ಯಾವುದಾದರೊಂದು ಹಾರರ್ ಸಿನಿಮಾ ಹಿಟ್ ಆಯಿತೆಂದರೆ ಅಂತಹುದೇ ಜಾನರ್ ನ ಬಹಳಷ್ಟು ಸಿನಿಮಾಗಳು ತಯಾರಾಗಿ, ರಿಲೀಸ್ ಆಗಿ ತೋಪು ಪಟ್ಟಿಗೆ ಸೇರೋದು ಕಾಮನ್ನು. ಆದರೆ ಗಟ್ಟಿ ಕಥೆಯನ್ನು ಹೊಂದಿರುವ, ಪ್ರೇಕ್ಷಕರಿಗೆ ಅಕ್ಷರಶಃ ಭಯ ಹುಟ್ಟಿಸಬಲ್ಲ ಹಾರರ್ ಸಿನಿಮಾಗಳಷ್ಟೇ ಸಿನಿಮಾ ನೋಡಿ ಹೊರಬಂದರೂ ಮನಸ್ಸಿನಲ್ಲಿ ಉಳಿಯುವಂತದ್ದು. ಈಗೀಗ ಅಂತಹ ಸಿನಿಮಾಗಳು ಬರುವುದು ತೀರ ಅಪರೂಪ. ಹೀಗಿರುವಾಗ ಟ್ರೇಲರ್ ಮೂಲಕವೇ ನೋಡುಗರ ಎದೆ ಬಡಿತ ಏರಿಸುವ ಗುಮ್ಮದ ಸಿನಿಮಾ ಚಿತ್ರಕಥಾ ರಿಲೀಸ್ ಗೆ ರೆಡಿಯಾಗಿದೆ.

ಚಿತ್ರ ಬರೆಯುವ ಕಲಾವಿದನ ಬದುಕಿನ ಸುತ್ತವೇ ಈ ಸಿನಿಮಾ ಸಾಗಲಿದ್ದು, ಬೆಳಕು ಮತ್ತು ಕತ್ತಲ ನಡುವೆ ದಿಗಿಲು ಹುಟ್ಟಿಸುವ ಸನ್ನಿವೇಶಗಳು, ಅದರೊಳಗೊಂದು ಕಥೆ, ನೋವು, ಕರಾಳತೆ, ಅನಿರೀಕ್ಷಿತ ತಿರುವುಗಳು, ಅಂತಿಮವಾಗಿ ನೋಡುಗನು ಗೆಸ್ ಮಾಡಲಾಗದ ಕ್ಲೈಮ್ಯಾಕ್ಸ್ ಇತ್ಯಾದಿ ಪ್ರಧಾನ ಅಂಶಗಳೇ ತುಂಬಿರುವ ಚಿತ್ರಕಥಾ ನೋಡುಗರಿಗೆ ಹೊಸದೊಂದು ಅನುಭವವನ್ನು ನೀಡಬಲ್ಲದು ಎಂಬುದು ನಿರ್ದೇಶಕ ಯಶಸ್ವಿ ಬಾಲಾದಿತ್ಯ ಅಂಬೋಣ. ಚಿತ್ರಕಥಾ ಸಿನಿಮಾದಲ್ಲಿ ಸುಧಾರಾಣಿ , ದಿಲೀಪ್ ರಾಜ್ , ಸುಜೀತ್ ರಾಥೋಡ್ , ತಬಲ ನಾಣಿ , ಬಿ . ಜಯಶ್ರೀ ಹಾಗು ಅನುಶಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ..  ಉಳಿದಂತೆ ತನ್ವಿಕ್ ಕ್ಯಾಮೆರಾ ವರ್ಕ್, ಚೇತನ್ ಕುಮಾರ್ ಮ್ಯೂಸಿಕ್  ಚಿತ್ರಕ್ಕಿದೆ. ಚಿತ್ರಕಥಾ ಜುಲೈ 12ಕ್ಕೆ ಬಿಡುಗಡೆಯಾಗಲಿದೆ.

CG ARUN

ಜಿಷ್ಣು ಹೊಸ ಪೋಸ್ಟರ್ ರಿಲೀಸ್!

Previous article

ಸಾಹೋ ಐಟಂ ಸಾಂಗ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್!

Next article

You may also like

Comments

Leave a reply

Your email address will not be published. Required fields are marked *