ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ರಾಜ್ ಅವರ ನಿರ್ಮಾಣದ ಆಸ್ಕರ್ ಕೃಷ್ಣ ನಿರ್ದೇಶನದ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ಹಾಡುಗಳ ಧ್ವನಿಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಚಿತ್ರನಟಿ ಪ್ರೇಮಾ, ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿಸಿದರು, ಭಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಕೃಷ್ಣ ನನ್ನ ನಿರ್ದೇಶನದ ಐದನೇ ಚಿತ್ರವಿದು. ಆಸ್ಕರ್, ಮಿಸ್ ಮಲ್ಲಿಗೆ, ಮೊನಿಕಾ ಈಸ್ ಮಿಸ್ಸಿಂಗ್ ಹಾಗೂ ಮನಸಿನ ಮರೆಯಲಿ ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲಬಾರಿಗೆ ಪ್ರಮುಖ ಪಾತ್ರವೊಂದನ್ನು ಸಹ ನಿರ್ವಹಿಸಿದ್ದೇನೆ. ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್ಷಿಪ್ ಮದ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಇಂಟರ್ನಲ್ ಲೈಫ್, ಸೊಷಿಯಲ್ ಲೈಫ್ ಹೇಗೆ ಎಕ್ಸ್ಪ್ಯಾಂಡ್ ಆಗುತ್ತಾ ಹೋಗುತ್ತೆ, ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಈ ಥರ ಕಥೆ ಸಾಗುತ್ತದೆ.
ಲೋಕೇಂದ್ರಸೂರ್ಯ ಅವರ ಅಟ್ಟಯ್ಯ ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟು ಅವರನ್ನು ಕರೆಸಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್ವಾಲ್ವ್ ಆದರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ರೆಡ್ & ವೈಟ್ ಸವೆನ್ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸವೆನ್ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿಯಾದ ಗೌರಿ ನಾಯರ್ ಅವರು ನಮ್ಮ ಚಿತ್ರದ ನಾಯಕಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ನಮ್ಮ ಚಿತ್ರದಲ್ಲಿ ಅಭಿನಯಿಸಿದ ನಂತರ ಅವರಿಗೆ ಒಂದೆರಡು ಚಿತ್ರಗಳು ಸಿಕ್ಕಿವೆ. ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು. ಕುಣಿಗಲ್, ತುಮಕುರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲಾಗಿದೆ.
ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳು ರಿಲೀಸ್ ಮಾಡುವ ಯೋಚನೆಯಿದೆ ಎಂದು ಹೇಳಿದರು. ಮತ್ತೊಬ್ಬ ನಟ ಲೋಕೇಂದ್ರ ಸೂರ್ಯ ಮಾತನಾಡಿ ಚಿತ್ರದಲ್ಲಿ ನಾನು ಗಡಾರಿ ಎನ್ನುವ ಪಾತ್ರದಲ್ಲಿದ್ದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು. ನಿರ್ಮಾಪಕ ಸೆವೆನ್ ರಾಜ್ ಮಾತನಾಡುತ್ತ ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತ, ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟು ಸಾಹಸ ನಿರ್ದೇಶನವಿದೆ.