ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ, ಆದರೆ ಸೆಲೆಬ್ರೆಟಿಗಳು ಪ್ರೆಸೆಂಟ್ ಪಡೆಯುತ್ತಿರುವ ಸಂಭಾವನೆಯ ಕುರಿತು ಮಾತನಾಡದಿದ್ದರೂ, ತಾವು ಪಡೆದಿದ್ದ ಮೊದಲ ಸಂಭಾವನೆಯ ಕುರಿತಾದ ಮಾಹಿತಿಯನ್ನು ಒಂದಿಲ್ಲೊಂದು ಸಂದರ್ಭಗಳಲ್ಲಿ ಬಹಿರಂಗಗೊಳಿಸಿರುತ್ತಾರೆ. ಇದೀಗ ನಟಿ, ನಿರ್ಮಾಪಕಿ ಚಾರ್ಮಿ ಕೌರ್ ತಮ್ಮ ಸಿನಿಮಾ ಜರ್ನಿಯ ಮೊದಲ ಸಂಭಾವನೆಯನ್ನು ರಿವೀಲ್ ಮಾಡಿದ್ದಾರೆ.
ನಟಿ ಚಾರ್ಮಿ ಅವರು ತಾವು ನಟನೆಗಾಗಿ ತೆಗೆದುಕೊಂಡ ಮೊದಲ ಸಂಭಾವನೆ ಕೇವಲ 200 ರೂ.ಗಳು ಎಂಬುದನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ. 18 ವರ್ಷಗಳ ಹಿಂದೆ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ಚಾರ್ಮಿ ಕೌರ್ ಅವರು ಮುಂಬೈನ ಸುಪ್ರಸಿದ್ಧ ‘ಮೆಹಬೂಬ’ ಸ್ಟೂಡಿಯೋದಲ್ಲಿ ಜೂನಿಯರ್ ಕಲಾವಿದರಲ್ಲಿ ಒಬ್ಬರಾಗಿದ್ದರು. ಅಲ್ಲಿ 500 ಕ್ಕೂ ಹೆಚ್ಚು ಕಲಾವಿದರಿದ್ದು, ಚಾರ್ಮಿ ದಿನವೊಂದಕ್ಕೆ 200 ರುಪಾಯಿ ಪಡೆಯುತ್ತಿದ್ದರಂತೆ. ನಾಯಕಿಯಾಗಲು ನಿರ್ಧರಿಸಿದ ಮೇಲೆ ಆರಂಭದ ದಿನಗಳಲ್ಲಿ ಸಿನಿಮಾ ಸೋಲುವಿಕೆಯಿಂದ ನಿರಾಸೆಗೊಂಡಿದ್ದ ಚಾರ್ಮಿ ಛಯಬಿಡದೇ ಮುನ್ನುಗ್ಗಿ ಹಂತ ಹಂತವಾಗಿ ಯಶಸ್ಸು ಕಾಣುತ್ತಾ ಬಂದರಂತೆ. ಬರೋಬ್ಬರಿ 55 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಚಾರ್ಮಿ, ಬಾಲಿವುಡ್ ಸೇರಿದಂತೆ ಸೌತ್ ಇಂಡಿಯಾದ ಬಹುಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿರುವ ಚಾರ್ಮಿ ಇಸ್ಮಾರ್ಟ್ ಶಂಕರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
No Comment! Be the first one.