ವಿಶಿಷ್ಟವಾದ ಟೈಟಲ್, ಪೋಸ್ಟರ್ ಸೇರಿದಂತೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಪ್ರೇಕ್ಷಕರ ಗಮನ ಸೆಳೆದಿರೋದಕ್ಕೆ ಕಾರಣ ಹಲವಾರಿದೆ. ಇದೀಗ ಹಾಡುಗಳೂ ಕೂಡಾ ಆ ಪಟ್ಟಿ ಸೇರಿಕೊಂಡಿವೆ. ಈ ಹಿಂದೆ ಬಿಡುಗಡೆಯಾಗಿದ್ದ ಊರ್ವಶಿ ಅವಳು ಎಂಬ ಹಾಡಂತೂ ಸೂಪರ್ ಹಿಟ್ಟಾಗಿದೆ. ಇದೀಗ ಮತ್ತೊಂದು ವೀಡಿಯೋ ಸಾಂಗ್ ಪ್ರೇಕ್ಷಕರನ್ನೆಲ್ಲ ಮೆಲುವಾಗಿ ಕಾಡಲಾರಂಭಿಸಿದೆ.
ಸುಪ್ರಭಾತ ಮರೆತೋಯ್ತು ಅಂತ ಶುರುವಾಗೋ ಈ ಮೆಲೋಡಿ ಸಾಂಗಿನಲ್ಲಿ ಚಂದನ್ ಆಚಾರ್ಯ ಮತ್ತು ಸಂಜನಾ ಆನಂದ್ ಜೋಡಿ ಮೋಹಕವಾಗಿ ನಟಿಸಿದೆ. ಆರವ್ ಸಂಗೀತ ನೀಡಿರೋ ಈ ಹಾಡು ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಪಡೆಯುತ್ತಾ, ಸಾಮಾಜಿಕ ಜಾಲತಾಣಗಳಲ್ಲಿಯೂ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಆರವ್ ರಿಶಿಕ್ ಕೆಮಿಸ್ಟ್ರಿ ಆಫ್ ಕರಿಯಪ್ಪನ ಹಾಡುಗಳ ಮೂಲಕ ಹೊಸಾ ಅಲೆಯನ್ನೆ ಸೃಷ್ಟಿಸಿದ್ದಾರೆ. ನಿರ್ದೇಶಕ ಕುಮಾರ್ ಅವರ ಕಥಾ ಕಲ್ಪನೆಗೆ ತಕ್ಕುದಾಗಿ ಹಾಡುಗಳನ್ನ ರೂಪಿಸಿದ್ದಾರೆ. ಈ ಸುಪ್ರಭಾತ ಮರೆತೋಯ್ತು ಹಾಡನ್ನೂ ಕೂಡಾ ಆರವ್ ಅದರಂತೆಯೇ ರೂಪಿಸಿದ್ದಾರೆ. ವಾಸುಕಿ ವೈಭವ್ ಮತ್ತು ಸಂಗೀತಾ ರವೀಂದ್ರನಾಥ್ ಹಾಡಿರೋ ಈ ಹಾಡಿಗೆ ಕುಮಾಶರ್ ಅವರೇ ಸಾಹಿತ್ಯ ಒದಗಿಸಿದ್ದಾರೆ.
https://www.youtube.com/watch?v=XjMmHUJnaow&feature=youtu.be #
No Comment! Be the first one.