‘ನನಗೆ ನಿಜ ಜೀವನದಲ್ಲಿ ನಾಯಿ ಕಂಡರೆ ಭಯ. ಈ ಸಿನಿಮಾದಲ್ಲಿ ಅದನ್ನು ಮೀರಿ ಪಾತ್ರ ನಿರ್ವಹಿಸಬೇಕಿತ್ತು. ಚಿತ್ರದಲ್ಲಿ ನಾಯಿ ನನ್ನ ಬೆಸ್ಟ್ ಫ್ರೆಂಡ್. ನಮ್ಮಿಬ್ಬರದ್ದು ಹಲವು ವರ್ಷಗಳ ಒಡನಾಟ ಎನ್ನುವಂತೆ ಪಾತ್ರ ನಿರ್ವಹಿಸಬೇಕಿತ್ತು.

ಚೇಜ಼್  ಚಿತ್ರದಲ್ಲಿ ರಾಧಿಕಾ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇ ಪಾತ್ರ ಮತ್ತು ಕಥೆಯನ್ನು ಕೇಳಿ ಎನ್ನುತ್ತಾರೆ. ‘ಎರಡು ಮುಖ್ಯ ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. ಇಬ್ಬರೂ ಅಪರಿಚಿತರು. ಒಂದು ಘಟನೆಯಿಂದ ಅವರ ಜೀವನದಲ್ಲಿ ಆಗುವ ಪರಿಣಾಮಗಳು ಮತ್ತು ಅದರಿಂದ ಹೇಗೆ ಆ ಕೇಸ್‌ ನಲ್ಲಿ ಇನ್ವಾಲ್ವ್ ಆಗುತ್ತಾರೆ ಎನ್ನುವುದು ಕಥೆ. ನಾನು ಈ ಚಿತ್ರದಲ್ಲಿ ಪೊಲೀಸ್ ಟ್ರೈನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದುವರೆಗೂ ಹೋಮ್ಲಿ ಪಾತ್ರಗಳಲ್ಲಿ ನನ್ನನ್ನು ನೋಡಿದವರಿಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಏಕೆಂದರೆ, ಇದರಲ್ಲಿ ನಾನು ರಗ್ಗಡ್‌ ಆಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ರಾಧಿಕಾ ನಾರಾಯಣ್.

ಚಿತ್ರದಲ್ಲಿ ನಟಿಸಿದ ತಮ್ಮ ಅನುಭವವನ್ನು ಹಂಚಿಕೊಳ್ಳುವ ಅವರು, ‘ನನಗೆ ನಿಜ ಜೀವನದಲ್ಲಿ ನಾಯಿ ಕಂಡರೆ ಭಯ. ಈ ಸಿನಿಮಾದಲ್ಲಿ ಅದನ್ನು ಮೀರಿ ಪಾತ್ರ ನಿರ್ವಹಿಸಬೇಕಿತ್ತು. ಚಿತ್ರದಲ್ಲಿ ನಾಯಿ ನನ್ನ ಬೆಸ್ಟ್ ಫ್ರೆಂಡ್. ನಮ್ಮಿಬ್ಬರದ್ದು ಹಲವು ವರ್ಷಗಳ ಒಡನಾಟ ಎನ್ನುವಂತೆ ಪಾತ್ರ ನಿರ್ವಹಿಸಬೇಕಿತ್ತು. ಅದಕ್ಕೆ ಪೂರಕವಾಗಿ ಟ್ರೈನಿಂಗ್ ಕೊಟ್ಟಿದ್ದರು. ನಾಯಿ ಜೊತೆಗೆ ಎರಡು ದಿನಗಳ ಕಾಲ ಟ್ರೈನಿಂಗ್. ಆದರೂ ಕೆಲವೊಮ್ಮೆ ಭಯ ಆಗುತ್ತಿತ್ತು. ಏಕೆಂದರೆ, ನನಗೆ ನಾಯಿಯ ಹಲ್ಲುಗಳನ್ನು ನೋಡಿದರೆ ಭಯ. ಆ ಭಯ ಇದ್ದರೂ, ಮುಖದಲ್ಲಿ ಸ್ಮೈಲ್ ಇಟ್ಟುಕೊಂಡು ನಟಿಸಬೇಕು. ಅದನ್ನು ಈ ಚಿತ್ರದಲ್ಲಿ ಕಲಿತೆ’ ಎನ್ನುತ್ತಾರೆ ಅವರು.

ರಾಧಿಕಾ ಅಲ್ಲದೆ, ಈ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ. ಪ್ರಮುಖವಾಗಿ, ರಾಜೇಶ್ ನಟರಂಗ ಇಲ್ಲಿ ವೈದ್ಯರಾಗಿ ನಟಿಸಿದ್ದಾರೆ. ‘ಈ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಬಗ್ಗೆ ಗಮನ ಹರಿಸಲಾಗಿದೆ. ಚಿತ್ರದಲ್ಲಿ ಎಲ್ಲ ಕಮರ್ಷಿಯಲ್ ಅಂಶಗಳಿವೆ. ಬಹಳ ಮುಖ್ಯವಾದ ಪಾತ್ರ ಇದು. ನನ್ನ ಕೆರಿಯರ್ನಲ್ಲೇ ಇದು ಬೇರೆ ತರಹದ ಪಾತ್ರ ಇದು’  ಎನ್ನುತ್ತಾರೆ ರಾಜೇಶ್ ನಟರಂಗ.

ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ನರಸಿಂಹರಾಜು ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೋವಿಡ್ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಚಿತ್ರ ನೋಡುವ ಪರಿಪಾಠ ಬದಲಾಗಿದೆ. ಆದರೆ, ನಿರ್ದೇಶಕ ವಿಲೋಕ್ ಶೆಟ್ಟಿ ಬಹಳ ಮುಂದಾಲೋಚನೆಯಿಂದ ಚಿತ್ರ ಮಾಡಿದ್ದಾರೆ. ಚಿತ್ರ ಸ್ವಲ್ಪ ನಿಧಾನವಾದರೂ, ಇವತ್ತಿಗೆ ಸರಿಯಾಗಿದೆ. ಇದೊಂದು ವಿಭಿನ್ನ ಪ್ರಯತ್ನ’ ಎನ್ನುತ್ತಾರೆ ಅವಿನಾಶ್.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ಬೆಂಕಿ’ಯಲ್ಲಿ ಅಣ್ಣನ ಇನ್ನೊಂದು ಮುಖ

Previous article

ಗೆಲುವಿನ ಖುಷಿ ʻಗಿರ್ಕಿʼ ಹೊಡೆಸುತ್ತಿದೆ!

Next article

You may also like

Comments

Comments are closed.