ಬಿಡುಗಡೆಗೆ ತಯಾರಾಗುತ್ತಿರುವ ಚೇಸ್ ಚಿತ್ರದ ಟೀಸರ್ (ನವೆಂಬರ್ 16) ನಾಳೆ ಬಿಡುಗಡೆಯಾಗುತ್ತಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಈ ಚಿತ್ರ ತಿಂಗಳಲ್ಲಿ ಸೆನ್ಸಾರ್ ಅಂಗಳಕ್ಕೂ ತೆರಳಲಿದೆ!
ಬೆಂಗಳೂರು, ಮಂಗಳೂರು, ಉಡುಪಿ, ಹಿಮಾಚಲ ಪ್ರದೇಶ, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿ ಕೊಂಡರೆ ತುಳು ಚಿತ್ರರಂಗದ ಪ್ರಖ್ಯಾತ ಹಾಸ್ಯನಟ ಅರವಿಂದ್ ಬೋಳಾರ್ ಚೇಸ್ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಮಾಕ್ಸ್ ಎನ್ನುವ ನಾಯಿ ಕೂಡ ಈ ಚಿತ್ರದಲ್ಲಿ ನಟಿಸಿದ್ದು ಇದನ್ನ ಭಾರತದ ಏಕೈಕ ಶ್ವಾನ ಮನಶಾಸ್ತ್ರಜ್ಞ ಅಮೃತ್ ಶ್ರೀಧರ್ ಹಿರಣ್ಯ ತರಬೇತು ಗೊಳಿಸಿರುವುದು ಮತ್ತೊಂದು ವಿಶೇಷ. ವಿಭಿನ್ನ ಕಥೆಯನ್ನ ಪಕ್ಕಾ ಕಮರ್ಷಿಯಲ್ ರೀತಿಯಲ್ಲಿ ತೆರೆ ಮೇಲೆ ತಂದಿದ್ದು ಚಿತ್ರದಲ್ಲಿ ಆಕ್ಷನ್, ರೋಮಾನ್ಸ್, ಕಾಮಿಡಿ, ಸಸ್ಪೆನ್ಸ್ ಜೊತೆಗೆ ಒಳ್ಳೆಯ ಸಂದೇಶ ಕೂಡ ಕೊಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು ಯಾವುದೇ ವರ್ಗದ ಪ್ರೇಕ್ಷಕರು ಕೂಡ ಕುಟುಂಬ ಸಮೇತರಾಗಿ ನೋಡಬಹುದಾಗಿದೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಚೇಸ್ ಚಿತ್ರಕ್ಕೆ ಮಂಗಳೂರಿನವರೇ ಆದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು ಹಾಗೂ ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಅತ್ಯುತ್ತಮ ಗುಣಮಟ್ಟದ ಪೋಸ್ಟರ್ ಡಿಸೈನುಗಳು ಚೇಜ಼್ ಬಗ್ಗೆ ನಿರೀಕ್ಷೆ ಗರಿಗೆದರುವಂತೆ ಮಾಡಿತ್ತು. ಈಗ ಬರಲಿರುವ ಟೀಸರ್ ಹೇಗಿರುತ್ತದೆ ಅಂತಾ ನೋಡಬೇಕು!
No Comment! Be the first one.