ಈ ವರ್ಷದ ಕೊನೆಯ ಕ್ಷಣಗಳನ್ನು ನೆನಪಲ್ಲುಳಿಯುವಂತೆ ಮಾಡಲೆಂಬಂತೆ ಒಂದಷ್ಟು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಇಂಥಾ ಚಿತ್ರಗಳಲ್ಲಿ ಮಹೇಶ್ ರಾವಲ್ ನಿರ್ದೇಶನ ಮಾಡಿ ನಟಿಸಿರುವ ‘ಚರಂತಿ’ ಚಿತ್ರವೂ ಸೇರಿಕೊಂಡಿದೆ. ಎಲ್ಲರನ್ನೂ ಕಾಡುವ ಅದ್ಭುತ ಪ್ರೇಮ ಕಥನವೊಂದನ್ನು ಹೊಂದಿರೋ ಈ ಚಿತ್ರ ಈಗಾಗಲೇ ಟ್ರೈಲರ್ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದೆ.
ರಾವಲ್ ಸಿನಿ ಫೋಕಸ್ ಬ್ಯಾನರಿನಡಿ ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ಡಾ.ಪರಶುರಾಮ ರಾವಲ್. ಇವರ ಸಹೋದರ ಮಹೇಸ್ ರಾವಲ್ ಕಥೆ ಬರೆದು ನಿದರ್ಷೇಶನ ಮಾಡೋದರ ಜೊತೆಗೆ ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ಇದೇ ಡಿಸೆಂಬರ್ ಆರರಂದು ಚರಂತಿ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ.
ಮಹೇಶ್ ರಾವಲ್ ಮೂಲತಃ ಪ್ರಸಿದ್ಧ ಯಾತ್ರಸ್ಥಳವಾದ ಬನಹಟ್ಟಿಯವರು. ನಿರ್ದೇಶನ ಮತ್ತು ನಟನೆಯ ಕನಸು ಹೊತ್ತು ಬೆಂಗಳೂರು ಸೇರಿಕೊಂಡಿದ್ದ ಅವರು ಇಪ್ಪತ್ತು ವರ್ಷಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಚಿತ್ರರಂಗದ ಭಾಗವಾಗಿದ್ದಾರೆ. ಈ ವರೆಗೂ ಕೆಲ ಚಿತ್ರಗಳಲ್ಲಿ ನಟಿಸಿರುವ ಅವರ ಪಾಲಿಗೆ ಚರಂತಿ ಚಿತ್ರ ಮೊದಲ ಕೂಸು.
ಒಂದು ಚೆಂದದ ಚಿತ್ರ ಮಾಡಬೇಕೆಂಬ ಕನಸು ಹೊತ್ತು ಕೆಲಸ ಶುರು ಮಾಡಿದ್ದ ಮಹೇಶ್, ಪ್ರೇಮ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದರು. ಆದರೆ ಈ ಹಾದಿಯಲ್ಲಿ ಆರಂಭದಿಂದಲೇ ನಾನಾ ಎಡರು ತೊಡರುಗಳು ಎದುರಾಗಿದ್ದವು. ಆದರೂ ಎದೆಗುಂದದೇ ತಮ್ಮ ಸಹೋದರನ ಸಾಥ್ನೊಂದಿಗೆ ಚರಂತಿಯನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ಅಖಂಡ ಮೂರು ವರ್ಷ ಹಿಡಿದರೂ ಅಂದುಕೊಂಡಂತೆಯೇ ರೂಪಿಸಿದ ತೃಪ್ತಿ ಮಹೇಶ್ಗಿದೆ.
ಚರಂತಿ ಎಂಬ ಶೀರ್ಷಿಕೆಯೇ ವಿಶೇಷವಾಗಿದೆ. ಇದೊಂದು ಸಂಸ್ಕೃತ ಪದ. ಚಲನಶೀಲವಾದದ್ದೆಂಬುದು ಇದರ ಅರ್ಥ. ಅದಕ್ಕೆ ತಕ್ಕುದಾಗಿಯೇ ಜರ್ನಿ ಆಫ್ ಲವ್ ಎಂಬ ಟ್ಯಾಶಗ್ ಲೈನನ್ನೂ ಕೊಡಲಾಗಿದೆ. ಶೇಖಡಾ ಎಪ್ಪತ್ತರಷ್ಟು ಭಾಗ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಹೊಂದಿರೋ ಈ ಚಿತ್ರ ಆಧುನಿಕ ಅಮರ ಪ್ರೇಮವೊಂದನ್ನು ಭಿನ್ನವಾದ ದಾರಿಯಲ್ಲಿಯೇ ಹೇಳಿರೋ ಸುಳಿವು ಟ್ರೈಲರ್ ಮೂಲಕವೇ ಸಿಕ್ಕಿದೆ. ಮನವರ್ತಿ ನವಲಗುಂದ ಬರೆದಿರುವ, ಅವಿನಾಸ್ ಸಂಗೀತ ನೀಡಿರುವ ಐದು ಹಾಡುಗಳೂ ಜನರಿಗೆ ಇಷ್ಟವಾಗಿವೆ.
ಅದ್ದೂರಿ ತಾರಾಗಣ ಹೊಂದಿರೋ ಈ ಚಿತ್ರದಲ್ಲಿ ಅಲ್ಮಾಸ್ ಮತ್ತು ಮಧು ಎಂಬ ಹೊಸಾ ಹುಡುಗಿಯರು ನಾಯಕಿಯರಾಗಿ ನಟಿಸಿದ್ದಾರೆ. ಸಚಿನ್ ಕೂಡಾ ನಟನಾಗಿ ಪರಿಚಯವಾಗುತ್ತಿದ್ದಾನೆ. ಚರಂತಿ ಚಿತ್ರವನ್ನು ಮೂರು ವರ್ಷಗಳ ಕಾಲ ಎಲ್ಲ ಅಡೆತಡೆಗಳನ್ನೂ ಮೀರಿಕೊಂಡು ರೂಪಿಸಿರುವವರು ಮಹೇಶ್ ರಾವಲ್, ಈ ಚಿತ್ರದ ಮೂಲಕವೇ ಅವರು ನಿದೇಶಕರಾಗಿ, ನಾಯಕ ನಟರಾಗಿ ನೆಲೆ ನಿಲ್ಲುವ ಭರವಸೆಯನ್ನೂ ಹೊಂದಿದ್ದಾರೆ.
#
No Comment! Be the first one.