದುವೆಯಾಗುವಂತೆ ಪೀಡಿಸಿದ್ದ. ಆ ಸಮಯದಲ್ಲಿ ಅದನ್ನು ಬಿಲ್ ಕುಲ್ ರಿಜೆಕ್ಟ್ ಮಾಡಿದ್ದರ ಪರಿಣಾಮವಾಗಿ ಆತ ಲಕ್ಷ್ಮಿಯ ಮುಖಕ್ಕೆ ಸ್ಟ್ರಾಂಗ್ ಆಸಿಡ್ ಎರಚಿದ್ದ. ಆ ದಾಳಿಯಿಂದಾಗಿ ಲಕ್ಷ್ಮೀ ಮುಖದ ಶೇ. 95 ಭಾಗ ಸುಟ್ಟು ಕರಕಲಾಗಿತ್ತು. ಮೂರು ತಿಂಗಳ ನಂತರ ಹಲವು ಸರ್ಜರಿಗಳನ್ನು ಮಾಡಿಸಿಕೊಂಡರೂ ಲಕ್ಷ್ಮೀ ಮುಖದ ವಿಕಾರತೆ ಹೋಗಲಿಲ್ಲ. ಆ ನಂತರ ಲಕ್ಷ್ಮೀ ಅಗರ್ ವಾಲ್ ಆಸಿಡ್ ದಾಳಿ ಮತ್ತು ಆಸಿಡ್ ಮಾರಾಟದ ವಿರುದ್ಧ ಅಭಿಯಾನವನ್ನೇ ಶುರು ಮಾಡಿದರು. ಇದೇ ಎಳೆಯನ್ನಿಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾವೊಂದು ಈಗಾಗಲೇ ಸೆಟ್ಟೇರಿದೆ. ಆ ಚಿತ್ರಕ್ಕೆ ಚಪಾಕ್ ಎಂದು ಟೈಟಲಿಟ್ಟಿದ್ದು, ಲಕ್ಷ್ಮೀ ಪಾತ್ರಧಾರಿಯಾಗಿ ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವುದು ವಿಶೇಷ. ದೀಪಿಕಾ ಪಡುಕೋಣೆಯ ಸಿನಿ ಜೀವನದಲ್ಲಿ ಇದೊಂದು ಸವಾಲಿನ ಹಾಗೂ ತೂಕದ ಪಾತ್ರವಾಗಿರೋದು ವಿಶೇಷವಾಗಿದೆ.
ದೀಪಿಕಾ ಕಿಸ್ಸಿಂಗ್ ಸೀನ್ ಆಗಿರಬಹುದು, ಕೆಲ ಶೂಟಿಂಗ್ ಸಂಬಂಧಿ ಪೋಟೋಗಳಾಗಿರಬಹುದು ಅವೆಲ್ಲವೂ ಲೀಕ್ ಆಗುವ ಮೂಲಕ ಚಪಾಕ್ ಶೂಟಿಂಗ್ ಸ್ಟೇಜ್ ನಲ್ಲಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗುತ್ತಲೇ ಇತ್ತು. ಸದ್ಯ ಸಿನಿಮಾ ಶೂಟಿಂಗ್ ಮುಗಿಸಿರುವ ಚಪಾಕ್ ಫೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದೆ. ಇನ್ನು ಮುಂದಿನ ಜನವರಿಗೆ ಸಿನಿಮಾ ರಿಲೀಸ್ ಸಾಧ್ಯತೆ ಇದೆ. ಈ ಹಿಂದೆ ಆಲಿಯಾ ಭಟ್ಗೆ ‘ರಾಝಿ’ ಸಿನಿಮಾ ನಿರ್ದೇಶನ ಮಾಡಿದ್ದ ಮೇಘನಾ ಗುಲ್ಜಾರ್, ‘ಚಪಾಕ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
No Comment! Be the first one.