ಇದ್ದಕ್ಕಿದ್ದಂತೆ ಮೆಗಾಸ್ಟಾರ್ ಕೇಶಮುಂಡನ ಮಾಡಿಸಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆಘಾತಗೊಂಡಿದ್ದರು. ಸ್ವತಃ ಚಿರು ಟ್ವೀಟ್ ಮಾಡಿದ ಮೇಲಷ್ಟೇ ಗೊತ್ತಾಗಿದ್ದು ಇದು ಬೇರೊಂದು ಸಿನಿಮಾದ ಲುಕ್ ಟೆಸ್ಟ್ ಗಾಗಿ ಮಾಡಿದ ಪ್ರಾಸ್ತೆಟಿಕ್ ಮೇಕಪ್ ಎಂದು. ಎಷ್ಟೋ ಜನ ನಿಜಕ್ಕೂ ಚಿರು ತಲೆ ಬೋಳಿಸಿಕೊಂಡಿದ್ದಾರೆ ಎಂದೇ ನಂಬಿದ್ದಾರೆ.
ಎಲ್ಲಾ ಪ್ಲಾನಿನ ಪ್ರಕಾರವೇ ಆದರೆ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಚಿತ್ರದಲ್ಲಿ ನಟಿಸಬೇಕು. ಮಿರ್ಚಿ, ಶ್ರೀಂಮಂತುಡು, ಭರತ್ ಅನ್ನೇ ನೇನು ಥರದ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಕೊರಟಾಲ ಶಿವ ಆಚಾರ್ಯ ಸಿನಿಮಾದ ಅಫಿಷಿಯಲ್ ಪೋಸ್ಟರನ್ನು ಚಿರು ಬರ್ತಡೇ ದಿನ ರಿಲೀಸ್ ಮಾಡಿದ್ದರು. ಜನ ಚಿರಂಜೀವಿಯನ್ನು ಅಚಾರ್ಯನ ಲುಕ್ಕಿನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇದ್ದಕ್ಕಿದ್ದಂತೆ ಮೆಗಾಸ್ಟಾರ್ ಕೇಶಮುಂಡನ ಮಾಡಿಸಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆಘಾತಗೊಂಡಿದ್ದರು. ಸ್ವತಃ ಚಿರು ಟ್ವೀಟ್ ಮಾಡಿದ ಮೇಲಷ್ಟೇ ಗೊತ್ತಾಗಿದ್ದು ಇದು ಬೇರೊಂದು ಸಿನಿಮಾದ ಲುಕ್ ಟೆಸ್ಟ್ ಗಾಗಿ ಮಾಡಿದ ಪ್ರಾಸ್ತೆಟಿಕ್ ಮೇಕಪ್ ಎಂದು. ಎಷ್ಟೋ ಜನ ನಿಜಕ್ಕೂ ಚಿರು ತಲೆ ಬೋಳಿಸಿಕೊಂಡಿದ್ದಾರೆ ಎಂದೇ ನಂಬಿದ್ದಾರೆ. ತಲೆ ಮೇಲೆ ಹೊಡೆದಂತೆ ಮೇಕಪ್ ಮೂಲಕವೇ ತಲೆಯನ್ನು ಬೋಳಾಗಿಸಿದ ಮೇಕಪ್ ಕಲಾವಿದರು ಮತ್ತು ತಂತ್ರಜ್ಞರಿಗೆ ಚಿರು ನನ್ಮನ್ನು ಅರ್ಬನ್ ಮಾಂಕ್ ಆಗಿಸಿದವರಿಗೆ ಥ್ಯಾಂಕ್ಸ್ ಎಂದಿದ್ದಾರೆ.
ಅಂದಹಾಗೆ, ಆಚಾರ್ಯ ಆರಂಭಕ್ಕೂ ಮುನ್ನ ಸಿಕ್ಕಿರುವ ಗ್ಯಾಪಿನಲ್ಲಿ ತಮಿಳಿನ ಹಿಟ್ ಸಿನಿಮಾ ವೇದಾಳಂನ ರಿಮೇಕ್ ನಲ್ಲಿ ಚಿರು ಅಭಿನಯಿಸುತ್ತಿದ್ದಾರೆ. ಅಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರವನ್ನಿಲ್ಲಿ ಮೆಗಾ ಸ್ಟಾರ್ ನಿರ್ವಹಿಸಲಿದ್ದಾರೆ. ಆ ಚಿತ್ರದಲ್ಲಿ ಎರಡು ಗೆಟಪ್ಪಿನಲ್ಲಿ ಚಿರು ಕಾಣಿಸಿಕೊಳ್ಳಲಿದ್ದಾರೆ. ಅದರ ಒಂದು ಅವತಾರ ಈ ಬೋಳು ತಲೆಯದ್ದು…
No Comment! Be the first one.