ಚಿನ್ನೇಗೌಡರ ದಾಂಪತ್ಯಕ್ಕೆ 50ರ ಹರೆಯ!

ನಿರ್ಮಾಪಕ ಮತ್ತು ವಿತರಕರಾಗಿರುವ ಚಿನ್ನೇಗೌಡರ ದಾಂಪತ್ಯಕ್ಕೆ 50 ವರ್ಷ ತುಂಬಿದೆ. ಹೌದು ಚಿನ್ನೇಗೌಡರು ಜಯಮ್ಮನವರನ್ನು ವಿವಾಹವಾಗಿ 50 ವರ್ಷ ಪೂರ್ಣಗೊಳಿಸಿದ್ದು, ಚಿನ್ನೇಗೌಡರ ಮನೆಯೆಲ್ಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾರಾಜಿಸುತ್ತಿದೆ. ಇನ್ನು ಜಯಮ್ಮ ಅವರಿಗೆ ಮತ್ತೊಮ್ಮೆ ತಾಳಿ ಕಟ್ಟಿಸುವ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಗಿದೆ ಎನ್ನಲಾಗುತ್ತಿದೆ.  ಕಾರ್ಯಕ್ರಮದಲ್ಲಿ ಚಿನ್ನಗೌಡರವರ ಪುತ್ರ ವಿಜಯ ರಾಘವೇಂದ್ರ, ಶ್ರೀಮುರಳಿ, ಇಬ್ಬರು ಸೊಸೆಯರು, ಮೊಮ್ಮಕ್ಕಳು ಇಡೀ ಫ್ಯಾಮಿಲಿ ಭಾಗಿಯಾಗಿದೆ. ನಟ ಶ್ರೀ ಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಪ ಅಮ್ಮನ ಸಂಭ್ರಮದ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ನನ್ನ ಸುಂದರ ತಂದೆ, ತಾಯಿಯ ಐವತ್ತನೇ ವಿವಾಹ ವಾರ್ಷಿಕೋತ್ಸವ. ಐವತ್ತು ವರ್ಷದ ನಂತರ ಮತ್ತೆ ಅಪ್ಪ ಅಮ್ಮನಿಗೆ ಮೂರು ಗಂಟು ಹಾಕಿದ್ದಾರೆ. ಅವರ ಜೀವನಕ್ಕೆ ಖುಷಿಯನ್ನು ಬಯಸುತ್ತಿದ್ದೆವೆ.” ಎಂದು ತಂದೆ ತಾಯಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಅಂದ ಹಾಗೆ, ಚಿನ್ನೆಗೌಡ ಅವರು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ. ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.


Posted

in

by

Tags:

Comments

Leave a Reply